2026-03-07 12:09:15

BGS MD Sri Sri Dr. Prakashanath Swamiji | ಬಿಜಿಎಸ್‌ ಗ್ರೂಪ್ ಆಫ್ ಹೆಲ್ತ್ & ಎಜುಕೇಶನ್‌ ವ್ಯವಸ್ಥಾಪಕ ನಿರ್ದೇಶಕರು, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ ಟ್ರಸ್ಟಿ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿ ಅವರ ಷಷ್ಟ್ಯಬ್ದಿ ಆಚರಣೆ: ಬಿಜಿಎಸ್‌ ಶಿಕ್ಷಣ ಸಂಸ್ಥೆ, ಕುಂಬಳಗೋಡು ಸಜ್ಜು|SNK

BGS MD Sri Sri Dr. Prakashanath Swamiji | ಬಿಜಿಎಸ್‌ ಗ್ರೂಪ್ ಆಫ್ ಹೆಲ್ತ್ & ಎಜುಕೇಶನ್‌ ವ್ಯವಸ್ಥಾಪಕ ನಿರ್ದೇಶಕರು, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ ಟ್ರಸ್ಟಿ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿ ಅವರ ಷಷ್ಟ್ಯಬ್ದಿ ಆಚರಣೆ: ಬಿಜಿಎಸ್‌ ಶಿಕ್ಷಣ ಸಂಸ್ಥೆ, ಕುಂಬಳಗೋಡು ಸಜ್ಜು|SNK

ಬೆಂಗಳೂರು: ಬಿಜಿಎಸ್ ಗ್ರೂಪ್ ಆಫ್ ಹೆಲ್ತ್ & ಎಜುಕೇಶನ್‌ ನ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿಯವರು ಷಷ್ಟ್ಯಬ್ದಿ ಆಚರಿಸಿಕೊಳ್ಳುತ್ತಿದ್ದಾರೆ. ಆಧ್ಯಾತ್ಮ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಇವರು ನೀಡುತ್ತಿರುವ ಕೊಡುಗೆ ಅನನ್ಯ. 
ಪರಮಪೂಜ್ಯ ಭೈರವೈಕ್ಯ ಪದ್ಮಭೂಷಣ ಶ್ರೀ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ದೈವಿಕ ಆಶೀರ್ವಾದದಿಂದ ತಮ್ಮ ಏಳನೇ ವಯಸ್ಸಿನಲ್ಲೇ ಶ್ರೀ ಆದಿಚುಂಚನಗಿರಿ ಮಠಕ್ಕೆ ಸೇರ್ಪಡೆಗೊಂಡ ಇವರು ಸತತ ನಾಲ್ಕು ದಶಕಗಳಿಂದ ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.  
ಶಿಕ್ಷಣದಿಂದ ಮಾತ್ರ ಸಮಾಜದ ಉದ್ದಾರ ಸಾಧ್ಯ ಎಂದು ಭಾವಿಸಿರುವ ಸ್ವಾಮೀಜಿಗಳು, ಬಿಜಿಎಸ್ ಮತ್ತು ಎಸ್‌ಜೆಬಿ ಸಮೂಹ ಸಂಸ್ಥೆಗಳನ್ನು ವಿಶ್ವ ದರ್ಜೆಯ ಕಲಿಕೆ ಮತ್ತು ಸೇವಾ ಕೇಂದ್ರಗಳಾಗಿ ಪರಿವರ್ತಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರೆ 10 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ.
60 ನೇ ವಸಂತಕ್ಕೆ ಕಾಲಿರಿಸುತ್ತಿರುವ ಡಾ. ಪ್ರಕಾಶನಾಥ ಸ್ವಾಮೀಜಿ ಅವರಿಗೆ ಬೆಂಗಳೂರು ಕರ್ನಾಟಕ ಮಾತ್ರವಲ್ಲದೆ ದೇಶ  ವಿದೇಶಗಳಿಂದಲೂ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. 
ಷಷ್ಟ್ಯಬ್ದಿ ಆಚರಿಸಿಕೊಳ್ಳುತ್ತಿರುವ ಪರಮಪೂಜ್ಯ ಸ್ವಾಮೀಜಿಗಳು ಮಂಗಳವಾರ ತಿರುಪತಿಗೆ ಭೇಟಿ ಶ್ರೀನಿವಾಸನ ದರ್ಶನ ಪಡೆದುಕೊಂಡರು. ತಿರುಪತಿಯಲ್ಲೂ ಸಹಸ್ರಾರು ಭಕ್ತರು ಇವರನ್ನು ಭೇಟಿ ಮಾಡಿ ಆಶೀರ್ವಚನ ಪಡೆದುಕೊಂಡದ್ದು ವಿಶೇಷವಾಗಿತ್ತು.
