2026-03-07 02:08:39

America Iran | ಅಮೆರಿಕ ಮತ್ತು ಇರಾನ್ ನಡುವೆ ಪರಿಸ್ಥಿತಿ ಉದ್ವಿಗ್ನ..! | Speed News Kannada

America Iran | ಅಮೆರಿಕ ಮತ್ತು ಇರಾನ್ ನಡುವೆ ಪರಿಸ್ಥಿತಿ ಉದ್ವಿಗ್ನ..! | Speed News Kannada

ಟೆಹ್ರಾನ್ ಇನ್ನೂ ಅಸ್ಥಿರತೆ ಮತ್ತು ಬೃಹತ್ ಪ್ರತಿಭಟನೆಗಳಿಂದ ತತ್ತರಿಸಿದ್ದರೂ, ಅಮೆರಿಕ ಕನಿಷ್ಠ 40 ಇರಾನಿಯನ್ನರನ್ನು ಗಡೀಪಾರು ಮಾಡಲು ಸಜ್ಜಾಗಿದೆ ಅಂತ ಇರಾನಿನ-ಅಮೆರಿಕನ್ ಎನ್‌ಜಿಒವನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ. ಈ ಮದ್ಯ ಎರಡೂ ರಾಷ್ಟ್ರಗಳು ಪರಸ್ಪರ ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ನನ್ನ ಹತ್ಯೆಗೆ ಪ್ರಯತ್ನಗಳು ನಡೆದರೆ ಅಥವಾ ನನ್ನ ಹತ್ಯೆ ಮಾಡಿದ್ರೆ ಅಮೆರಿಕವು ಇರಾನ್‌ ದೇಶವನ್ನ ಸರ್ವನಾಶ ಮಾಡಲಿದೆ ಅಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇರ ಎಚ್ಚರಿಕೆ ನೀಡಿದ್ದರು.

ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಕಡೆಗೆ "ನೌಕಾಪಡೆ ಸಾಗುತ್ತಿದೆ" ಎಂದು ಹೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಇರಾನ್‌ನ (Iran) ಕ್ರಾಂತಿಕಾರಿ ಗಾರ್ಡ್ ಪಡೆಗಳ ಉನ್ನತ ಕಮಾಂಡರ್, ಅಮೆರಿಕದ ಯಾವುದೇ ದಾಳಿಗೆ ತಕ್ಷಣ ಪ್ರತಿದಾಳಿ ನಡೆಸಲು ತಾವು ಸಿದ್ಧವಾಗಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಸಂಘರ್ಷದ ಭೀತಿಯನ್ನು ಹುಟ್ಟಿಸುತ್ತಿವೆ. ಟ್ರಂಪ್ ನೀಡಿದ ಎಚ್ಚರಿಕೆ ಏನು? ಅನ್ನೋದನ್ನ ನೋಡೊದಾದ್ರೆ ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಪುನರಾರಂಭಿಸುವ ಯಾವುದೇ ಪ್ರಯತ್ನ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ  ಎಚ್ಚರಿಕೆ ನೀಡಿದ್ದಾರೆ. "ನಾವು ಈಗಾಗಲೇ ಅವರ ಪರಮಾಣು ಸಾಮರ್ಥ್ಯಗಳ ಮೇಲೆ ದಾಳಿ ಮಾಡಿದ್ದೇವೆ. ಅವರು ಮತ್ತೆ ಅದನ್ನು ಪುನ ರ್ನಿರ್ಮಿಸಲು ಪ್ರಯತ್ನಿಸಿದರೆ, ನಾವು ಅಷ್ಟೇ ಸುಲಭವಾಗಿ ಮತ್ತೆ ದಾಳಿ ಮಾಡುತ್ತೇವೆ," ಎಂದು ಅವರು ಸ್ಪಷ್ಟಪಡಿಸಿದರು.

ಭಾರತಕ್ಕೆ ಧನ್ಯವಾದ ಹೇಳಿದ ಇರಾನ್‌, ಯುಎನ್‌ಎಚ್‌ಆರ್‌ಸಿ (UNHRC) (ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ) ಯಲ್ಲಿ ಇರಾನ್ ವಿರುದ್ಧದ ನಿರ್ಣಯದ ವಿರುದ್ಧ ಮತ ಚಲಾಯಿಸುವ ಮೂಲಕ, ಇರಾನ್‌ನ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಭಾರತಕ್ಕೆ ಇರಾನ್ ಸರ್ಕಾರ ಮತ್ತು ಅದರ ರಾಯಭಾರಿ ಧನ್ಯವಾದ ಅರ್ಪಿಸಿದ್ದಾರೆ. ಈ ನಿರ್ಧಾರವನ್ನು "ತಾತ್ವಿಕ ಮತ್ತು ದೃಢ" ನಿಲುವು ಎಂದು ಕರೆದರು. ರಾಯಭಾರಿ ಮೊಹಮ್ಮದ್ ಫತಾಲಿ ಅವರು ಯುಎನ್‌ಎಚ್‌ಆರ್‌ಸಿಯಲ್ಲಿ "ಅನ್ಯಾಯ ಮತ್ತು ರಾಜಕೀಯ ಪ್ರೇರಿತ ನಿರ್ಣಯ" ಎಂದು ವಿವರಿಸಿದ್ದನ್ನು ವಿರೋಧಿಸಿದ್ದಕ್ಕಾಗಿ "ಭಾರತ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಕೃತಜ್ಞರಾಗಿರುತ್ತೇನೆ" ಅಂತ ಕೂಡ ಹೇಳಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.