2026-03-07 07:51:36

BJP demands clarification from CM Siddaramaiah | ಗ್ಯಾರಂಟಿ ಯೋಜನೆ ನಿಲ್ಲಿಸ್ತಿರಾ ಸ್ಪಷ್ಟನೆ ನೀಡಲು ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಆಗ್ರಹ | Speed News Kannada

BJP demands clarification from CM Siddaramaiah | ಗ್ಯಾರಂಟಿ ಯೋಜನೆ ನಿಲ್ಲಿಸ್ತಿರಾ ಸ್ಪಷ್ಟನೆ ನೀಡಲು ಸಿಎಂ ಸಿದ್ದರಾಮಯ್ಯಗೆ  ಬಿಜೆಪಿ ಆಗ್ರಹ | Speed News Kannada

ಬೆಂಗಳೂರು:  ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಸಿದ್ಧತೆ ನಡೆಸಿದ್ದಾರಾ? ಅಥವಾ ಮುಂದುವರೆಸುತ್ತೀರಾ ಎಂದು ಈ ಕೂಡಲೇ ಸ್ಪಷ್ಟಪಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜ್ಯ ಬಿಜೆಪಿ ಆಗ್ರಹಪಡಿಸಿದೆ. ನಿಮ್ಮದೇ ಸರ್ಕಾರದ ಸಾಲು ಸಾಲು ಸಚಿವರು ಶಾಸಕರು ಹೇಳುತ್ತಿದ್ದಾರೆ. ಗ್ಯಾರಂಟಿಗಳ ಹೆಸರಲ್ಲಿ ಅಧಿಕಾರಕ್ಕೆ ಬಂದು ಈಗ ನಾಡಿನ ಜನತೆಗೆ ದ್ರೋಹ ಬಗೆಯುವ ಚಿಂತನೆಯನ್ನು ಹರಿಬಿಟ್ಟಿದ್ದೀರಾ?  ಎಂದೂ ಪ್ರಶ್ನಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಭಾಗವೇ ಆಗಿರುವ ಉಪಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಶಾಸಕರು ಏನು ಹೇಳಿದ್ದಾರೆ ಎಂದು ಬಿಜೆಪಿ ಪಟ್ಟಿ ಪ್ರಕಟಿಸಿದೆ
ಗ್ಯಾರಂಟಿಗಳು ಹೊರೆಯಾಗಿವೆ -ಡಿಕೆ ಶಿವಕುಮಾರ್‌, ಉಪಮುಖ್ಯಮಂತ್ರಿ 
ಗ್ಯಾರಂಟಿ ಯೋಜನೆಗಳಿಂದ ನಷ್ಟ -ಆರ್‌.ವಿ.ದೇಶಪಾಂಡೆ, ಶಾಸಕರು  
ಗ್ಯಾರಂಟಿ ಯೋಜನೆಗಳಿಂದ ಶಾಸಕರ ಕ್ಷೇತ್ರಕ್ಕೆ ಅನುದಾನವಿಲ್ಲ -ಬಿ.ಆರ್.ಪಾಟೀಲ್, ಶಾಸಕರು 
ಗ್ಯಾರಂಟಿ ಯೋಜನೆ ಬಿಟ್ರೆ ಉತ್ತಮ ರಸ್ತೆ ಸಿಗುತ್ತೆ -ಬಸವರಾಜ ರಾಯರೆಡ್ಡಿ, ಶಾಸಕರು 
ಒಂದೆರಡು ಗ್ಯಾರಂಟಿ ಕೈಬಿಡಿ -ಗವಿಯಪ್ಪ, ಶಾಸಕರು
ಗ್ಯಾರಂಟಿಗಳನ್ನು ಸ್ಥಿತಿವಂತರು ಬಿಡಬೇಕು ಎಂಬ ನಿಯಮ ಜಾರಿಗೆ ಸಿದ್ಧತೆ ಎಂಬ ವದಂತಿಗಳು ಹರಿದಾಡುತ್ತಿವೆ. ಮುಖ್ಯಮಂತ್ರಿಗಳೇ ಗ್ಯಾರಂಟಿಗಳು ಆರ್ಥಿಕ ಹೊರೆಯಾಗಿವೆ ಎಂದು ನಿಲ್ಲಿಸುವ ಉದ್ದೇಶವಿದೆಯೇ ಇಲ್ಲವೇ ಎಂದು ತಿಳಿಸುವಂತೆ ಒತ್ತಾಯಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.