ಬ್ರಿಟನ್: ಅಮೆರಿಕಕ್ಕೆ ಬ್ರಿಟಿಷ್ ರಾಯಭಾರಿಯಾಗಿದ್ದ ಪೀಟರ್ ಮ್ಯಾಂಡೆಲ್ಸನ್ ಅವರನ್ನು ನೇಮಕ ಮಾಡಿ ನಂತರ ತೆಗೆದುಹಾಕುವ ನಿರ್ಧಾರದ ವಿವಾದದ ನಂತರ ಯುಕೆ ಪ್ರಧಾನಿ ಕೀರ್ ಸ್ವಾರ್ಮರ್ ರಾಜೀನಾಮೆ ನೀಡುವಂತೆ ಹೆಚ್ಚಿನ ಒತ್ತಡ ಎದುರಿಸುತ್ತಿದ್ದಾರೆ. ಈ ಮಧ್ಯೆ ಬರ್ಮಿಂಗ್ಯಾಮ್ ಲೇಡಿಯುಡ್ನ ಸಂಸದೆಯಾಗಿರುವ ಶಬಾನಾ ಮಹಮೂದ್ ಅವರ ಹೆಸರು ಬ್ರಿಟನ್ ಪ್ರಧಾನಿ ಹುದ್ದೆಗೆ ಕೇಳಿ ಬಂದಿದೆ.ಪೀಟರ್ ಮ್ಯಾಂಡೆಲ್ಸನ್, ಲೈಂಗಿಕ ಅಪರಾಧಿ ಜೆಫ್ರಿ ಎನ್ ಜೊತೆ ಸಂಬಂಧ ಹೊಂದಿದ್ದ ಎಂಬ ಆರೋಪವು ವಿವಾದಕ್ಕೆ ಕಾರಣವಾಗಿತ್ತು. ಸ್ಮಾರ್ಮರ್ ರಾಜೀನಾಮೆ ನೀಡುವಂತೆ ಒತ್ತಡ ಎದುರಿಸುತ್ತಿರುವ ಮಧ್ಯೆ ಅವರ ಆಪ್ತ ಸಹಾಯಕ ಮಾರ್ಗನ್ ಮೆನಿ ರಾಜೀನಾಮೆ ನೀಡಿದ್ದಾರೆ. ಅವರು ಮ್ಯಾಂಡೆಲ್ಸನ್ ಅವರ ನೇಮಕಾತಿಯಲ್ಲಿ ತಮ್ಮ ಪಾತ್ರಕ್ಕಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಬ್ರಿಟನ್ ಪ್ರಧಾನಮಂತ್ರಿಯವರ ಸಂವಹನ ವಿಭಾಗದ ಮುಖ್ಯಸ್ಥ ಟಿಮ್ ಆಲನ್ ಕೂಡ ಹುದ್ದೆ ತೊರೆದಿದ್ದಾರೆ.
ಇದರಿಂದ ಬ್ರಿಟನ್‌ನಲ್ಲಿ ರಾಜಕೀಯ ಬಿಕ್ಕಟ್ಟು ಇನ್ನಷ್ಟು ಹೆಚ್ಚಳವಾಗಿದೆ. ಒಂದು ವೇಳೆ ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದಲ್ಲಿ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಮೂಡಿದೆ. ಯುಕೆ ಪ್ರಧಾನಿ ಹುದ್ದೆಗೆ ಗೃಹ ಕಾರ್ಯದರ್ಶಿ ಶಬಾನಾ ಮಹಮೂದ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಶಬಾನಾ ಮಹಮೂದ್ ಅವರು ಬ್ರಿಟನ್ ಪ್ರಧಾನಿ ಹುದ್ದೆಗೆ ಏರಿದರೆ ಪಾಕಿಸ್ತಾನ ಮೂಲದ ಯುಕೆಯ ಮೊದಲ ಪ್ರಧಾನಿಯಾಗಿ ಮತ್ತು ಆ ಹುದ್ದೆಯನ್ನು ಅಲಂಕರಿಸಿದ ಮೊದಲ ಮುಸ್ಲಿಂ ಮಹಿಳೆಯಾಗಿ ಇತಿಹಾಸ ನಿರ್ಮಾಣವಾಗಲಿದೆ.