2026-04-29 05:45:23

Big good news for transport workers|ಸಾರಿಗೆ ನೌಕರರಿಗೆ ಬಿಗ್ ಗುಡ್‌ನ್ಯೂಸ್|Speed News Kannada

Big good news for transport workers|ಸಾರಿಗೆ ನೌಕರರಿಗೆ ಬಿಗ್ ಗುಡ್‌ನ್ಯೂಸ್|Speed News Kannada

ದೀರ್ಘಕಾಲದ ಬೇಡಿಕೆ ಮತ್ತು ಹೋರಾಟಗಳ ಬಳಿಕ, ರಾಜ್ಯ ಸರ್ಕಾರವು ಸಾರಿಗೆ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ನಾಲ್ಕು ಸಾರಿಗೆ ನಿಗಮಗಳ ನೌಕರರ ಬಾಕಿ ವೇತನ ಹಿಂಬಾಕಿಯನ್ನು  ಪಾವತಿಸಲು ಮೊದಲ ಹಂತವಾಗಿ ₹450 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಕೆಎಸ್‌ಆರ್‌ಟಿಸಿ  ₹143.85 ಕೋಟಿ, ಬಿಎಂಟಿಸಿ ₹137.24 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ₹87.00 ಕೋಟಿ,ಕಲ್ಯಾಣ ಕರ್ನಾಟಕ ಸಾರಿಗೆ ₹81.91 ಕೋಟಿ.

ಒಟ್ಟು 26 ತಿಂಗಳ ವೇತನ ಬಾಕಿಯಾಗಿ ₹1,271.92 ಕೋಟಿ ಪಾವತಿಸಬೇಕಿದ್ದು, ಪ್ರಸ್ತುತ ಲಭ್ಯವಿರುವ ಹಣಕಾಸಿನ ಆಧಾರದಲ್ಲಿ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರ ಮೊದಲ ಹಂತದ ಹಣ ಬಿಡುಗಡೆ ಮಾಡಿರುವುದನ್ನು ನೌಕರರ ಸಂಘಟನೆಗಳು ಸ್ವಾಗತಿಸಿವೆ. ಆದಾಗ್ಯೂ, ಬಾಕಿ ಇರುವ ಉಳಿದ ₹821.92 ಕೋಟಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ನೌಕರರ ಒಕ್ಕೂಟಗಳು ಒತ್ತಾಯಿಸಿವೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೌಕರರು ನೀಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.