2026-04-23 09:23:20

Big twist in Thalapathy Vijay divorce case | ದಳಪತಿ ವಿಜಯ್ ಡಿವೋರ್ಸ್ ಕೇಸ್‌ಗೆ ಬಿಗ್ ಟ್ವಿಸ್ಟ್ | Speed news kannada

Big twist in Thalapathy Vijay divorce case | ದಳಪತಿ ವಿಜಯ್ ಡಿವೋರ್ಸ್ ಕೇಸ್‌ಗೆ ಬಿಗ್ ಟ್ವಿಸ್ಟ್ | Speed news kannada

ತಮಿಳು ಚಿತ್ರರಂಗದ 'ದಳಪತಿ' ಹಾಗೂ ಟಿವಿಪಿ ಪಕ್ಷದ ನಾಯಕ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ ವಿಚ್ಛೇದನ ಪ್ರಕರಣ ಈಗ ಇಡೀ ದಕ್ಷಿಣ ಭಾರತದಲ್ಲೇ ಭಾರಿ ಚರ್ಚೆಗೆ ಕಾರಣವಾಗಿದೆ. ಫೆಬ್ರವರಿ 24, 2026 ರಂದು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಂಗೀತಾ ಅವರು ಕೇಸ್ ದಾಖಲಿಸಿದ್ದರು. ಇಂದು ಅಂದರೆ ಏಪ್ರಿಲ್ 20 ರಂದು ನಡೆದ ವಿಚಾರಣೆ ವೇಳೆ ಇಬ್ಬರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕಿತ್ತು. ರಾಜಕೀಯ ಚುನಾವಣೆ ಮತ್ತು ಭದ್ರತಾ ಕಾರಣಗಳಿಂದಾಗಿ ವಿಜಯ್ ಅವರು ಖುದ್ದಾಗಿ ಕೋರ್ಟ್‌ಗೆ ಬರಲು ಸಾಧ್ಯವಾಗದಿದ್ದರೂ, ಇಂದಿನ ಬೆಳವಣಿಗೆಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ. ಸಂಗೀತಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ ವಿಜಯ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಿಜಯ್ ಅವರಿಗೆ ಒಬ್ಬ ನಟಿಯ ಜೊತೆ ಅಕ್ರಮ ಸಂಬಂಧ ಇತ್ತು ಎಂಬ ವಿಷಯ ನನಗೆ 2021 ರಲ್ಲಿ ತಿಳಿಯಿತು ಎಂದು ಅವರು ಉಲ್ಲೇಖಿಸಿದ್ದಾರೆ.

ಇದೇ ಕಾರಣದಿಂದ ಮನನೊಂದು ನಾನು ಕಾನೂನುಬದ್ಧವಾಗಿ ವಿಚ್ಛೇದನ ಪಡೆಯಲು ನಿರ್ಧರಿಸಿದೆ ಎಂದು ಸಂಗೀತಾ ಕೋರ್ಟ್‌ಗೆ ವಿವರಿಸಿದ್ದಾರೆ. ಸ್ಪೆಶಲ್ ಮ್ಯಾರೇಜ್ ಆಕ್ಟ್ ಅಡಿಯಲ್ಲಿ ಈ ಪ್ರಕರಣ ದಾಖಲಾಗಿದೆ. ವಿಜಯ್ ಈಗ ಬರೀ ನಟನಲ್ಲ, ಅವರು ಒಂದು ಪಕ್ಷದ ನಾಯಕ. ಹೀಗಾಗಿ ಕೋರ್ಟ್‌ಗೆ ಬಂದರೆ ಅಭಿಮಾನಿಗಳ ದಂಡು ಸೇರುತ್ತದೆ ಮತ್ತು ಸೆಕ್ಯೂರಿಟಿ ಸಮಸ್ಯೆ ಉಂಟಾಗುತ್ತದೆ ಎಂದು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಅನುಮತಿ ಕೋರಿದ್ದರು. ಸಂಗೀತಾ ಕೂಡ ಹೈ ಪ್ರೊಫೈಲ್ ವ್ಯಕ್ತಿಯಾಗಿರುವುದರಿಂದ ಅವರೂ ಸಹ ಇದೇ ರೀತಿ ಮನೆಯಿಂದಲೇ ಕೋರ್ಟ್ ವಿಚಾರಣೆಯಲ್ಲಿ ಭಾಗವಹಿಸಲಿದ್ದಾರೆ. ಸಾಮಾನ್ಯವಾಗಿ ಇಂತಹ ಡಿವೋರ್ಸ್ ಪ್ರಕರಣಗಳು ಮುಗಿಯಲು ಸುಮಾರು ಒಂದು ವರ್ಷ ಕಾಲಾವಕಾಶ ಬೇಕಾಗುತ್ತದೆ.

ವಿಜಯ್ ಮತ್ತು ಸಂಗೀತಾ ಈಗಾಗ್ಲೇ ಪರಸ್ಪರ ಒಪ್ಪಿಗೆ ನೀಡಿರುವುದರಿಂದ ಇನ್ನೊಂದು 6 ರಿಂದ 7 ತಿಂಗಳಲ್ಲಿ ಅಂತಿಮ ತೀರ್ಪು ಹೊರಬರುವ ಸಾಧ್ಯತೆ ಇದೆ. ಜೂನ್ 15 ರಂದು ನಡೆಯಲಿರುವ ಮುಂದಿನ ವಿಚಾರಣೆ ಈ ಪ್ರಕರಣದ ಭವಿಷ್ಯವನ್ನು ನಿರ್ಧರಿಸಲಿದೆ. ವಿಜಯ್-ಸಂಗೀತಾ ಡಿವೋರ್ಸ್ ಈಗ ಅಂತಿಮ ಹಂತಕ್ಕೆ ತಲುಪಿದಂತೆ ಕಾಣುತ್ತಿದೆ. ಜೂನ್ 15 ರ ವಿಚಾರಣೆಯಲ್ಲಿ ಏನು ನಡೆಯುತ್ತೆ ಅನ್ನೋದನ್ನ ಇಡೀ ಸಿನೆಮಾ ಲೋಕ ಕುತೂಹಲದಿಂದ ಕಾಯುತ್ತಿದೆ. ಎಷ್ಟೇ ಆದ್ರೂ ಮನುಷ್ಯನಿಗೆ ನೆಮ್ಮದಿ ಮುಖ್ಯ, ಅವರ ಈ ನಿರ್ಧಾರ ಅವರಿಗೆ ಒಳ್ಳೆಯದಾಗಲಿ ಅನ್ನೋದೇ ಎಲ್ಲರ ಆಶಯ. ದಳಪತಿಯ ಮುಂದಿನ ಹಾದಿ ಹೇಗಿರಲಿದೆ ಅನ್ನೋದನ್ನ ಕಾದು ನೋಡಬೇಕು!

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.