ಷಷ್ಟ್ಯಬ್ದಿ ಅಂಗವಾಗಿ ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದೆ.ಶ್ರೀನಿವಾಸ ದೇವರ ಅಪ್ಪಣೆಯಾಗಿದ್ದು, ತಾವೇ ಆಗಮಿಸಿ ಕಲ್ಯಾಣೋತ್ಸವ ನಡೆಸಿಕೊಡುವುದಾಗಿ ತಿರುಪತಿ ಶ್ರೀನಿವಾಸ ದೇವಾಲಯದ ಅರ್ಚಕರು ಭರವಸೆ ನೀಡಿದ್ದಾರೆ. ಈ ನಿರ್ಧಾರ ಇವರ ಮೇಲಿಟ್ಟಿರುವ ಪ್ರೀತಿಯ ದ್ಯೋತಕವೂ ಹೌದು! 
ನಂತರ ಪರಮಪೂಜ್ಯ ಸ್ವಾಮೀಜಿಯವರು ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದ್ದರು. ಅಲ್ಲಿಯೂ ಸಾವಿರಾರು ಭಕ್ತರು ಪ್ರಕಾಶನಾಥ ಸ್ವಾಮೀಜಿಗಳನ್ನು ಸ್ವಾಗತಿಸಿದರು. ಈ ಸಂದರ್ಭ ಕಂಡು “ನಮ್ಮ ಯೋಗ್ಯತೆಗೆ ಮೀರಿದ ಸ್ವಾಗತ ನನಗೆ ದೊರಕಿದೆ. ಅದು ನನ್ನ ಭಾಗ್ಯ. ಆ ಪ್ರೀತಿ, ಆ ಗೌರವವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ ಎಂದು ಭಾವುಕರಾದರು.
ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಮತ್ತು ನೈತಿಕತೆ ಜತೆ ಜತೆಯಾಗಿ ಸಾಗಿದರೆ ಸಮಾಜದ ಸರ್ವತೋಮುಖ ಸಾಧ್ಯ ಎನ್ನುವುದು ಸ್ವಾಮೀಜಿಗಳ ಅಭಿಪ್ರಾಯ.
ಡಾ.ಪ್ರಕಾಶನಾಥ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಂಸ್ಥೆಗಳು:
ಇಂಜಿನಿಯರಿಂಗ್‌ ಸಂಸ್ಥೆಗಳು:
ಎಸ್‌ಜೆಬಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಸ್‌ಜೆಬಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ & ಪ್ಲಾನಿಂಗ್‌, ಬಿಜಿಎಸ್ ಬಿ-ಸ್ಕೂಲ್, ಎಸ್‌ಜೆಬಿ ಶಿಕ್ಷಣ ಮಹಾವಿದ್ಯಾಲಯ,ಬಿಜಿಎಸ್ ಆರ್ಟ್ಸ್ & ಡಿಸೈನ್ ಅಕಾಡೆಮಿ. ಬಿಜಿಎಸ್ ಸ್ಕೂಲ್ ಆಫ್ ಹೋಟೆಲ್ ಮ್ಯಾನೇಜ್‌ ಮೆಂಟ್, ಕುಂಬಳಗೋಡು, ಬಿ.ಜಿ.ಎಸ್. ಪ್ರಿ ಯೂನಿವರ್ಸಿಟಿ ಕಾಲೇಜು.
ವೈದ್ಯಕೀಯ ಸಂಸ್ಥೆಗಳು ಮತ್ತು ಆಸ್ಪತ್ರೆಗಳು:
ಬಿಜಿಎಸ್ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಡೆಂಟಲ್ ಸೈನ್ಸಸ್, ನರ್ಸಿಂಗ್ ಸೈನ್ಸಸ್, ಫಾರ್ಮಾಸ್ಯುಟಿಕಲ್ ಸೈನ್ಸಸ್, ಫಿಸಿಯೋಥೆರಪಿ, ನರ್ಸಿಂಗ್, ಬಿಜಿಎಸ್ ಜಿಐಎಂಎಸ್ ಆಸ್ಪತ್ರೆ, ಬಿಜಿಎಸ್ ಗ್ಲೆನೀಗಲ್ಸ್ ಆಸ್ಪತ್ರೆ, ಹೆಲ್ತ್ ಸೈನ್ಸಸ್.
