2026-04-23 09:27:44

Abhishek Bachchan scared to walk on the red carpet with Aishwarya | ಐಶ್ವರ್ಯಾ ಜೋತೆ ರೆಡ್ ಕಾರ್ಪೆಟ್ ಮೇಲೆ ನಡೆಯೋಕೆ ಭಯ ಆಗುತ್ತೆ ಅಭಿಷೇಕ್ ಬಚ್ಚನ್ | Speed News Kannada

Abhishek Bachchan scared to walk on the red carpet with Aishwarya | ಐಶ್ವರ್ಯಾ ಜೋತೆ ರೆಡ್ ಕಾರ್ಪೆಟ್ ಮೇಲೆ ನಡೆಯೋಕೆ ಭಯ ಆಗುತ್ತೆ ಅಭಿಷೇಕ್ ಬಚ್ಚನ್ | Speed News Kannada

ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಯಾವುದೇ ಅಂತರಾಷ್ಟ್ರೀಯ ವೇದಿಕೆ ಅಥವಾ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡರೂ ತಮ್ಮ ಸೌಂದರ್ಯ ಮತ್ತು ನಡಿಗೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ, ಇಂತಹ ಹೈ-ಪ್ರೊಫೈಲ್ ಕಾರ್ಯಕ್ರಮಗಳಲ್ಲಿ ಪತ್ನಿಯ ಜೊತೆ ರೆಡ್ ಕಾರ್ಪೆಟ್ ಮೇಲೆ ನಡೆಯಲು ನನಗೆ ಭಯ ಆಗುತ್ತದೆ ಎಂದು ನಟ ಅಭಿಷೇಕ್ ಬಚ್ಚನ್ ಹೇಳಿಕೊಂಡಿದ್ದಾರೆ. ತುಂಬಾ ಮುಜುಗರ ಆಗುತ್ತೆ ಎಂದ ನಟ ಲಿಲಿ ಸಿಂಗ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅಭಿಷೇಕ್, ಐಶ್ವರ್ಯಾ ಅವರಂತಹ ವೃತ್ತಿಪರರ ಮುಂದೆ ತಾವು ತುಂಬಾ ಮುಜುಗರ ಅನುಭವಿಸುವುದಾಗಿ ತಿಳಿಸಿದ್ದಾರೆ. ರೆಡ್ ಕಾರ್ಪೆಟ್ ಅನುಭವದ ಬಗ್ಗೆ ಹಂಚಿಕೊಂಡ ಅಭಿಷೇಕ್, "ನೀವು ನನ್ನ ಪತ್ನಿಯನ್ನು ನೋಡಿದ್ದೀರಾ? ಆಕೆ ರೆಡ್ ಕಾರ್ಪೆಟ್ ಮೇಲೆ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದು ನಿಮಗೂ ಗೊತ್ತಿದೆ. ಆ ರೀತಿಯ ವೇದಿಕೆ ಮೇಲೆ ನನಗೆ ಕಾಣಿಸಿಕೊಳ್ಳಲು ಭಯ ಆಗುತ್ತದೆ. ಅದರಲ್ಲೂ ಐಶ್ವರ್ಯಾ ಜೊತೆ ನಡೆಯುವುದು ಇನ್ನೂ ಭಯಾನಕ. ಅಲ್ಲಿರುವವರೆಲ್ಲಾ ತುಂಬಾ ಪ್ರೊಫೆಷನಲ್ ಆಗಿರುತ್ತಾರೆ, ಆದರೆ ನಾನು ಮಾತ್ರ ಮರದ ತುಂಡಿನಂತೆ ನಿಂತಿರುತ್ತೇನೆ. ಕೈಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳಬೇಕೋ ಅಥವಾ ಏನು ಮಾಡಬೇಕೋ ಎಂದು ತಿಳಿಯದೆ ಮುಜುಗರ ಪಡುತ್ತಿರುತ್ತೇನೆ" ಎಂದು ಹೇಳಿದ್ದಾರೆ.
ಹಳೆಯ ಘಟನೆ ನೆನಪಿಸಿಕೊಂಡ ನಟ ಅಷ್ಟೇ ಅಲ್ಲದೆ, ಒಮ್ಮೆ ತಮ್ಮ ಗಾಬರಿಯನ್ನು ಕಂಡು ಫೋಟೋಗ್ರಾಫರ್‌ಗಳು "ಸರ್, ನಾವು ಏನು ತಪ್ಪು ಮಾಡಿದ್ದೇವೆ? ನೀವು ಯಾಕೆ ಅಷ್ಟು ಕೋಪದಲ್ಲಿದ್ದೀರಿ?" ಎಂದು ಕೇಳಿದ್ದ ಘಟನೆಯನ್ನೂ ಸಹ ಅವರು ಈ ಸಮಯದಲ್ಲಿ ನೆನಪಿಸಿಕೊಂಡಿದ್ದಾರೆ. ಐಶ್ವರ್ಯಾ ರೈ ಪ್ರತಿ ವರ್ಷ ಕಾನ್ ಚಲನಚಿತ್ರೋತ್ಸವದಲ್ಲಿ ತಮ್ಮ ಮಗಳು ಆರಾಧ್ಯಾ ಜೊತೆ ಕಾಣಿಸಿಕೊಂಡು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಾರೆ. 2007ರಲ್ಲಿ ವಿವಾಹವಾದ ಈ ಜೋಡಿಯು 'ಧೂಮ್ 2' ಮತ್ತು 'ಗುರು' ಅಂತಹ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದೆ. ಸದ್ಯ ಅಭಿಷೇಕ್ ಬಚ್ಚನ್ ತಮ್ಮ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಶಾರುಖ್ ಖಾನ್ ನಟನೆಯ 'ಕಿಂಗ್' ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ. ಈ ಸಿನಿಮಾ 2026ರ ಡಿಸೆಂಬರ್ 24ರಂದ ಬಿಡುಗಡೆಯಾಗಲಿದೆ. ಇದರ ಜೊತೆಗೆ ರಿತೇಶ್ ದೇಶ್‌ಮುಖ್ ನಿರ್ದೇಶನದ ಐತಿಹಾಸಿಕ ಚಿತ್ರ 'ರಾಜಾ ಶಿವಾಜಿ'ಯಲ್ಲೂ ಅವರು ನಟಿಸುತ್ತಿದ್ದು, ಈ ಸಿನಿಮಾ ಮೇ 1ರಂದು ತೆರೆಕಾಣಲು ಸಜ್ಜಾಗಿದೆ. ಒಟ್ಟಿನಲ್ಲಿ ಪತ್ನಿಯ ಯಶಸ್ಸನ್ನು ಹೆಮ್ಮೆಯಿಂದ ಹಂಚಿಕೊಳ್ಳುತ್ತಲೇ ತಮ್ಮ ಭಯವನ್ನ ಅಭಿಷೇಕ್ ಇಲ್ಲಿ ಬಿಚ್ಚಿಟ್ಟಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.