2026-03-07 08:10:33

Aarti suddenly appearing live from America | ಆರತಿ ಅಮೇರಿಕಾದಿಂದ ದಿಢೀರ್ ಪ್ರತ್ಯಕ್ಷ ಸದ್ದಿಲ್ಲದೇ ಮಾಡ್ತಿರೋ ಕೆಲ್ಸ ನೋಡಿ ಎಲ್ರೂ ಶಾಕ್ | Speed News Kannada

Aarti suddenly appearing live from America | ಆರತಿ ಅಮೇರಿಕಾದಿಂದ ದಿಢೀರ್ ಪ್ರತ್ಯಕ್ಷ ಸದ್ದಿಲ್ಲದೇ ಮಾಡ್ತಿರೋ ಕೆಲ್ಸ ನೋಡಿ ಎಲ್ರೂ ಶಾಕ್ | Speed News Kannada

ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯ ಅಂದಿನ ಕಾಲದ 'ರಂಗನಾಯಕಿ' ಈಗ ಎಲ್ಲಿದ್ದಾರೆ ಗೊತ್ತಾ ? ಏನು ಮಾಡ್ತಿದ್ದಾರೆ ಗೊತ್ತಾ ? ಕನ್ನಡ ಚಿತ್ರರಂಗದಲ್ಲಿ ಸುವರ್ಣ ಯುಗದ ಅಪ್ರತಿಮ ನಟಿ, ಕೋಟ್ಯಂತರ ಕನ್ನಡಿಗರ ಮನಸ್ಸನ್ನ ಗೆದ್ದ 'ರಂಗನಾಯಕಿ' ಇವರು ಬಹಳ ದಿನಗಳ ನಂತರ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್ ಅನ್ನು ತನ್ನ ಅದ್ಭುತ ನಟನೆ ಮತ್ತು ಸೌಂದರ್ಯದ ಮೂಲಕ ಆಳಿದ ಈ ಧೀಮಂತ ನಟಿ , ಇತ್ತೀಚೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಜೊತೆಗೆ ಸಂತಸ ಮೂಡಿಸಿದ್ದಾರೆ. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಮತ್ತು ಶಂಕರ್ ನಾಗ್ ಅಂತಹ ದಿಗ್ಗಜ ನಟರ ಜೊತೆ ನಟಿಸಿ, 'ನಾಗರಹಾವು', 'ಶರಪಂಜರ', 'ಎಡಕಲ್ಲು ಗುಡ್ಡದ ಮೇಲೆ' ಇಂತಹ ಕ್ಲಾಸಿಕ್ ಸಿನಿಮಾಗಳನ್ನು ಕನ್ನಡ ಸಿನಿ ಪ್ರಯರಿಗೆ ಕೊಡುಗೆಯಾಗಿ ನೀಡಿದ ಆರತಿ ಅವರು ಚಿತ್ರರಂಗದಿಂದ ದೂರವಾಗಿ ಎಷ್ಟೋ ವರ್ಷಗಳೆ ಕಳೆದಿವೆ. 