ಶಾಲೆಗಳು:
ಬಿಜಿಎಸ್ ಅಂತರರಾಷ್ಟ್ರೀಯ ವಸತಿ ಶಾಲೆ, ಬಿಜಿಎಸ್ ರಾಷ್ಟ್ರೀಯ ಸಾರ್ವಜನಿಕ ಶಾಲೆಗಳು (ಬನ್ನೇರುಘಟ್ಟ), ಬಿಜಿಎಸ್ ಇಂಟರ್‌ ನ್ಯಾಷನಲ್ ಅಕಾಡೆಮಿ, ಕುಂಬಳಗೋಡು, ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ (ಹುಳಿಮಾವು), ಬಿಜಿಎಸ್ ಹೈ (ಕೇಂಬ್ರಿಡ್ಜ್ ಪಠ್ಯಕ್ರಮ), ಬಿಜಿಎಸ್ ಸಾರ್ವಜನಿಕ ಶಾಲೆ, ಬಿಜಿಎಸ್ ಇಂಟರ್‌ ನ್ಯಾಷನಲ್ ಪಬ್ಲಿಕ್ ಸ್ಕೂಲ್(ನವದೆಹಲಿ).
ಪ್ರಶಸ್ತಿಗಳ ಸರಮಾಲೆ: 
ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಮಾಜ ಸೇವೆಗಾಗಿ ಪರಮಪೂಜ್ಯ ಪ್ರಕಾಶನಾಥ ಸ್ವಾಮೀಜಿಯವರನ್ನು ಅರಸಿ ಬಂದ ಪ್ರಶಸ್ತಿ, ಗೌರವಗಳು ಒಂದೆರಡಲ್ಲ, ನೂರಾರು ಸಂಘ ಸಂಸ್ಥೆಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಸ್ವಾಮೀಜಿಯವರನ್ನು ಅರಸಿ ಬಂದಿವೆ. 
ದಕ್ಷಿಣ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ. ದುಬೈನ ವಿಶ್ವ ವೈದ್ಯಕೀಯ ಮಂಡಳಿಯ ಜೀವಮಾನ ಸಾಧನೆ ಪ್ರಶಸ್ತಿ, ವೈದ್ಯಕೀಯ ಶಿಕ್ಷಣದಲ್ಲಿನ ಸೇವೆಗಾಗಿ WMC ಮೆಡಿ ಬಿಜ್ ಟಿವಿ ಪ್ರಶಸ್ತಿ. ಬೆಂಗಳೂರು ಮ್ಯಾನೇಜ್‌ ಮೆಂಟ್ ಅಸೋಸಿಯೇಷನ್ ನ 2018 ರ ಜೀವಮಾನ ಸಾಧನೆ ಪ್ರಶಸ್ತಿ, ದಯಾನಂದ ಸಾಗರ್ ಪ್ರತಿಷ್ಠಾನದ ಸಾಗರ್ ಪ್ರಶಸ್ತಿ- 2018, ಬೆಂಗಳೂರಿನ 7ನೇ ಅಂತರರಾಷ್ಟ್ರೀಯ K-12 ನಾಯಕತ್ವ ಕಾರ್ಯಕ್ರಮದಲ್ಲಿ ಡಿಜಿಟಲ್ ನಾಯಕತ್ವ ಪ್ರಶಸ್ತಿ- 2019 ಸಂದಿವೆ.
ಎಜುಕೇಶನ್ ಟುಡೇ ನೀಡುವ 2019 ರ ಎಜುಕೇಶನ್ ಸ್ಟಾಲ್‌ ವರ್ಟ್‌ ಪ್ರಶಸ್ತಿ ಮತ್ತು 2020 ರ ವರ್ಷದ ಶಿಕ್ಷಣ ಐಕಾನ್ ಪ್ರಶಸ್ತಿ, ಸೇವಾ ಸಾಧನಾ ತಪಸ್ವಿ ಪ್ರಶಸ್ತಿ- 2020, ಭಾರತ್ ಶಿಕ್ಷಾ ರತನ್ ಪ್ರಶಸ್ತಿ- 2020, ಗುರು ಅನುಗ್ರಹ ಪ್ರಶಸ್ತಿ- 2024, ಸುವರ್ಣ ಕನ್ನಡಿಗ - 2025 ಪ್ರಶಸ್ತಿ, ಯುನೈಟೆಡ್ ಕಿಂಗ್‌ಡಮ್‌ ನ ವೆಸ್ಟ್‌ಮಿನಿಸ್ಟರ್‌ ನ ಡಿಫ್ಯಾಕ್ಟೊ ಇಡಿ ಅವರಿಂದ 21 ನೇ ಶತಮಾನದ ಶಿಕ್ಷಣದಲ್ಲಿ ನವೀನ ನಾಯಕ (2024)  ಪ್ರಶಸ್ತಿಗೆ ಭಾಜನರಾಗಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.