2026-03-07 07:29:50

BJP Can Give Bharat Ratna | ಸಾವರ್ಕರ್‌ಗೆ ಜತೆಗೆ ಗೋಡ್ಸೆಗೂ ಬಿಜೆಪಿ ಭಾರತ ರತ್ನ ಕೊಡಬಹುದು ಓವೈಸಿ ವ್ಯಂಗ್ಯ | Speed News Kannada

BJP Can Give Bharat Ratna | ಸಾವರ್ಕರ್‌ಗೆ ಜತೆಗೆ ಗೋಡ್ಸೆಗೂ ಬಿಜೆಪಿ ಭಾರತ ರತ್ನ ಕೊಡಬಹುದು ಓವೈಸಿ ವ್ಯಂಗ್ಯ | Speed News Kannada

ತೆಲಂಗಾಣ: ಮಹಾತ್ಮಾ ಗಾಂಧಿ ಅವರನ್ನು ಕೊಲೆ ಮಾಡಿದ ನಅಥೂರಾಂ  ಗೋಡ್ಸೆಗೂ ಒಂದು ದಿನ ಬಿಜೆಪಿ ಭಾರತ ರತ್ನ ಕೊಡಿಸುತ್ತದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವ್ಯಂಗ್ಯವಾಡಿದ್ದಾರೆ.  ವಿ.ಡಿ. ಸಾವರ್ಕರ್‌ ಅವರಿಗೆ ಭಾರತ ರತ್ನ ನೀಡಬೇಕೆಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಓವೈಸಿ ಈ ಪ್ರತಿಕ್ರಿಯೆ ನೀಡಿದ್ದಾರೆ.  ನಿನ್ನೆ ಆರ್‌ ಎಸ್‌ ಎಸ್‌ ಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ  ಕಾರ್ಯಕ್ರಮದಲ್ಲಿ ಮಾತನಾಡಿದ ಮೊಹನ ಭಾಗವತ್ ಅವರು, ‘ಸಾವರ್ಕರ್ ಅವರಿಗೆ ಭಾರತ ರತ್ನ ನೀಡಿದರೆ, ಪ್ರಶಸ್ತಿಯ ಮೌಲ್ಯ ಮತ್ತಷ್ಟು ಹೆಚ್ಚಲಿದೆ. ಆಯಕೆ ಸಮಿತಿಯಲ್ಲಿ ಇರುವವರನ್ನು ನಾನು ಭೇಟಿ ಮಾಡಿದರೆ ಶಿಫಾರಸು ಮಾಡುವೆ. ಒಂದು ವೇಳೆ ಸಾವರ್ಕರ್‌ ಗೆ ಈ ಪ್ರಶಸ್ತಿ ಕೊಡದಿದ್ದರೂ  ಕೋಟ್ಯಂತರ ಜನರ ಹೃದಯದಲ್ಲಿ ಅವರು ನೆಲೆಸಿದ್ದಾರೆ ಎಂದು ಹೇಳಿದ್ದರು. ಕಾಂಗ್ರೆಸ್‌ ಮುಖಂಡ  ಮಾಣಿಕ್ಕಂ ಟ್ಯಾಗೋರ್  ಪ್ರತಿಕ್ರಿಯಿಸಿ ಭಾರತ ರತ್ನ ಪ್ರಶಸ್ತಿಗೆ ಮತ್ತು ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಅಂಬೇಡ್ಕರ್ ಅವರಂಥ ಸ್ವಾತಂತ್ರ್ಯ ಯೋಧರಿಗೆ ಮಾಡಿದ ಅವಮಾನ ಎಂದಿದ್ದಾರೆ.
ಆದರೆ ಭಾಗವತ್ ಅವರ ಬೇಡಿಕೆಯನ್ನು ಬಿಜೆಪಿ ಮತ್ತು ಶಿವಸೇನಾ (ಯುಬಿಟಿ) ಸ್ವಾಗತಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.