ಬೆಂಗಳೂರು, ಏ.13- ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ಅವರಿಗೆ ಆಸೆ, ಆಮಿಷವೊಡ್ಡಿ ಲವ್ ಜಿಹಾದ್ ಮಾಡುತ್ತಿದ್ದಾನೆ ಎಂದು ಮುಸ್ತಫಾ ಎಂಬಾತನ ವಿರುದ್ಧ ಕೊಪ್ಪಳ ನಗರ ಠಾಣೆಗೆ ದೂರು ನೀಡಲಾಗಿದೆ. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಸಂಗಮೇಶ ಹಿರೇಮಠ ಎಂಬುವವರು ಮುಸ್ತಫಾ ವಿರುದ್ಧ ತನಿಖೆ ನಡೆಸು ವಂತೆ ದೂರಿನಲ್ಲಿ ತಿಳಿಸಿದ್ದಾರೆ. ಕೊಪ್ಪಳದ ಜಿಲ್ಲಾಸ್ಪತ್ರೆ ಆವರಣ ದಲ್ಲಿ ವಿದ್ಯಾರ್ಥಿನಿಯೊಂದಿಗೆ ಮುಸ್ತಫಾ ಅಸಭ್ಯವಾಗಿ ವರ್ತಿ ಸಿದ್ದು, ಆತನ ಎರಡು ಮೊಬೈಲ್‌ಗಳನ್ನು ಪರಿಶೀಲಿಸಿದಾಗ ಯುವತಿಯರ ಫೋಟೋಗಳು, ವಿಡಿಯೋಗಳು ಕಂಡು ಬಂದಿವೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರೀತಿ, ಪ್ರೇಮದ ಹೆಸರಿನಲ್ಲಿ ಹಿಂದೂ ಯುವತಿಯರನ್ನೇ ಗುರಿಯಾಗಿಸಿಕೊಂಡು ಅವರಿಗೆ ನಂಬಿಕೆ ಬರುವಂತೆ ಮಾಡಿ ಮಾದಕ ವಸ್ತುಗಳನ್ನು ನೀಡಿ ಅಶ್ಲೀಲ ವಿಡಿಯೋಗಳನ್ನು ಮಾಡಿ ಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇದರ ಹಿಂದೆ ದೊಡ್ಡ ಜಾಲವೇ ಇರುವ ಅನುಮಾನವಿದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. ಈ ನಡುವೆ. ಯುವತಿಯೊಬ್ಬಳು ದೂರು ನೀಡಿದ್ದು, ನಾನು ಮುಸ್ತಫಾ ಪ್ರೀತಿಸುತ್ತಿದ್ದೆವು. ಮೆಡಿಕಲ್ ಕಾಲೇಜು ವಾಟರ್ ಟ್ಯಾಂಕ್ ಬಳಿ ಊಟ ಮಾಡುತ್ತಿದ್ದ ವೇಳೆ ಎಂಟತ್ತು ಮಂದಿಯ ಗುಂಪೊಂದು ಬಂದು ಮುಸ್ತಫಾಗೆ ಬೆದರಿಕೆ ಹಾಕಿ ಆತನ ಬಳಿ ಇದ್ದ ಮೊಬೈಲ್‌ಗಳನ್ನು ನೋಡಿಕೊಳ್ಳುವುದಾಗಿ ಹೇಳಿ ಕಿತ್ತುಕೊಂಡು ವಾಪಸ್ ಕೊಡದೆ ಹೋಗಿದೆ ಎಂದು ದೂರು ನೀಡಿ ದ್ದಾಳೆ.
ಎರಡು ಪ್ರತ್ಯೇಕ ಪ್ರಕರಣ ಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಎರಡು ಮೊಬೈಲ್ ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ಬಂದ ನಂತರವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ. ಮೊಬೈಲ್‌ನಲ್ಲಿರುವ ಫೋಟೋಗಳು ಎಡಿಟ್ ಮಾಡ ಲಾಗಿದೆಯೇ ಅಥವಾ ಆತನೇ ತೆಗೆದಿರುವ ಫೋಟೋಗಳೇ ಎಂಬುವುದು ಗೊತ್ತಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಈ ಸಂಜೆಗೆ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಮೂರು ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿರುವ ಬೆನ್ನಲ್ಲೇ ಕೊಪ್ಪಳದಲ್ಲೂ ಅಂತ ಹದೇ ಪ್ರಕರಣವೊಂದು ಕಂಡು ಬಂದಿದ್ದು ಪೊಲೀಸರು ಮಾಹಿತಿ ಗಳನ್ನು ಕಲೆ ಹಾಕುತ್ತಿದ್ದಾರೆ.