ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಮಹಾರಾಷ್ಟ್ರಕ್ಕೆ ದೊಡ್ಡ ಆಘಾತ ನೀಡಿದೆ. ಇನ್ನು ಅವರ ತಾಯಿ ಈ ಸುದ್ದಿಯನ್ನು ಹೇಗೆ ಸಹಿಸಿಕೊಳ್ಳಬಹುದು ಹೇಳಿ?ಹೀಗಾಗಿ ಜಿತ್ ಪವಾರ್ ಅವರ ತಾಯಿ ಈ ಬಗ್ಗೆ ಯಾವುದೇ ಸುದ್ದಿ ನೋಡದಂತೆ ತಡೆಯಲು ಸಿಬ್ಬಂದಿ ಕೇಬಲ್ ಕಡಿತಗೊಳಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫಾರ್ಮ್ ಹೌಸ್ ಸಿಬ್ಬಂದಿ ದೂರದರ್ಶನ ಕೇಬಲ್‌ಗಳನ್ನು ಸಂಪರ್ಕ ಕಡಿತಗೊಳಿಸುವ ಮೂಲಕ ಮತ್ತು ಫೋನ್ ಸಂಪರ್ಕವನ್ನ ತೆಗೆದು ಹಾಕಿದರು. ಅಜಿತ್ ಪವಾರ್ ಅವರ ತಾಯಿಗೆ ಈ ಸುದ್ದಿ ತಿಳಿಯಬಾರದು ಎಂದು ಅನೇಕೆ ಪ್ರಯತ್ನಗಳನ್ನು ಮಾಡಿದ್ದಾರೆ ಆದರೆ ಅವರ ತಾಯಿಗೆ ಅನುಮಾನ ಬಂದು ಪದೇ ಪದೇ ಪವಾರಾವರ ಬಗ್ಗೆ ವಿಚಾರಿಸಿದ್ದಾರೆ ಎನ್ನಲಾಗಿದೆ.
ಅಜಿತ್ ಪವಾರ್ ನಾಲ್ಕು ದಿನಗಳ ಹಿಂದೆ ಅವರನ್ನು ಭೇಟಿ ಮಾಡಿದ್ದರು.ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆ ಸಾರ್ವಜನಿಕ ಸಭೆ ನಡೆಸಲು ಅಜಿತ್ ಪವಾರ್ ಅವರು ಬಾರಾಮತಿಗೆ ಹೊರಟಿದ್ದರು. ಅವರೊಂದಿಗೆ ವಿಮಾನದಲ್ಲಿದ್ದ ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ಪೈಲಟ್‌ಗಳು ಸೇರಿದಂತೆ ಒಟ್ಟು ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರಿದ್ದ ಚಾರ್ಟರ್ ವಿಮಾನವು ಬುಧವಾರ ಬೆಳಿಗ್ಗೆ ಮುಂಬೈನಲ್ಲಿನ ಅವರ ನಿವಾಸದಿಂದ ಕುಟುಂಬದ ರಾಜಕೀಯ ಭದ್ರಕೋಟೆಯಾದ ಬಾರಾಮತಿಗೆ ಹೊರಟಿತ್ತು. ಜಿಲ್ಲಾ ಪರಿಷತ್ ಚುನಾವಣೆಯ ಪ್ರಚಾರದ ಅಂಗವಾಗಿ ನಡೆಯುತ್ತಿರುವ ನಾಲ್ಕು ಸಾರ್ವಜನಿಕ ಸಭೆಯಲ್ಲಿ ಅವರು ಭಾಗಿಯಾಗಬೇಕಿತ್ತು. ಹೀಗಾಗಿ ಮುಂಬೈನಿಂದ ಬಾಡಿಗೆಗೆ ಪಡೆಯಲಾಗಿದ್ದ 'ಲಿಯರ್ ಜೆಟ್ 45'ನಲ್ಲಿ ಬೆಳಿಗ್ಗೆ ಸುಮಾರು 8:45ರ ಸುಮಾರಿಗೆ ಬಾರಾಮತಿ ವಿಮಾನ ನಿಲ್ದಾಣದ ಸಮೀಪ ಲ್ಯಾಂಡಿಂಗ್‌ಗೆ ಪ್ರಯತ್ನಿಸುತ್ತಿದ್ದಾಗ ವಿಮಾನವು ನಿಯಂತ್ರಣ ತಪ್ಪಿ ಹೊಲವೊಂದಕ್ಕೆ ಅಪ್ಪಳಿಸಿದೆ.ಬಾರಾಮತಿ ಅಜಿತ್ ಪವಾರ್ ಅವರ ರಾಜಕೀಯ ಜೀವನಕ್ಕೆ ಬುನಾದಿ ಹಾಕಿಕೊಟ್ಟ ಜಾಗವಾಗಿದೆ. ಅವರ ಚಿಕ್ಕಪ್ಪ ಶರದ್ ಪವಾರ್ ನೆರಳಲ್ಲಿರಾಜಕೀಯ ಜೀವನದ ಬಗ್ಗೆ ಅಜಿತ್ ಪವಾರ್ ಅವರು ಕಲಿತು, ಮಹಾರಾಷ್ಟ್ರ ರಾಜಕೀಯ ಚಿತ್ರಣವನ್ನೇ ಬದಲಿಸಿದ್ದರು. ರಾಜಕೀಯ ಜೀವನ ಶುರುಮಾಡಿದ ನೆಲದಲ್ಲೇ ಅವರ ಪಯಣ ಕೊನೆಗಿಂಡಿದೆ.