2026-03-07 08:07:59

Canada deported 2781 Indians last year | ಕೆನಡಾವು ಕಳೆದ ವರ್ಷ ೨ ಸಾವಿರದ ೭೮೧ ಭಾರತೀಯರನ್ನು ದೇಶದಿಂದ ಹೊರಹಾಕಿದೆ | Speed News Kannada

Canada deported 2781 Indians last year | ಕೆನಡಾವು ಕಳೆದ ವರ್ಷ ೨ ಸಾವಿರದ ೭೮೧ ಭಾರತೀಯರನ್ನು ದೇಶದಿಂದ ಹೊರಹಾಕಿದೆ | Speed News Kannada

ಈ ವರ್ಷ ೬ ಸಾವಿರದ ೫೧೫ ಭಾರತೀಯರನ್ನು ಹೊರಹಾಕಲಿದೆ
ಒಟಾವಾ (ಕೆನಡಾ) - ಕೆನಡಾವು ಕಳೆದ ವರ್ಷ ಅಕ್ಟೋಬರ್ ಅಂತ್ಯದವರೆಗೆ ೨ ಸಾವಿರದ ೭೮೧ ಭಾರತೀಯರನ್ನು ದೇಶದಿಂದ ಹೊರಹಾಕಿದೆ. ಕಳೆದ ವರ್ಷ ಒಟ್ಟು ೧೮ ಸಾವಿರದ ೭೮೫ ಜನರನ್ನು ಕೆನಡಾದಿಂದ ಹೊರಹಾಕಲಾಗಿದ್ದು, ಇದರಲ್ಲಿ ಭಾರತೀಯರು ಎರಡನೇ ಸ್ಥಾನದಲ್ಲಿದ್ದಾರೆ.
ಗರಿಷ್ಠ ೩ ಸಾವಿರದ ೯೭೨ ಜನರು ಮೆಕ್ಸಿಕೋ ದೇಶದವರಾಗಿದ್ದರು. ಈ ಮಾಹಿತಿಯು ಕೆನಡಾದ 'ಕೆನಡಿಯನ್ ಬಾರ್ಡರ್ ಸರ್ವಿಸಸ್ ಏಜೆನ್ಸಿ'ಯ ಅಂಕಿಅಂಶಗಳಿಂದ ಬೆಳಕಿಗೆ ಬಂದಿದೆ. ಪ್ರಸ್ತುತ ೨೯ ಸಾವಿರದ ೫೪೨ ಜನರನ್ನು ಹೊರಹಾಕುವ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ೬ ಸಾವಿರದ ೫೧೫ ಭಾರತೀಯರಿದ್ದಾರೆ.
ಕೆನಡಾ ಸರಕಾರವು, ಹೊರಹಾಕಲ್ಪಟ್ಟವರಲ್ಲಿ ಅನೇಕರ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದವು, ಆದರೆ ನಿರಾಶ್ರಿತರ ಹಕ್ಕಿನ ನಿಯಮಗಳನ್ನು ಸರಿಯಾಗಿ ಪಾಲಿಸದವರ ಸಂಖ್ಯೆಯೂ ದೊಡ್ಡದಿದೆ ಎಂದಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.