2026-03-07 07:28:54

Astrologer Kamalakar Bhat | ಅಕ್ರಮ ಸಂಬಂಧದ ಬಗ್ಗೆ ದೂರು ನೀಡಿದ್ದಕ್ಕೆ ಕೊಲೆ: ಖ್ಯಾತ ಜೋತಿಷಿ ಕಮಲಾಕರ್ ಭಟ್ ಸೇರಿದಂತೆ 7 ಜನ ಪೊಲೀಸ್‌ ವಶಕ್ಕೆ | Speed News Kannada

Astrologer Kamalakar Bhat | ಅಕ್ರಮ ಸಂಬಂಧದ ಬಗ್ಗೆ ದೂರು ನೀಡಿದ್ದಕ್ಕೆ ಕೊಲೆ: ಖ್ಯಾತ ಜೋತಿಷಿ ಕಮಲಾಕರ್ ಭಟ್ ಸೇರಿದಂತೆ 7 ಜನ ಪೊಲೀಸ್‌ ವಶಕ್ಕೆ | Speed News Kannada

ಕಾರವಾರ: ಅಕ್ರಮ ಸಂಬಂಧ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ನಡೆದಿದೆ.ಹಲ್ಲೆಗೊಳಗಾಗಿದ್ದ ಮೂವರ ಪೈಕಿ ಓರ್ವ ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ವಸಂತ್ ಮೃತ ದುರ್ದೈವಿ. ಕೃತ್ಯವೆಸಗಿ ಪರಾರಿಯಾಗುತ್ತಿದ್ದ ಖ್ಯಾತ ಜೋತಿಷಿ ಕಮಲಾಕರ ಭಟ್ ಸೇರಿದಂತೆ 7 ಜನರನ್ನು ಸಿದ್ಕೊಲೆ ಬಳಿಕ ಸಿದ್ಧಾಪುರದಿಂದ ಕಮಲಾಕರ್ ಭಟ್ ಹಾಗೂ ಸುಚಿತ್ರ ಎಸ್ಕೆಪ್ ಆಗುತ್ತಿದ್ದರು. ಈ ವೇಳೆ ಪೊಲೀಸರು ಕಮಲಾಕರ್ ಭಟ್, ಸುಚಿತ್ರಾ ಹಾಗೂ ಸುಚಿತ್ರಾ ತಂದೆ ಲೋಕನಾಥ್ ಸೇರಿದಂತೆ 7 ಜನರನ್ನು ಬಂಧಿಸಿದ್ದಾರೆ. ಶಿವಮೊಗ್ಗದಲ್ಲಿ ಮೂವರು ಹಾಗೂ ಸಿದ್ದಾಪುರದಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಚಿತ್ರಾ ಪತಿ ಮಹೇಶ್ ನಾಯ್ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿದ್ದರು. ಆಗಾಗ ಊರಾದ ಸಿದ್ದಾಪುರಕ್ಕೆ ಬರುತ್ತಿದ್ದರು. ಪತ್ನಿ ಸುಚಿತ್ರಾ ಹಾಗೂ ಇಬ್ಬರು ಹೆಣ್ಣುಮಕ್ಕಳು ಪತಿ ಸುಚಿತ್ರಾ ಜೊತೆ ಸಿದ್ದಾಪುರದಲ್ಲಿ ವಾಸವಾಗಿದ್ದರು. ಸುಚಿತ್ರಾಳಿಗೆ ಇತ್ತೀಚೆಗೆ ಜ್ಯೋತಿಷಿ ಕಮಲಾಕರ್ ಭಟ್ ಪರಿಚಯವಾಗಿದೆ. ಜೋತಿಷ್ಯ ಹೇಳುತ್ತಿದ್ದ ಕಮಲಾಕರ್ ಭಟ್ ಆಗಾಗ ಸುಚಿತ್ರಾ ಮನೆಗೆ ಬರುತ್ತಿದ್ದವನು ಆಗಾಗ ಅಲ್ಲಿಯೇ ಇರುತ್ತಿದ್ದ. ಇದು ಸುಚಿತ್ರಾಳ ಮಕ್ಕಳಿಗೆ ಇಷ್ಟವಾಗುತ್ತಿರಲಿಲ್ಲ.
