2026-03-07 08:46:46

Chain Thief Feroz Khan arrested for stealing police personnels gold chain | ಪೊಲೀಸ್‌ ಸಿಬ್ಬಂದಿಯ ಚಿನ್ನದ ಸರ ಎಗರಿಸಿದ್ದ ಸರಗಳ್ಳ ಫಿರೋಜ್ ಖಾನ್ ಅರೆಸ್ಟ್ | Speed News Kannada

Chain Thief Feroz Khan arrested for stealing police personnels gold chain | ಪೊಲೀಸ್‌ ಸಿಬ್ಬಂದಿಯ ಚಿನ್ನದ ಸರ ಎಗರಿಸಿದ್ದ ಸರಗಳ್ಳ ಫಿರೋಜ್ ಖಾನ್ ಅರೆಸ್ಟ್ | Speed News Kannada

ಥಾಣೆ, ಫೆ.20- ಪೊಲೀಸ್ ಸಿಬ್ಬಂದಿ ಕೊರಳಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳನನ್ನು ಮಹಾರಾಷ್ಟ್ರದ ಥಾಣೆ ಪೊಲೀಸರು ಬಂಧಿಸಿದ್ದಾರೆ. ಥಾಣೆಯ ಮುಂಬ್ರಾ ಪ್ರದೇಶದ ನಿವಾಸಿ ಸೈಫ್ ಫಿರೋಜ್ ಖಾನ್ (23) ಬಂಧಿತ ಚೋರನಾಗಿದ್ದಾನೆ.
ಕಳೆದ ಜ.31ರ ರಾತ್ರಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಲ್ಮಾ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿಯ ಕುತ್ತಿಗೆಯಿಂದ ಚಿನ್ನದ ಸರವನ್ನು ಕಸಿಯಲಾಗಿತ್ತು.
ಘಟನೆ ನಡೆದು ಆರು ದಿನಗಳ ನಂತರ ಈ ಪ್ರದೇಶದಲ್ಲಿ ವೃದ್ಧರೊಬ್ಬರನ್ನು ಇದೇ ರೀತಿ ಗುರಿಯಾಗಿಸಿ ಚಿನ್ನದ ಸರ ಸುಲಿಗೆ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಒರಕೆಣ ದಾಖಲಿಸಿ ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಕಣ್ಣಾವಲಿನ ಆಧಾರದ ಮೇಲೆ, ಆರೋಪಿ ಸೈಫ್ ಫಿರೋಜ್ ಖಾನ್‌ನನ್ನು ಬಂಧಿಸಲಾಗಿದೆ.
ಸುಲಿಗೆ ಮಾಡಿದ್ದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದ್ದು, ಆತನ ಸಹಚರನನ್ನು ನೌಶಾದ್ ಖಾನ್ ತಲೆಮೆರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಥಾಣೆ, ಫೆ.20- ಪೊಲೀಸ್ ಸಿಬ್ಬಂದಿ ಕೊರಳಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳನನ್ನು ಮಹಾರಾಷ್ಟ್ರದ ಥಾಣೆ ಪೊಲೀಸರು ಬಂಧಿಸಿದ್ದಾರೆ. ಥಾಣೆಯ ಮುಂಬ್ರಾ ಪ್ರದೇಶದ ನಿವಾಸಿ ಸೈಫ್ ಪಿರೋಜ್ ಖಾನ್ (23) ಬಂಧಿತ ಚೋರನಾಗಿದ್ದಾನೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.