2026-03-07 07:46:39

America warns its citizens | ಪಶ್ಚಿಮ ಏಷ್ಯಾದ ಈ ದೇಶಗಳಿಂದ ಹೊರಟುಬಿಡಿ ತನ್ನ ಪ್ರಜೆಗಳಿಗೆ ಅಮೆರಿಕ ಸೂಚನೆ | Speed News Kannada

America warns its citizens | ಪಶ್ಚಿಮ ಏಷ್ಯಾದ ಈ ದೇಶಗಳಿಂದ ಹೊರಟುಬಿಡಿ ತನ್ನ ಪ್ರಜೆಗಳಿಗೆ ಅಮೆರಿಕ ಸೂಚನೆ | Speed News Kannada

ವಾಷಿಂಗ್ಟನ್: ಇರಾನ್, ಇರಾಕ್, ಜೋರ್ಡಾನ್, ಲೆಬನಾನ್ ಮತ್ತು ಇಸ್ರೇಲ್ ಸೇರಿದಂತೆ ಪಶ್ಚಿಮ ಏಷ್ಯಾದ ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ನೆಲೆಸಿರುವ ತನ್ನ ಎಲ್ಲಾ ನಾಗರಿಕರು ಕೂಡಲೇ  ಆ ದೇಶಗಳಿಂದ ಹೊರಡುವಂತೆ ಅಮೆರಿಕದ ವಿದೇಶಾ ಇಲಾಖೆ ಸೂಚನೆ ನೀಡಿದೆ ಈ ಸಂಬಂಧ ಅಮೆರಿಕದ ಕೌನ್ಸುಲರ್ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಮೋರಾ ನಮ್ಹಾರ್‌ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಲಭ್ಯವಿರುವ ಯಾವುದೇ ವಾಣಿಜ್ಯ ಸಾರಿಗೆಯನ್ನು ಬಳಸಿಕೊಂಡು ಈ ದೇಶಗಳನ್ನು ತೊರೆಯುವಂತೆ ತಿಳಿಸಿದ್ದಾರೆ.
ಶನಿವಾರದಿಂದ ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ದಾಳಿ ಆರಂಭಿಸಿದೆ. ಈ ಯುದ್ಧವು ಈಗ ಪ್ರಮುಖ ಪ್ರಾದೇಶಿಕ ಸಂಘರ್ಷವಾಗಿ ಮಾರ್ಪಟ್ಟಿದ್ದು, ನೆರೆಯ ರಾಷ್ಟ್ರಗಳಿಗೂ ಹರಡಿದೆ. ಈ ಹತ್ತು ದೇಶಗಳ ವಿಮಾನಯಾನ ಸಂಸ್ಥೆಗಳು ವಿಮಾನ ಸೇವೆಗಳನ್ನು ರದ್ದುಪಡಿಸಿವೆ.
ಈ ಯುದ್ಧ ಆರಂಭವಾದ ನಂತರ ಇರಾನ್‌ ಪರಮೋಚ್ಚ ನಾಯಕ ಖಮೇನಿ ಮತ್ತು ಅವರ ಕುಟುಂಬದ ಬಹುತೇಕ ಸದಸ್ಯರು ಮತ್ತು ಸರ್ಕಾರದ ಆಯಕಟ್ಟಿನ ಹುದ್ದೆಗಳಲ್ಲಿ ಇರುವವರನ್ನು ಹತ್ಯೆ ಮಾಡಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.