2026-03-07 07:33:07

Actress Srileela Gets A Bumper Offer | ನಟಿ ಶ್ರೀಲೀಲಾಗೆ ಒಲಿದ ಬಂಪರ್ ಆಫರ್ ಸ್ಟಾರ್ ನಟನಿಗೆ ಜೋಡಿಯಾದ ಕಿಸ್ ಬೆಡಗಿ | Speed News Kannada

Actress Srileela Gets A Bumper Offer | ನಟಿ ಶ್ರೀಲೀಲಾಗೆ ಒಲಿದ ಬಂಪರ್ ಆಫರ್ ಸ್ಟಾರ್ ನಟನಿಗೆ ಜೋಡಿಯಾದ ಕಿಸ್ ಬೆಡಗಿ | Speed News Kannada

ಕನ್ನಡದ 'ಕಿಸ್' ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ ನಟಿ ಶ್ರೀಲೀಲಾ ಅವರಿಗೆ ಬಂಪರ್ ಅವಕಾಶ ಸಿಕ್ಕಿದೆ. ಕಿಸ್ ಬೆಡಗಿ ಅಂತಲೇ ಜನಪ್ರಿಯರಾಗಿರುವ ನಟಿ ಶ್ರೀಲೀಲಾ ಇದೀಗ ತಮಿಳಿನ ಖ್ಯಾತ ನಟ ಧನುಷ್ ಜೊತೆಗೆ ನಟಿಸಲು ಸಜ್ಜಾಗಿದ್ದಾರೆ.ಇತ್ತೀಚಿಗಷ್ಟೇ ನಟಿ ಶ್ರೀಲೀಲಾ ಸಾಮಾಜಿಕ ಮಾಧ್ಯಮದಲ್ಲಿ ಧನುಷ್ ಜೊತೆಗಿನ ಫೋಟೊವನ್ನು ಹಂಚಿಕೊಂಡಿದ್ದರು. ಫೋಟೋಗಳಲ್ಲಿ ಶ್ರೀಲೀಲಾಗೆ ನಟ ಧನುಷ್ ಅವರು ಹೂಗುಚ್ಛದೊಂದಿಗೆ ಸ್ವಾಗತಿಸಿದ್ದನ್ನು ಕಾಣಬಹುದು. ಇದರ ಜೊತೆಗೆ ನಟ ಧನುಷ್ ಜೊತೆಗೆ ಸಾಯಿ ಪಲ್ಲವಿ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಫೋಟೊವನ್ನು 'ವಂಡರ್‌ಬಾರ್ ಫಿಲ್ಸ್' ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಇನ್ನು, ನಟ ಧನುಷ್ ಅವರ 55ನೇ ಸಿನಿಮಾದಲ್ಲಿ ಶ್ರೀಲೀಲಾ ಹಾಗೂ ಸಾಯಿ ಪಲ್ಲವಿ ನಾಯಕಿಯರಾಗಿ ನಟಿಸಲಿದ್ದಾರೆ. ಈ ಸಿನಿಮಾವನ್ನು ರಾಜ್‌ಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡಲಿದ್ದಾರೆ. 2024ರಲ್ಲಿ ಬಿಡುಗಡೆಯಾದ 'ಅಮರನ್' ಸಿನಿಮಾವನ್ನು ಇವರೇ ನಿರ್ದೇಶನ ಮಾಡಿದ್ದರು.ಸದ್ಯ ನಟಿ ಶ್ರೀಲೀಲಾ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಪ್ರಸ್ತುತ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಗಬ್ಬರ್ ಸಿಂಗ್', ಸೈಫ್ ಅಲಿ ಖಾನ್ ಅವರ ಪುತ್ರನ ಜೊತೆಗೆ ಒಂದು ಸಿನಿಮಾ, ರಣವೀರ್ ಸಿಂಗ್ ನಟಿಸಲಿರುವ ಹೊಸ ಸಿನಿಮಾದಲ್ಲೂ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಇದೀಗ ನಟ ಧನುಷ್ ಸಿನಿಮಾದಲ್ಲಿ ನಟಿಸುವ ಅವಕಾಶವೂ ಲಭಿಸಿದೆ. ಇತ್ತೀಚೆಗೆ ಶ್ರೀಲೀಲಾ 'ಜ್ಯೂನಿಯರ್' ಸಿನಿಮಾ ಬಳಿಕ ಕನ್ನಡದಲ್ಲಿ ಯಾವುದೇ ಪ್ರಾಜೆಕ್ಟ್ ಅನ್ನು ಒಪ್ಪಿಕೊಂಡಿಲ್ಲ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.