2026-03-07 05:44:45

Bodybuilder commits suicide | ಪ್ರೀತಿಸಿದ ಯುವತಿ ಕೈಕೊಟ್ಟಿದ್ದಕ್ಕೆ ಬಾಡಿಬಿಲ್ಡರ್ ಆತ್ಮಹತ್ಯೆ! | Speed News Kannada

Bodybuilder commits suicide | ಪ್ರೀತಿಸಿದ ಯುವತಿ ಕೈಕೊಟ್ಟಿದ್ದಕ್ಕೆ ಬಾಡಿಬಿಲ್ಡರ್ ಆತ್ಮಹತ್ಯೆ! | Speed News Kannada

ಬೆಂಗಳೂರು ಮಹಾಲಕ್ಷ್ಮಿ ಲೇಔಟ್‌ನಲ್ಲಿ ಪ್ರೀತಿಸಿದ ಯುವತಿ ಕೈಕೊಟ್ಟಿದ್ದ ಕಾರಣ ಪ್ರೇಮಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ (Crime) ಘಟನೆ ನಡೆದಿದೆ. ಮೃತ ಯುವಕನನ್ನು ಕಿರಣ್ ಎಂದು ಗುರುತಿಸಲಾಗಿದೆ. ಬಹು ವರ್ಷಗಳಿಂದ ಜಿಮ್ ಟ್ರೈನರ್ ಹಾಗೂ ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ಕಿರಣ್ ಗುರುತಿಸಿಕೊಂಡಿದ್ದ.ಇದೇ ವೇಳೆ ಹುಡುಗಿಯೊಬ್ಬರು ಪರಿಚಯವಾಗಿದೆ.
ಪರಿಚಯ ಪ್ರೀತಿಗೆ ತಿರುಗಿ ಕಳೆದ ಮೂರು ವರ್ಷಗಳಿಂದ ಮೃತ ಕಿರಣ್ ಯುವತಿಯನ್ನು ಪ್ರೀತಿಸುತ್ತಿದ್ದ, ಅಷ್ಟೇ ಅಲ್ಲದೇ ವಾಲೆಂಟೈನ್ಸ್ ಡೇ ಗೆ ಆಕೆಗೆ ಗಿಫ್ಟ್ ನೀಡಲು ಕೂಡ ಸ್ಪೆಷಲ್ ಪ್ಲಾನ್ ಮಾಡಿದ್ದ.
ಆದರೆ ಇದೀಗ ಯುವತಿ ಬೇರೆ ಯುವಕನೊಂದಿಗೆ ಮದುವೆ ಫಿಕ್ಸ್ ಆಗಿರುವುದು ತಿಳಿದ ನಂತರ ಕಿರಣ್ ಭೀಕರ ಆಘಾತಕ್ಕೆ ಒಳಗಾದರು. ಯುವತಿ ಮದುವೆಯ ಕುರಿತು ಲಗ್ನ ಪತ್ರಿಕೆ ಹಾಗೂ ಹೊಸ ಸೀರೆ ತೋರಿಸಿದ ಕಾರಣ ಕಿರಣ್ ಮನನೊಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸದ್ಯ ಈ ಘಟನೆಯು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನು ಮಗನ ಸಾವಿಗೆ ಯುವತಿಯ ಮನೆಯವರೇ ಕಾರಣ ಎಂದು ಕಿರಾನ್ ಪೋಷಕರು ಆರೋಪಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.