2026-03-07 07:25:43

Cheat fund company insults farmers by pasting posters in The Village | ಊರತುಂಬಾ ರೈತನ ಪೋಸ್ಟ‌ರ್ ಅಂಟಿಸಿ ಅಪಮಾನಿಸಿದ ಚೀಟ್ ಫಂಡ್‌ ಕಂಪನಿ | Speed News Kannada

Cheat fund company insults farmers by pasting posters in The Village | ಊರತುಂಬಾ ರೈತನ ಪೋಸ್ಟ‌ರ್ ಅಂಟಿಸಿ ಅಪಮಾನಿಸಿದ ಚೀಟ್ ಫಂಡ್‌ ಕಂಪನಿ | Speed News Kannada

ತುಮಕೂರು: ರೈತ ವ್ಯಕ್ತಿಯೊಬ್ಬರನ್ನು ಸಾಲಗಾರ ಎಂದು ಆರೋಪಿಸಿ ಊರತುಂಬಾ ಪೋಸ್ಟ‌ರ್ ಅಂಟಿಸಿ ಅಪಮಾನಿಸಿರುವ ಘಟನೆ ಜಿಲ್ಲೆಯ ( Tumkur ) ಕೊರಟಗೆರೆ ತಾಲ್ಲೂಕಿನ ಕುರಂಕೋಟೆ ಗ್ರಾಮದಲ್ಲಿ ನಡೆದಿದೆ. ಪೋಸ್ಟರ್ ನಲ್ಲಿ ಸಿದ್ದರಾಜಯ್ಯ ಅವರ ಫೋಟೋ ಸಹಿತ "ಸಾಲ ಪಡೆದಿದ್ದಾನೆ" ಎಂದು ಆರೋಪಿಸಲಾಗಿದ್ದು, ಪೋಸ್ಟರ್‌ಗಳು ಕೊರಟಗೆರೆ ಬಸ್ ನಿಲ್ದಾಣ ಹಾಗೂ ನೀರಿನ ಘಟಕ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರೋರಾತ್ರಿ ಅಂಟಿಸಲಾಗಿದೆ.
ಈ ಕೃತ್ಯದ ಹಿಂದೆ ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ನ ಮಾಜಿ ಬ್ರಾಂಚ್ ಮ್ಯಾನೇಜ‌ರ್ ಗೌತಮ್ ರಾಜ್ ಕೈವಾಡವಿರಬಹುದೆ ಎಂದು ಸಿದ್ದರಾಜಯ್ಯ ಆರೋಪಿಸಿದ್ದಾರೆ. ಒಂದು ವರ್ಷದ ಹಿಂದೆ ಸಿದ್ದರಾಜಯ್ಯ ಅವರು ಬಟವಾಡಿಯ ಕೊಡಚಾದ್ರಿ ಚಿಟ್ಸ್‌ನಲ್ಲಿ 5 ಲಕ್ಷ ಸಾಲ ಪಡೆದಿದ್ದರು. ಆ ವೇಳೆ ಗೌತಮ್ ರಾಜ್ ಬ್ರಾಂಚ್ ಮ್ಯಾನೇಜ‌ರ್ ಆಗಿದ್ದರು.
ಸಿದ್ದರಾಜಯ್ಯ ಅವರ ಪ್ರಕಾರ, ಅವರು ಪ್ರತಿ ತಿಂಗಳು ಫೋನ್‌ಪೇ ಹಾಗೂ ನಗದು ರೂಪದಲ್ಲಿ ಕಂತುಗಳನ್ನು ಪಾವತಿಸುತ್ತಿದ್ದರು. ಆದರೆ ಅಪಘಾತದಲ್ಲಿ ಕಾಲು ಮುರಿದ ಪರಿಣಾಮ ನಾಲ್ಕು ತಿಂಗಳು ಕಂತು ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಮತ್ತೆ ಹಣ ಪಾವತಿಸಲು ಆರಂಭಿಸಿರೂ ಸಹ ಉದ್ದೇಶಪೂರ್ವಕವಾಗಿ ಈ ರೀತಿ ತೇಜೋವಧೆ ಮಾಡಲಾಗಿದೆ ಎಂದು ಸಿದ್ದರಾಜಯ್ಯ ಸಂಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. ಇದಲ್ಲದೆ, 50 ಸಾವಿರ ಪಡೆದು ಮತ್ತೊಂದು ಸಾಲ ಕೊಡಿಸುತ್ತೇನೆ ಎಂದು ಹೇಳಿ ಬಳಿಕ ಸಾಲ ಕೊಡಿಸದ ಹಿನ್ನೆಲೆಯಲ್ಲಿ ಕೊರಟಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಎಂದು ಸಿದ್ದರಾಜಯ್ಯ ಹೇಳಿದ್ದಾರೆ. ದೂರು ನೀಡಿದ್ದಕ್ಕೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಈ ರೀತಿ ಮಾನಹಾನಿ ಮಾಡುವ ಪೋಸ್ಟರ್ ಅಂಟಿಸಲಾಗಿದೆ ಎಂದು ಸಿದ್ದರಾಜಯ್ಯ ಆರೋಪಿಸಿದ್ದಾರೆ. ಇತ್ತ ಕೊಡಚಾದ್ರಿ ಚಿಟ್ ಫಂಡ್ ಕಚೇರಿಯನ್ನು ಸಂಪರ್ಕಿಸಿದಾಗ, ಕಚೇರಿಯಿಂದ ಯಾವುದೇ ನೋಟಿಸ್‌ ನೀಡಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ. ಕಂಪನಿಯ ಹೆಸರನ್ನು ದುರುಪಯೋಗಪಡಿಸಿಕೊಂಡು ವ್ಯಕ್ತಿಯ ಮಾನಹಾನಿ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಘಟನೆ ಕುರಿತಂತೆ ಪೊಲೀಸ್ ತನಿಖೆ ಮುಂದುವರಿದಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ದತೆ ನಡೆದಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.