2026-06-08 01:28:42

ಬಿಜೆಪಿಯಿಂದ ದೂರ; ಹೊಸ ಪಕ್ಷ ಸ್ಥಾಪನೆಯತ್ತ ಅಣ್ಣಾಮಲೈ|Speed News Kannada

ಬಿಜೆಪಿಯಿಂದ ದೂರ; ಹೊಸ ಪಕ್ಷ ಸ್ಥಾಪನೆಯತ್ತ ಅಣ್ಣಾಮಲೈ|Speed News Kannada

ಚೆನ್ನೈ: ಮಾಜಿ ಐಪಿಎಸ್‌ ಅಧಿಕಾರಿ ತಮಿಳುನಾಡು ಬಿಜೆಪಿ ಮುಖಂಡ, ಕೆ ಅಣ್ಣಾಮಲೈ ಅವರು ಹೊಸ ಪಕ್ಷ ಪ್ರಾರಂಭಿಸುವ ಲಕ್ಷಣಗಳು ಗೋಚರಿಸುತ್ತಿವೆ. ಎಕ್ಸ್‌ ನಲ್ಲಿ ಅವರು ಮಾಡುತ್ತಿರುವ ಪೋಸ್ಟ್‌ ಗಳೂ ಸಹ ಇದೇ ಮುನ್ಸೂಚನೆ ನೀಡುತ್ತಿವೆ. ಸಮಾನ ಮನಸ್ಕರೊಂದಿಗೆ ಸೇರಿ ಹೊಸ ಪಕ್ಷ ಸ್ಥಾಪಿಸುವ ಉದ್ದೇಶ ಹೊಂದಿದ್ದಾರೆ. ಹೊಸ ಪಕ್ಷಕ್ಕೆ “ಮಕ್ಕಳ್‌ ಶಕ್ತಿ ಇಯಕ್ಕಂ” ಎಂದು ನಾಮಕರಣ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೆ ಪೂರಕವಗಿ 9ನೇ ತರಗತಿ ವಿದ್ಯಾರ್ಥಿಗಳು ಮೂರನೇ ಭಾಷೆಯನ್ನು ಕಲಿಯಬೇಕು ಎಂಬ ಸಿಬಿಎ ಇ ನಿಯಮವನ್ನು ಅಣ್ಣಾಮಲೈ ವಿರೋಧಿಸಿ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ನೀತಿಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದ ಅವರು, ಇದು ತಮಿಳುನಾಡಿನ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅನಗತ್ಯ ಮಾನಸಿಕ ಒತ್ತಡ ಉಂಟುಮಾಡುತ್ತಿದೆ ಎಂದು ಹೇಳಿದ್ದರು. ಮತ್ತೊಂದು ಪೋಸ್ಟ್‌ ನಲ್ಲಿ ಟಿವಿಕೆಯನ್ನು ಆಯ್ಕೆ ಮಾಡಿದ್ದಕ್ಕೂ ತಮಿಳುನಾಡು ಜನತೆಯನ್ನು ಅಭಿನಂದಿಸಿ ಪೋಸ್ಟ್‌ ಹಂಚಿಕೊಂಡಿದ್ದರು.

ಅಣ್ಣಾಮಲೈ 2021 ರಿಂದ 2025 ರವರೆಗೆ ಬಿಜೆಪಿಯನ್ನು ಮುನ್ನೆಡೆಸಿದ್ದರು. ನಂತರ ಬಿಜೆಪಿ ಎಐೆಡಿಎಂಕೆ ಜತೆ ಮೈತ್ರಿ ಮಾಡಿಕೊಂಡ ನಂತರ ಅಣ್ಣಾ ಮಲೈ ಪ್ರಭಾವ ಕಡಿಮೆಯಾಗುತ್ತಾ ಬಂತು. ಹೀಗಾಗಿ ಬೇಸರಗೊಂಡ ಅವರು, ಬಿಜೆಪಿ ತ್ಯಜಿಸುವ ಮನಸ್ಸು ಮಾಡಿದ್ದಾರೆ.

Share:


Tags:

annamalai bjp

Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.