2026-03-07 05:59:19

Another Love Jihad in Bengaluru | ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಹಿಂದೂ ಯುವತಿಯನ್ನು ಮತಾಂತರ ಮಾಡಿ ಮಗು ಕರುಣಿಸಿ ಎಸ್ಕೆಪ್ ಆದ ಮುಸ್ಲಿಂ ಯುವಕ | Speed News Kannada

Another Love Jihad in Bengaluru | ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಹಿಂದೂ ಯುವತಿಯನ್ನು ಮತಾಂತರ ಮಾಡಿ ಮಗು ಕರುಣಿಸಿ ಎಸ್ಕೆಪ್ ಆದ ಮುಸ್ಲಿಂ ಯುವಕ | Speed News Kannada

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಯುತಿಯನ್ನು ಪ್ರೀತಿಸಿ ಮದುವೆ ನಾಟಕವಾಡಿ ಇಸ್ಲಾಂಗೆ ಮತಾಂತರ ಮಾಡಿದ ಮುಸ್ಲಿಂ ಯುವಕ, ಮಗುವನ್ನೂ ಕೈಗೆ ಕೊಟ್ಟು ಎಸ್ಕೆಪ್ ಆಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿಯಾಗಿರುವ ಸೈಯದ್ ಇಮ್ಮಿಯಾಜ್ ಯುವತಿಗೆ ಮೋಸ ಮಾಡಿ ನಾಪತ್ತೆಯಾಗಿರುವ ಯುವಕ.
ಸಾಮಾಜಿಕ ಜಾಲತಾಣಗಳಲ್ಲಿ ಕೋಲ್ಕತ್ತಾ ಮೂಲದ ಹಿಂದೂ ಯುವತಿ ಸೈಯದ್ ಗೆ ಪರಿಚಯವಾಗಿದೆ.
ಹೀಗೆ ಆರಂಭವಾದ ಇಬ್ಬರ ಪರಿಚಯ, ಸ್ನೇಹ ಪ್ರೀತಿಗೆ ತಿರುಗಿದೆ. ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾಗಿ ಆರೋಪಿಸಲಾಗಿದೆ. ಜೈನಬ್ ಎಂದು ಯುವತಿಯ ಹೆಸರನ್ನು ಬದಲಿಸಲಾಗಿದೆ. ಮತಾಂತರದ ಬಳಿಕ ೨೦೨೫ರ ಜು.೧೮ರಂದು ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಬಳಿಕ ಇಬ್ಬರೂ ಕೋಲ್ಕಾತ್ತಾಗೆ ತೆರಳಿದ್ದರು. ಪತ್ನಿಗೆ ಗರ್ಭಪಾತವನ್ನು ಮಾಡಿಸಿದ್ದನಂತೆ ಸೈಯದ್ ಇಮ್ಮಿಯಾಜ್.
ಇದಾದ ಬಳಿಕ ಮತ್ತೆ ಗರ್ಭಿಣಿಯಾಗಿದ್ದ ಜೈನೆಬ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಕೋಲ್ಕತ್ತಾದಲ್ಲಿ ತಾಯಿ ಹಾಗೂ ಮಗು ಇಬ್ಬರನ್ನೂ ಬಿಟ್ಟು ಸೈಯದ್ ಎಸ್ಕೆಪ್ ಆಗಿದ್ದಾನೆ. ಮತ್ತೆ ವಾಪಸ್ ಕೋಲ್ಕತ್ತಾಗೆ ಪತ್ನಿ ಇದ್ದಲ್ಲಿಗೆ ಹೋಗಿಲ್ಲವಂತೆ. ಸೈಯದ್ ಮೋಸಕ್ಕೆ ನೊಂದ ಯುವತಿ ಮಗುವಿನೊಂದಿಗೆ ಬೆಂಗಳೂರಿಗೆ ಆಗಮಿಸಿದ್ದು, ತನ್ನ ಪತಿಯನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾಳೆ. ಮಗುವಿನೊಂದಿಗೆ ನ್ಯಾಯಕ್ಕಾಗಿ ವಕೀಲರ ಜೊತೆ ಬೆಂಗಳೂರಿನ ಹೈಗೌಂಡ್ಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.