ಬಿಡದಿ: ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಕಳೆದ 436 ದಿನಗಳಿಂದ ಬಿಡದಿ ಹೋಬಳಿಯ ಬೈರಮಂಗಲದಲ್ಲಿ ಹೋರಾಟ ಮಾಡುತ್ತಿರುವ ರೈತರನ್ನು ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ನಡೆಸಿದರು. ಇಂದು ರೈತರನ್ನು ಭೇಟ ಮಾಡಿದ ಅವರು, ಅವರೊಂದಿಗೆ ಸಂವಾದ ನಡೆಸಿದರು.
ಈ ಭಾಗದಲ್ಲಿ ರೈತರೇ ಇಲ್ಲ! ಈಗಾಗಲೇ ಶೇ.80 ರೈತರು ಯೋಜನೆ ಒಪ್ಪಿದ್ದಾರೆ ಎಂದು ಸುಳ್ಳು ಹೇಳುವ ಸರ್ಕಾರ ನಿಜವಾದ ರೈತರ ಅಳಲನ್ನು ಆಲಿಸದೇ ಇರುವುದು ದುರ್ಧೈವದ ಸಂಗತಿ. "ನನ್ನ ರೈತ ಬಂಧುಗಳು ಯಾವುದೇ ಕಾರಣಕ್ಕೂ ಭಯಪಡಬೇಡಿ. ನಾವೆಲ್ಲರೂ ಕಾನೂನು ಹೋರಾಟ ಮಾಡೋಣ", ಎಂದು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ. ಎ. ಮಂಜುನಾಥ್, ಜಿಲ್ಲಾಧ್ಯಕ್ಷ ಜಯಮುತ್ತು ಅವರು ಹಾಗೂ ರೈತ ಮುಖಂಡರು, ಉಪಸ್ಥಿತರಿದ್ದರು.