ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸುತ್ತಿದ್ದಾರೆ. ಇಂದು ಹತ್ತು ಗಂಟೆಗೆ ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ಗೆ ಅನುಮೋದನೆ ಪಡೆದುಕೊಂಡರು. ನಂತರ ವಿಧಾನಸಭೆಯಲ್ಲಿ 10.15ಕ್ಕೆ ಬಜೆಟ್ ಓದಲು ಆರಂಭಿಸಿದರು.
ಈ ಬಾರಿಯ ಬಜೆಟ್ ಮಂಡಿಸಲು ನನಗೆ ಸಂತೋಷವಾಗುತ್ತಿದೆ. ನಾಡಿನ 7 ಕೋಟಿ ಕನ್ನಡಿಗರ ನಿರೀಕ್ಷೆಗಳನ್ನ ನಾವು ಹೊತ್ತಿದ್ದೇವೆ. ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್ ಗಾತ್ರ 4.49 ಲಕ್ಷ ಕೋಟಿ ಗಳಷ್ಟಿರುತ್ತದೆ.
ಈ ಬಜೆಟ್ ರೈತರ, ಅಶಕ್ತರ, ಮಹಿಳೆಯರ ಕನಸು ಪ್ರತಿನಿಧಿಸುತ್ತದೆ. ಅವರ ಕನಸುಗಳನ್ನು ನನಸು ಮಾಡಲು ಸಂಕಲ್ಪ ಮಾಡಿದ್ದೇವೆ. ಜನರ ಕನಸು ನನಸು ಮಾಡುವ ಬದ್ಧತೆ. ರೈತರು, ದಮನಿತರು, ಕಾರ್ಮಿಕರಿಗೆ ಬಜೆಟ್. ಜನಕೇಂದ್ರಿತ ಆರ್ಥಿಕ ತತ್ವಗಳ ಉಲ್ಲೇಖ. ಜಾಗತಿಕ ಉತ್ಪಾದನಾ ವಿಧಾನ ಬದಲಾಗುತ್ತಿದೆ.
ರೈತರು, ದಮನಿತರು, ಕಾರ್ಮಿಕರಿಗೆ ಬಜೆಟ್. ಜನಕೇಂದ್ರಿತ ಆರ್ಥಿಕ ತತ್ವಗಳ ಉಲ್ಲೇಖ. AIನಿಂದ ಕ್ಷಣಕ್ಷಣಕ್ಕೂ ಬದಲಾವಣೆ. ಬೆಂಕಿಯನ್ನು ಬೆಳಕಾಗಿಸಿಕೊಳ್ಳಬೇಕು. ಅತಿ ಹೆಚ್ಚು ತೆರಿಗೆ ಸಂಪನ್ಮೂಲ ಸಂಗ್ರಹ. ಆರಂಭದಲ್ಲೇ ಕೇಂದ್ರ ಸರ್ಕಾರಕ್ಕೆ ಟಾಂಗ್. ತೆರಿಗೆ ಪಾಲು ಹೆಚ್ಚು ನೀಡಬೆಂಕಬ ಸಂದೇಶ. ಗ್ಯಾರಂಟಿ ಮೂಲಕ ಆರ್ಥಿಕ ಸುಧಾರಣೆ. ದೀರ್ಘಕಾಲೀನ ಆರ್ಥಿಕ ಅಭಿವೃದ್ಧಿಗೆ ಒತ್ತು.
784,682 ಕೋಟಿ ಬಂಡವಾಳ ವೆಚ್ಚ. ಬೆಂಗಳೂರಿನಲ್ಲಿ 158 ಕಿ.ಮೀ ವೈಟ್ ಟಾಪಿಂಗ್. 450ಕೋಟಿ ವೆಚ್ಚದಲ್ಲಿ ಸಿಲ್ಕ್ ಬೋರ್ಡ್ – K.R. ಪುರಂಗೆ ರಿಂಗ್ ರೋಡ್. ಶಿಕ್ಷಣ ಇಲಾಖೆಗೆ 47,224 ಕೋಟಿ ಅನುದಾನ ಘೋಷಣೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,929 ಕೋಟಿ ಅನುದಾನ. ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆಗೆ 100 ಕೋಟಿ.
ಅಗ್ನಿಶಾಮಕ ಸಿಬ್ಬಂದಿ ಆಹಾರ ಭತ್ಯೆ 150ರಿಂದ 300ಕ್ಕೆ ಏರಿಕೆ. ಬೆಂಗಳೂರಿನಲ್ಲಿ ಅಂಗಾಂಗ ಕಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. 92 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಕೇಂದ್ರ ಸ್ಥಾಪನೆ. ರಾಜೀವ್ ಗಾಂಧಿ ಆಸ್ಪತ್ರೆ ಆವರಣದಲ್ಲಿ 1 ಸಾವಿರ ಹಾಸಿಗೆಗಳ ಆಸ್ಪತ್ರೆ ಸ್ಥಾಪಿಸಲಾಗುತ್ತದೆ ಎಂದು ಘೋಷಿಸಿದರು.