2026-03-07 04:58:51

BJP MP Tejaswi Surya And MLA CK Ram Murthy Taken into Police Custody! | ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ CK ರಾಮ್ ಮೂರ್ತಿ ಪೊಲೀಸ್ ವಶಕ್ಕೆ! | Speed News Kannada

BJP MP Tejaswi Surya And MLA CK Ram Murthy Taken into Police Custody! | ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ CK ರಾಮ್ ಮೂರ್ತಿ ಪೊಲೀಸ್ ವಶಕ್ಕೆ!  | Speed News Kannada

ಬೆಂಗಳೂರು: ಮೆಟ್ರೋ ದರ ಏರಿಕೆ ನಿಗಮ ನಿಯಮಿತ ಕೊನೆಗೂ ಕೈಬಿಟ್ಟಿದೆ. ಮೆಟ್ರೋ ಪ್ರಯಾಣಿಕರ ದರ ಏರಿಕೆ  ಮಾಡಲು ಬಿಡಲ್ಲ ಎಂದಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಇದು ರಾಜಧಾನಿ ಜನರ ಹೋರಾಟಕ್ಕೆ ಜಯ ಎಂದಿದ್ದಾರೆ  ಅಲ್ಲದೇ ದರ ಏರಿಕೆ ತಡೆಯುವಲ್ಲಿ ಕೇಂದ್ರ ಸರ್ಕಾರದ ಪಾತ್ರವಿದೆ ಎಂದು  ಕಿಡಿಕಾರಿದ್ದಾರೆ.  ನಾವು ಇಲ್ಲಿ ಪ್ರತಿಭಟನೆ ಮಾಡ್ತಿಲ್ಲ ಪ್ರತಿಭಟನೆಗೆ ಅನುಮತಿ ಕೊಟ್ಟಿಲ್ಲ. ಎಂದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಖಾಕಿ ಟ್ರಂಕ್ ಹಿಡಿದುಕೊಂಡು ಮೆಟ್ರೋ ನಿಲ್ದಾಣಕ್ಕೆ ಬಂದು ರಾಜ್ಯ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ. ನಾನು ಪ್ರತಿಭಟನೆ ಮಾಡ್ತಾ ಇಲ್ಲ ಮೆಟ್ರೋದಲ್ಲಿ ಹೋಗೋಕೆ ಟಿಕೆಟ್ ತಗೊಂಡಿದ್ದೀನಿ. ನನ್ನ ಕೈಯಲ್ಲಿರೋದು ರಾಜ್ಯ ಸರ್ಕಾರದ ಖಾಲಿ ಟ್ರಂಕ್ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಖಾಲಿ ಟ್ರಂಕ್ ತೆಗೆದುಕೊಂಡೇ ನಾನು ದೆಹಲಿಗೆ ಹೋಗ್ತೀನಿ. ಇದೇ ಖಾಲಿ ಟ್ರಂಕ್ ರಾಜ್ಯ ಸರ್ಕಾರದ ಪ್ರತೀಕ. ಸರ್ಕಾರ ನಮ್ಮ ಹತ್ರಾ ದುಡ್ಡಿಲ್ಲ ಅಂತಿದೆ, ಪ್ರಯಾಣಿಕರಿಂದ ತೆಗೆದುಕೊಳ್ಳಿ ಅಂತ ರಾಜ್ಯ ಸರ್ಕಾರ ಮೆಟ್ರೋಗೆ ಹೇಳಿದೆ. ಸರ್ಕಾರ BMRCLಗೆ ಶ್ಯಾಡೋ ಕ್ಯಾಶ್ ನೀಡಬೇಕು. ಕೇಂದ್ರ ಸರ್ಕಾರದ ನಿರ್ದೇಶನ ಬಂದ ಹಿನ್ನಲೆ ತಾತ್ಕಾಲಿಕ ತಡೆ ನೀಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಗುಡುಗಿದ್ರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.