2026-06-08 01:28:43

Brother slits brother throat over suspicion of black magic|ಮಾಟಮಂತ್ರದ ಶಂಕೆಗೆ ತಮ್ಮನ ಕುತ್ತಿಗೆ ಸೀಳಿದ ಅಣ್ಣ|Speed News Kannada

Brother slits brother throat over suspicion of black magic|ಮಾಟಮಂತ್ರದ ಶಂಕೆಗೆ ತಮ್ಮನ ಕುತ್ತಿಗೆ ಸೀಳಿದ ಅಣ್ಣ|Speed News Kannada

ಗುಜರಾತ್‌ನಲ್ಲಿ ಮಾಟಮಂತ್ರದ ಸಂಶಯದಿಂದ ಅಣ್ಣನೊಬ್ಬ ತನ್ನ ತಮ್ಮನನ್ನು ಹರಿತವಾದ ಆಯುಧದಿಂದ ಗಂಟಲು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.ಮೃತ ವ್ಯಕ್ತಿಯನ್ನು ಗುರ್ಜಿ ವಾಸವ ಎಂದು ಗುರುತಿಸಲಾಗಿದೆ. ತಂದೆಯನ್ನು ರಕ್ಷಿಸಲು ಬಂದ ಪುತ್ರಿಯರಾದ ಸಾವಿತ್ರಿ ಮತ್ತು ಶಿಲ್ಪಾ ಮೇಲೂ ಆರೋಪಿ ಹಲ್ಲೆ ನಡೆಸಿದ್ದು, ಇಬ್ಬರೂ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ರಮೇಶ್ ವಾಸವ ಎಂಬಾತನೇ ಈ ಕೃತ್ಯದ ಆರೋಪಿ. ಆತ ಈಗಾಗಲೇ 2005ರಲ್ಲಿ ತನ್ನ ಮತ್ತೊಬ್ಬ ಸಹೋದರ ವಿಠ್ಠಲ್ ವಾಸವನನ್ನು ಕೊಲೆ ಮಾಡಿದ್ದ ಹಿನ್ನೆಲೆ ಹೊಂದಿದ್ದಾನೆ.ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕುಟುಂಬದ ಕಲಹ ಮತ್ತು ಮಾಟಮಂತ್ರದ ಮೂಢನಂಬಿಕೆಯೇ ಈ ಕೊಲೆಗೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.