ಅಲ್ಲದೇ ತಾಯಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ನಡುವೆ ಸಲುಗೆ ಇರುವ ವಿಚಾರ ಹಿರಿಯ ಮಗಳಿಗೆ ಗೊತ್ತಾಗಿದೆ. ಇದರಿಂದ ತಾಯಿ ವರ್ತನೆಯನ್ನು ಮಗಳು ಪ್ರಶ್ನಿಸಿದ್ದಳು. ಇದೇ ವಿಚಾರವಾಗಿ ಕೋಪಗೊಂಡಿದ್ದ ತಾಯಿ ಸುಚಿತ್ರಾ ಮಗಳಿಗೆ ಹಿಂಸಿಸುತ್ತಿದ್ದಳು. ಕಮಲಾಕರ್ ಭಟ್ ಹಾಗೂ ತಾಯಿ ಸುಚಿತ್ರಾಳ ಹುಚ್ಚಾಟದಿಂದ ಬೇಸತ್ತಿದ್ದ ಮಗಳು ಬೆಂಗಳೂರಿನಲ್ಲಿದ್ದ ತಂದೆಗೆ ವಿಚಾರ ಹೇಳಿದ್ದಳು. ಅಲ್ಲದೇ ತನಗೂ ತನ್ನ ಸಹೋದರಿಗೂ ತುಂಬಾ ಕಷ್ಟವಾಗುತ್ತಿದೆ. ನಮಗೆ ಈ ಮನೆಯಲ್ಲಿ ಇರಲು ಸಾಧ್ಯವಿಲ್ಲ, ತಾಯಿ ಸುಚಿತ್ರಾಳಿಂದ ನಮ್ಮನ್ನು ರಕ್ಷಿಸುವಂತೆ ತಂದೆಗೆ ಮೆಸೇಜ್ ಕಳುಹಿಸಿದ್ದಳು.
ಮಗಳ ಮೆಸೇಜ್ ನೋಡಿ ಊರಿಗೆ ದೌಡಾಯಿಸಿದ್ದ ಮಹೇಶ್ ನಾಯ್, ಸಿದ್ಧಾಪುರ ಬಸ್ ನಿಲ್ದಾಣದಲ್ಲಿ ಮಗಳನ್ನು ಭೇಟಿಯಾಗಿ ವಿಷಯ ತಿಳಿದುಕೊಂಡಿದ್ದ. ತಾಯಿ ಸುಚಿತ್ರಾ ಹಾಗೂ ಕಮಲಾಕರ್ ಭಟ್ ನಡುವೆ ಅನೈತಿಕ ಸಂಬಂಧವಿರುವ ಬಗ್ಗೆ ಹಾಗೂ ಮಕ್ಕಳಿಬ್ಬರಿಗೂ ಅವರು ಹಿಂಸಿಸುತ್ತಿರುವ ಬಗ್ಗೆ ತಿಳಿದು ಆಘಾತಗೊಂಡಿದ್ದ ಮಹೇಶ್ ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದ.ಪೊಲೀಸ್ ಠಾಣೆಯಿಂದ ವಾಪಸ್ ಆಗಿದ್ದ ಮಹೇಶ್, ಸಹೋದರ ವಸಂತ್ ಮನೆಗೆ ಹೋಗಿದ್ದ. ಪೊಲೀಸರಿಗೆ ದೂರು ನೀಡಿದ್ದ ವಿಷಯ ತಿಳಿದ ಕಮಲಾಕರ್ ಭಟ್ ಹಾಗೂ ಸುಚಿತ್ರಾ ಹಾಗೂ ಆಕೆಯ ತಂದೆ ಲೋಕನಾಥ್ ಹಾಗೂ ಇತರರು ವಸಂತ್ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ಅಲ್ಲದೇ ಮಹೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ವಸಂತ್ ತಪ್ಪಿಸಲು ಮುಂದಾಗಿದ್ದ ವೇಳೆ ವಸಂತ್ ಮೇಲೂ ಹಲ್ಲೆ ನಡೆಸಿದ್ದು, ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅನೈತಿಕ ಸಂಬಂಧ, ಕೊಲೆ ಪ್ರಕರಣ ಸಂಬಂಧ ಸುಚಿತ್ರಾ, ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಇತರರ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಇದೀಗ ಕಮಲಾಕರ್ ಭಟ್ ಸೇರಿ 7 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.