2026-03-07 01:58:37

Akshay-Ajay Are Coming Together After Ten Years | ಒಂದಾಗುತ್ತಿದ್ದಾರೆ ಹತ್ತು ವರ್ಷಗಳ ಬಳಿಕ ಅಕ್ಷಯ್-ಅಜಯ್: ಗೋಲ್‌ಮಾಲ್ 5 ಸಿನಿಮಾದಲ್ಲಿ ಕಿಲಾಡಿ ನಟನೇ ವಿಲನ್ | Speed News Kannada

Akshay-Ajay Are Coming Together After Ten Years | ಒಂದಾಗುತ್ತಿದ್ದಾರೆ ಹತ್ತು ವರ್ಷಗಳ ಬಳಿಕ ಅಕ್ಷಯ್-ಅಜಯ್: ಗೋಲ್‌ಮಾಲ್ 5 ಸಿನಿಮಾದಲ್ಲಿ ಕಿಲಾಡಿ ನಟನೇ ವಿಲನ್ | Speed News Kannada

ಬಾಲಿವುಡ್‌ನ ಅತ್ಯಂತ ಯಶಸ್ವಿ ಕಾಮಿಡಿ ಸಿನಿಮಾ ಸರಣಿ 'ಗೋಲ್‌ಮಾಲ್' ಈಗ ಐದನೇ ಭಾಗದೊಂದಿಗೆ ಅಬ್ಬರಿಸಲು ಸಿದ್ಧವಾಗುತ್ತಿದೆ. ಈ ಬಾರಿ ಚಿತ್ರತಂಡವು ದೊಡ್ಡ ಮಟ್ಟದ ಸರ್ಪ್ರೈಸ್ ನೀಡಲು ಮುಂದಾಗಿದ್ದು, ಕಿಲಾಡಿ ನಟ ಅಕ್ಷಯ್ ಕುಮಾರ್ ಈ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಸುದ್ದಿ ಸಿನಿರಂಗದಲ್ಲಿ ಸಂಚಲನ ಮೂಡಿಸಿದೆ.ವಿಶೇಷವೆಂದರೆ, ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ನಾಯಕನಾಗಿ ಅಲ್ಲದೆ, ಅಜಯ್ ದೇವಗನ್ ವಿರುದ್ಧ ಪ್ರಬಲ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರ ಪಾತ್ರವು ಮೈನಸ್ ಶೇಡ್‌ನಿಂದ ಕೂಡಿರಲಿದೆ. ಸಾಮಾನ್ಯವಾಗಿ ಹಾಸ್ಯಮಯವಾಗಿ ಸಾಗುವ ಗೋಲ್‌ಮಾಲ್‌ ಸರಣಿಗೆ ಈ ಬಾರಿ ಫ್ಯಾಂಟಸಿ ಅಂಶಗಳನ್ನು ಸೇರಿಸಲಾಗುತ್ತಿದ್ದು, ಅಕ್ಷಯ್ ಕುಮಾರ್ ಅವರ ವಿಲನ್ ಪಾತ್ರವು ಕಥೆಗೆ ಹೊಸ ಆಯಾಮ ನೀಡಲಿದೆ ಎಂದು ವರದಿಗಳು ತಿಳಿಸಿವೆ. ಹೈರಾನ್ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಎದುರು ಖಳನಾಯಕನಾಗಿ ನಟಿಸಿದ ಬಳಿಕ, ಇದು ಅಕ್ಷಯ್ ಅವರಿಗೆ ಸತತ ಎರಡನೇ ವಿಲನ್ ಪಾತ್ರವಾಗಲಿದೆ.
ಈ ಚಿತ್ರದಲ್ಲಿ ಎಂದಿನಂತೆ ಅಜಯ್ ದೇವಗನ್ ಅವರೊಂದಿಗೆ ಹಳೆಯ ಗೆಳೆಯರ ಬಳಗವಾದ ಅರ್ಷದ್ ವಾರ್ಸಿ, ತುಷಾರ್ ಕಪೂರ್, ಶ್ರೇಯಸ್ ತಲ್ಪಾಡೆ ಮತ್ತು ಕುನಾಲ್ ಖೇಮು ಇರಲಿದ್ದಾರೆ.. ಇವರ ಜೊತೆಗೆ ಹಿರಿಯ ಹಾಸ್ಯ ನಟರಾದ ಜಾನಿ ಲಿವರ್, ಸಂಜಯ್ ಮಿಶ್ರಾ ಮತ್ತು ಮುಕೇಶ್ ತಿವಾರಿ ಕೂಡ ಪ್ರೇಕ್ಷಕರನ್ನು ನಗಿಸಲು ಬರಲಿದ್ದಾರೆ. ಶರ್ಮನ್ ಜೋಶಿ ಕೂಡ ಈ ಬಾರಿ ತಂಡ ಸೇರುವ ಸಾಧ್ಯತೆ ಇದೆ. ಅಕ್ಷಯ್ ಮತ್ತು ಅಜಯ್ ದೇವಗನ್ ಸುಮಾರು 20 ವರ್ಷಗಳ ಬಳಿಕ ಈ ಚಿತ್ರದ ಮೂಲಕ ಆರನೇ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಗೋಲ್‌ಮಾಲ್ 5 ಚಿತ್ರದ ಚಿತ್ರೀಕರಣವು ಫೆಬ್ರವರಿ ಕೊನೆಯ ವಾರದಲ್ಲಿ ಮುಂಬೈನ ಫಿಲ್ಡ್ ಸಿಟಿಯಲ್ಲಿ ಆರಂಭವಾಗಲಿದ್ದು, 2027ರ ಆರಂಭದಲ್ಲಿ ಸಿನಿಮಾ ತೆರೆಗೆ ಬರುವ ಗುರಿ ಹೊಂದಲಾಗಿದೆ. ಈ ಸರಣಿಯು 20 ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಅಕ್ಷಯ್ ಕುಮಾ‌ರ್ ಅವರ ಸೇರ್ಪಡೆಯು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.