ಅಮುಕು ಡುಮುಕು ಎಂಬ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಿರಬದು. ಸೋಶಿಯಲ್ ಮೀಡಿಯಾದಲ್ಲಿ ಈ ವ್ಯಕ್ತಿಯು ಸಾಕಷ್ಟು ಜನಪ್ರಿಯತೆ ಪಡೆದರು. ಜೀ ಕನ್ನಡದ ರಿಯಾಲಿಟಿ ಶೋಗೆ ಅತಿಥಿಯಾಗೂ ತೆರಳಿದ್ದರು. ಈಗ ಆ ವ್ಯಕ್ತಿ ಮಾಡಿಕೊಂಡ ಒಂದು ಎಡವಟ್ಟು ಚರ್ಚೆಗೆ ಕಾರಣ ಆಗಿದೆ. ಸಿನಿಮಾ ಪ್ರಚಾರಕ್ಕಾಗಿ ಅವರು ಪೆಟ್ರೋಲ್ ಕುಡಿದರು ಮತ್ತು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಎಂಬ ವಿಡಿಯೋ ವೈರಲ್ ಆಯಿತು.
ಈ ವಿಡಿಯೋದ ಅಸಲಿಯತ್ತು ಹೊರ ಬಂದಿದೆ.
ಅಮುಕು ಡುಮುಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದ ಈ ವ್ಯಕ್ತಿ ಹೆಸರು ಮಂಜು. ಸೋಶಿಯಲ್ ಮೀಡಿಯಾದಲ್ಲಿ ವಿವಿಧ ವಿಡಿಯೋಗಳನ್ನು ಹಾಕಿಕೊಂಡು ವೈರಲ್ ಆಗುತ್ತಾ ಇರುತ್ತಾರೆ. ಈಗ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ಸೂರಿ ಅಣ್ಣ ಸಿನಿಮಾ ಗೆಲ್ಲಬೇಕು ಎಂದು ಪೆಟ್ರೋಲ್ ಕುಡಿದರು. ಆ ಬಳಿಕ ಅವರು ಒದ್ದಾಡಿದರು. ನಂತರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಈ ವಿಡಿಯೋ ಸಾಕಷ್ಟು ಹರಿದಾಡಿತು. ಮಂಜುಗೆ ಪೂರ್ತಿಯಾಗಿ ಹುಚ್ಚು ಹಿಡಿದಿದೆ ಎಂದು ಹೇಳಲಾಯಿತು. ಸೋಶಿಯಲ್ ಮೀಡಿಯಾ ಜನಪ್ರಿಯತೆ ಹಾಗೂ ಸಿನಿಮಾ ಜನಪ್ರಿಯತೆಗೆ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು ಎಂದೆಲ್ಲ ಮಾತನಾಡಿಕೊಳ್ಳಲಾಯಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಮಂಜು ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಅಸಲಿಗೆ ಅದು ಪೆಟ್ರೋಲ್ ಆಗಿಯೇ ಇರಲಿಲ್ಲವಂತೆ.