ಕೆಲವೊಂದು ಮಾಹಿತಿ ಪ್ರಕಾರ ಆರತಿಯವ್ರು ಸದ್ಯ ಅಮೆರಿಕಾದಲ್ಲಿ ನೆಲೆಸಿದ್ದಾರೆ, ಹಾರ್ಡ್‌ವೇರ್ ಎಂಜಿನಿಯರ್ ಚಂದ್ರಶೇಖರ್ ದೇಸಾಯಿಗೌಡರ್ ಅವರನ್ನು ಮದುವೆಯಾಗಿದ್ದು..ಅವರಿಗೆ ಯಶಸ್ವಿನಿ ಎಂಬ ಮಗಳಿದ್ದಾರೆ..ಆರತಿಯವರು ಮೂರು ಮದುವೆಯಾಗಿದ್ದು ಅವರ ಮೊದಲ ಪತಿಯ ನಷ್ಟ ಹಾಗೆ ಅಪಾರ ಒತ್ತಡವನ್ನು ತಂದ ಆಧಾರ ಇಲ್ಲದಂತಹ ಆರೋಪಗಳು ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸಿದರು. ಹಾರ್ಡ್‌ವೇ‌ರ್ ಎಂಜಿನಿಯರ್ ಚಂದ್ರಶೇಖ‌ರ್ ದೇಸಾಯಿಗೌಡರ್‌ ಅವರೊಂದಿಗಿನ ಮೂರನೇ ವಿವಾಹದ ನಂತರ ಪ್ರಸ್ತುತ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ , ಗ್ಲಾಮರ್ ಪ್ರಪಂಚದಿಂದ ಸಂಪೂರ್ಣವಾಗಿ ದೂರ ಸರಿದುಬಿಟ್ಟಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಮಣ್ಣಿನ ಮೇಲಿನ ಮಮಕಾರ ಮಾತ್ರ ಅವರನ್ನು ಆಗಾಗ ಕರ್ನಾಟಕಕ್ಕೆ ಎಳೆದು ತರುತ್ತಿದೆ. 

ನಟಿ ಆರತಿ ಅವರು ಬೆಂಗಳೂರಿಗೆ ಆಗಾಗ ಬರ್ತಾ ಇರೋದಕ್ಕೆ ಕೇವಲ ಅವರ ವೈಯಕ್ತಿಕ ಕಾರಣಗಳಿಂದಲ್ಲ , ಬದಲಾಗಿ ಒಂದು ದೊಡ್ಡ ಸಮಾಜಮುಖಿ ಉದ್ದೇಶವಿದೆ. ಅವರು ಅಮೆರಿಕಾದಲ್ಲಿದ್ದರೂ ತಮ್ಮ ಹುಟ್ಟೂರಿನ ಮೇಲಿನ ಪ್ರೀತಿಯನ್ನು ಮರೆತಿಲ್ಲ. ಕೋಲಾರ ಜಿಲ್ಲೆಯಲ್ಲಿರುವ ಕೆಲವು ಸರ್ಕಾರಿ ಶಾಲೆಗಳನ್ನು ಆರತಿ ಅವರು ದತ್ತು ಪಡೆದಿದ್ದಾರೆ. ಈ ಶಾಲೆಗಳ ಅಭಿವೃದ್ಧಿ, ಅಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದಾರೆ.ಯಾವುದೇ ಪ್ರಚಾರ ಬಯಸದೆ, ಕ್ಯಾಮೆರಾ ಕಣ್ಣುಗಳಿಂದ ದೂರ ಉಳಿದು ಅವರು ಮಾಡುತ್ತಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ಶಾಲೆಗಳ ಮೇಲ್ವಿಚಾರಣೆ ನಡೆಸಲು ಮತ್ತು ಮಕ್ಕಳ ಪ್ರಗತಿಯನ್ನು ಖುದ್ದಾಗಿ ವೀಕ್ಷಿಸಲು ಅವರು ಆಗಾಗ ಅಮೆರಿಕಾದಿಂದ ಕರ್ನಾಟಕಕ್ಕೆ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲೇ ಅವರು ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಹಲವು ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದಾರೆ.ಅಂದು ತೆರೆಯ ಮೇಲೆ ತಮ್ಮ ನಟನೆಯ ಮೂಲಕ ಕ್ರಾಂತಿ ಮಾಡಿದ್ದ ಈ ನಟಿ, ಇಂದು ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರನ್ನು ಕಂಡ ಅಭಿಮಾನಿಗಳು, "ಅಂದಿನ ಅದೇ ಕಳೆ, ಅದೇ ಗಾಂಭೀರ್ಯ ಇಂದಿಗೂ ಅವರಲ್ಲಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಈ ಹಿರಿಯ ಜೀವದ ಸಮಾಜ ಸೇವೆ ಹೀಗೆಯೇ ಮುಂದುವರಿಯಲಿ ಎಂಬುದು ಎಲ್ಲರ ಆಶಯ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.