2026-03-07 06:16:01

CM Siddaramaiah Hits Back At BJP |ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ: ಬಿಜೆಪಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ | Speed News Kannada

CM Siddaramaiah Hits Back At BJP |ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ: ಬಿಜೆಪಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ | Speed News Kannada

ಬೆಂಗಳೂರು: ರಾಜ್ಯಪಾಲರು ಪೂರ್ತಿ ಭಾಷಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ "ಜೈ ಸಂವಿಧಾನ" ಎನ್ನುವುದನ್ನೂ ಉಲ್ಲೇಖಿಸದೆ, ಹೋದರು. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ಹೋಗಿಬಿಟ್ಟರು. ಇದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವಯಕ್ತಪಡಿಸಿದ್ದಾರೆ. ಅವರು ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದರು.ನಾವು ರಾಜ್ಯಪಾಲರ ವಿರುದ್ಧ ಇಲ್ಲ. ಕೇಂದ್ರ ಸರ್ಕಾರದ ವಿರುದ್ಧ ಇದ್ದೇವೆ. ಮನರೇಗಾ ಬದಲಾಯಿಸಿ "ವಿಬಿ ಜಿ ರಾಮ್ ಜಿ" ಎಂದು ಮಾಡಿದ್ದಾರೆ.  ಇದರಲ್ಲಿರುವ ರಾಮ, ಧಶರಥ ರಾಮನೂ ಅಲ್ಲ. ಅಯೋಧ್ಯೆ ರಾಮನೂ ಅಲ್ಲ. ಹೆಸರು ಬದಲಾಯಿಸುವುದಕ್ಕೇ ಕೆಲವರನ್ನು ಅವರು ಇಟ್ಟುಕೊಂಡಿದ್ದಾರೆ ಅನ್ನಿಸುತ್ತದೆ. ಸಂವಿಧಾನ ಜಾರಿಯಾದ ದಿನದಿಂದ ಇವತ್ತಿವರೆಗೆ ಜಂಟಿ ಅಧಿವೇಶನಗಳು ನಡೆದುಕೊಂಡು ಬಂದಿವೆ. ಇದು ಸಂವಿಧಾನದ ಪ್ರಕಾರ ನಡೆದುಕೊಂಡು ಬರುತ್ತಿರುವ ಪದ್ಧತಿ ಎಂದರು.
ರಾಜ್ಯಪಾಲರು ಅವರು ಪೂರ್ಣ ಭಾಷಣವನ್ನು ಓದದೇ, ಮೊದಲನೇ  ಹಾಗೂ ಕಡೆಯ ಜೈಹಿಂದ್ ಜೈಕರ್ನಾಟಕ ಎಂದು ಓದಿದರು, ಭಾಷಣದಲ್ಲಿ ಬರೆದುಕೊಡಲಾಗಿದ್ದ ‘ಜೈಸಂವಿಧಾನ’ವನ್ನು ಹೇಳಲಿಲ್ಲ. ರಾಷ್ಟ್ರಗೀತೆ ಮುಗಿಯುವವರೆಗೂ ರಾಜ್ಯಪಾಲರು ತೆರಳಬಹುದಿತ್ತು.  ಈ ಬಗ್ಗೆ ಸಂವಿಧಾನದ ಕಲಂ 176 , 163 ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.
ಸಂವಿಧಾನಬದ್ಧವಾಗಿ ಸರ್ಕಾರ, ಆಡಳಿತ ನಡೆಯಲೇಬೇಕು. ಸಂವಿಧಾನವನ್ನು ಯಾವುದೇ ಕಾರಣಕ್ಕೂ ವಿರೋಧಿಸಬಾರದು. ರಾಜ್ಯಪಾಲರು ಮೂಲತಃ ಉತ್ತಮ ವ್ಯಕ್ತಿ. ನಾವು ರಾಜ್ಯಪಾಲರ ವಿರುದ್ಧವಿಲ್ಲ. ಆದರೆ ಕೇಂದ್ರ ಸರ್ಕಾರದ ನಮ್ಮ ವಿರೋಧವಿದೆ.
ಮನರೇಗಾ ರದ್ದುಪಡಿಸಿ ವಿಬಿಜಿರಾಮ್ ಜಿ (ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಜಿವಿಕ ಮಿಷನ್ ಗ್ರಾಮೀಣ)ವನ್ನು ಕೇಂದ್ರ ಜಾರಿಗೊಳಿಸಿದೆ. ಅದರಲ್ಲಿ ‘ಗ್ರಾಮ’ ಎನ್ನುವ ಪದವೂ ಇಲ್ಲ ಎಂದರು.
ಮುಖ್ಯಮಂತ್ರಿಗಳಿಗೆ ಸಂವೇದನೆಯಿಲ್ಲ ಎಂದು ಟೀಕಿಸಿದ್ದೀರಿ. ಆದರೆ ಹಿಂದೆ ಯಡಿಯೂರಪ್ಪನವರು ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಅಕ್ಕಿಯನ್ನು ಕಡಿತಗೊಳಿಸಿದ್ದರು. ರೈತರು ಗೊಬ್ಬರ ಕೇಳಿದ್ದಕ್ಕೆ ಗೋಲಿಬಾರ್ ನಡೆಸಿದರು. ಹಿಂದಿನ ಬಿಜೆಪಿ ಸರ್ಕಾರ ಸಂವೇದನಾರಹಿತವಾಗಿತ್ತು. ಹಿಂದೆ ಇದ್ದ ‘ಅನುಗ್ರಹ ಮತ್ತು ಕೃಷಿ ಭಾಗ್ಯ’ ಯೋಜನೆಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸಿತು. ಸರ್ಕಾರಕ್ಕೆ  ಸಂವೇದನೆ ಇರುವುದರಿಂದಲೇ ರೈತ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ ಎಂದು ತಿಳಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.