2026-03-07 05:08:30

Australia Out | ಮಳೆಗೆ ಬಲಿಯಾಯ್ತು ಬಲಿಷ್ಠ ಆಸೀಸ್ ವರ್ಷಗಳ ನಂತರ ಗ್ರೂಪ್ ಹಂತದಲ್ಲೇ ಹೊರಬಿದ್ದ ಕಾಂಗರೂಗಳು | Speed News Kannada

Australia Out | ಮಳೆಗೆ ಬಲಿಯಾಯ್ತು ಬಲಿಷ್ಠ ಆಸೀಸ್ ವರ್ಷಗಳ ನಂತರ ಗ್ರೂಪ್ ಹಂತದಲ್ಲೇ ಹೊರಬಿದ್ದ ಕಾಂಗರೂಗಳು | Speed News Kannada

ಪಲ್ಲೆಕೆಲೆ: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇಂದು ಕರಾಳ ದಿನವೊಂದು ದಾಖಲಾಗಿದೆ. ಮಾಜಿ ಚಾಂಪಿಯನ್ ಮತ್ತು ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಒಂದಾದ ಆಸ್ಟ್ರೇಲಿಯಾ (Australia Out), 2026ರ ಟಿ20 ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಮಂಗಳವಾರ ಪಲ್ಲೆಕೆಲೆಯಲ್ಲಿ ನಡೆಯಬೇಕಿದ್ದ ಜಿಂಬಾಬೈ ಮತ್ತು ಐರ್ಲೆಂಡ್ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾದ ಬೆನ್ನಲ್ಲೇ ಆಸ್ಟ್ರೇಲಿಯಾದ ಸೂಪರ್-8 ಹಂತಕ್ಕೇರುವ ಅಲ್ಪ ಆಸೆ ಕೂಡ ಕಮರಿ ಹೋಗಿದೆ.

ಮಳೆ ತಂದ ಅದೃಷ್ಟ, ಆಸೀಸ್‌ಗೆ ದುರಾದೃಷ್ಟ..!
ಜಿಂಬಾಬ್‌ ಮತ್ತು ಐರ್ಲೆಂಡ್ ಪಂದ್ಯದಲ್ಲಿ ಕನಿಷ್ಠ ಟಾಸ್ ಕೂಡ ಮಾಡಲು ಸಾಧ್ಯವಾಗದಂತೆ ಮಳೆ ಅಡ್ಡಿಪಡಿಸಿತು. ನಿಯಮದಂತೆ ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ಹಂಚಲಾಯಿತು. ಈ ಒಂದು ಅಂಕದೊಂದಿಗೆ ಜಿಂಬಾಬೈ ಒಟ್ಟು 5 ಅಂಕಗಳನ್ನು ಗಳಿಸಿ ಗ್ರೂಪ್ ಬಿ ನಿಂದ ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಿತು. ಇತ್ತ ಆಸ್ಟ್ರೇಲಿಯಾ ತಂಡವು ತನ್ನ ಅಂತಿಮ ಪಂದ್ಯವನ್ನು ಗೆದ್ದರೂ ಗರಿಷ್ಠ 4 ಅಂಕಗಳನ್ನು ಮಾತ್ರ ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ಶ್ರೀಲಂಕಾ ಮತ್ತು ಜಿಂಬಾಬೈ, ಮುಂದಿನ ಹಂತಕ್ಕೆ ಲಗ್ಗೆ ಇಟ್ಟರೆ, ಆಸ್ಟ್ರೇಲಿಯಾ ತವರಿಗೆ ಮರಳುವಂತಾಗಿದೆ.

ಇದನ್ನು ಓದಿ: ನಖಿ ಅಸಮರ್ಥ ಅಂದಿದ್ದ ಸ್ಪೀಡ್ ಕಿಂಗ್, ದಿಢೀರ್ ಉಲ್ಟಾ ಹೊಡೆದಿದ್ದೇಕೆ.,: ರಾವಲ್ಪಿಂಡಿ ಎಕ್ಸ್‌ ಪ್ರೆಸ್ ಹೇಳಿಕೆ ಬದಲಾಗಿದ್ದೆಲ್ಲಿ..? Shoaib Akhtar 17 ವರ್ಷಗಳ ಬಳಿಕ ಇತಿಹಾಸ ಪುನರಾವರ್ತನೆ
2021ರ ಚಾಂಪಿಯನ್ ಆಸ್ಟ್ರೇಲಿಯಾವು ಗ್ರೂಪ್ ಹಂತದಲ್ಲೇ ಹೊರಬಿದ್ದಿರುವುದು ಕ್ರಿಕೆಟ್ ಜಗತ್ತಿಗೆ ಶಾಕ್ ನೀಡಿದೆ. 2009ರ ನಂತರ ಅಂದರೆ ಬರೋಬ್ಬರಿ 17 ವರ್ಷಗಳ ಬಳಿಕ ಕಾಂಗರೂ ಪಡೆ ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ನಿರ್ಗಮಿಸುತ್ತಿದೆ. ಆರಂಭಿಕ ಪಂದ್ಯಗಳಲ್ಲಿ ಜಿಂಬಾಬ್ಳೆ ವಿರುದ್ಧ ಅನುಭವಿಸಿದ ಅಚ್ಚರಿಯ ಸೋಲು ಮತ್ತು ಶ್ರೀಲಂಕಾ ವಿರುದ್ಧದ ಹೀನಾಯ ಅಪಜಯವು ಆಸ್ಟ್ರೇಲಿಯಾ ಪತನಕ್ಕೆ ಮುಖ್ಯ ಕಾರಣವಾಯಿತು.

ಜಿಂಬಾಬ್ಬೆ ಕೆಚ್ಚೆದೆಯ ಹೋರಾಟ
ಸಿಕಂದ‌ರ್ ರಾಜಾ ನೇತೃತ್ವದ ಜಿಂಬಾಬೈ ತಂಡ ಈ ಬಾರಿ ಅದ್ಭುತ ಪ್ರದರ್ಶನ ನೀಡಿದೆ. ಕೇವಲ ಅದೃಷ್ಟದಿಂದ ಮಾತ್ರವಲ್ಲದೆ, ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವನ್ನು ಸೋಲಿಸುವ ಮೂಲಕ ತಾವು ಸೂಪರ್-8 ಗೆ ಅರ್ಹರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಈಗ ಜಿಂಬಾಬ್‌ ತಂಡವು ಫೆಬ್ರವರಿ 19 ರಂದು ಕೊಲೊಂಬೊದಲ್ಲಿ ಶ್ರೀಲಂಕಾ ವಿರುದ್ಧ ಸೆಣಸಲಿದ್ದು, ಈ ಪಂದ್ಯವು ಗುಂಪಿನ ಅಗ್ರಸ್ಥಾನಕ್ಕೆ ಯಾರು ಎಂಬುದನ್ನು ನಿರ್ಧರಿಸಲಿದೆ (ಏಜೆನ್ಸಿಸ್).

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.