2026-03-07 05:53:53

Big Twist In The Kotturu Triple Murder Case! | ಕೊಟ್ಟೂರು ತ್ರಿವಳಿ ಕೊ* ಕೇಸ್‌ಗೆ ಬಿಗ್ ಟ್ವಿಸ್ಟ್! | Speed News Kannada

Big Twist In The Kotturu Triple Murder Case! | ಕೊಟ್ಟೂರು ತ್ರಿವಳಿ ಕೊ* ಕೇಸ್‌ಗೆ ಬಿಗ್ ಟ್ವಿಸ್ಟ್! | Speed News Kannada

ಬೆಂಗಳೂರು: ಕೊಟ್ಟೂರಿನಲ್ಲಿ ಮಗನಿಂದಲೇ ಮೂವರ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ತಂದೆ, ತಾಯಿ, ತಂಗಿಯನ್ನೇ ಭೀಕರವಾಗಿ ಹತ್ಯೆ ಮಾಡಿ ಮನೆಯ ಹಾಲ್ನಲ್ಲೇ ಗುಂಡಿ ತೋಡಿ ಸಮಾಧಿ ಕಟ್ಟಿದ ಹಂತಕ ಸದ್ಯ ಅರೆಸ್ಟ್ ಆಗಿದ್ದಾನೆ. ಈತನ ಜೊತೆ ಮಾವ ವಸಂತ ಕೂಡ ಲಾಕ್ ಆಗಿದ್ದಾನೆ. ಆದ್ರೆ, ಆರೋಪಿ ತನಿಖೆಯ ವೇಳೆ ಬಿಗ್ ಟ್ವಿಸ್ಟ್  ಸಿಕ್ಕಿದೆ. 
 ಆರೋಪಿ ಅಕ್ಷಯ್ ವಿಚಾರಣೆಯ ವೇಳೆ ಹಣದ ವಿಚಾರ ಬಾಯ್ಬಿಡದೆ ತಂಗಿ ವಿಚಾರ ಹೇಳಿ ದಿಕ್ಕು ತಪ್ಪಿಸೋ ಯತ್ನಿಸಿದ್ದ ಎಂದು ತಿಳಿದು ಬಂದಿದೆ. ತಂದೆ ತಾಯಿ ನಡುವೆ ತಂಗಿಯ ವಿಚಾರಕ್ಕೆ ಗಲಾಟೆ ಆಗಿರೋದಲ್ಲ ಬದಲಿಗೆ ಬ್ಯಾಂಕ್ನಲ್ಲಿ ತಂದೆ ಎಫ್ಡಿ ಇಟ್ಟಿದ್ದ ಬರೋಬ್ಬರಿ 1.20 ಕೋಟಿ ಹಣದ ವಿಚಾರಕ್ಕೆ ತಂದೆಯ ಜೊತೆಯೇ ಗಲಾಟೆ ಮಾಡಿದ್ದ ಅನ್ನೋ ಮಾಹಿತಿ ಲಭ್ಯವಾಗಿದೆ.
ಇದೇ ಹಣದ ವಿಚಾರದ ಬಗ್ಗೆ ಪಾತಕಿ ಅಕ್ಷಯ್ ಮಾವನ ಬಳಿ ಚರ್ಚೆ ಮಾಡಿದ್ದನು. ಹೆಚ್ಚು ಹಣದಾಸೆಗೆ ಅಳಿಯ ಅಕ್ಷಯ್ಗೆ ಮಾವ ವಸಂತನೇ ಪ್ಲಾನ್ ಹೇಳಿಕೊಟ್ಟಿದ್ದನು. ಸದ್ಯ ಎಲ್ಲಾ ಆಯಾಮದಲ್ಲಿಯೂ ಪೊಲೀಸರು ತನಿಖೆ ಮುಂದುವರಿಸಿದ್ದು, ತನಿಖೆಯ ನಂತರ ತ್ರಿವಳಿ ಕೊಲೆಯ ಅಸಲಿ ರಹಸ್ಯ ಹೊರಬರಲಿದೆ. ಈ ಹಣಕ್ಕಾಗಿಯೇ ತಂದೆ ತಾಯಿ, ತಂಗಿಯನ್ನು ಕೊಲೆ ಮಾಡಿದ್ದ ಎನ್ನಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.