2026-03-12 01:48:49

A young fan asks Vijay and Rashmika why they didnt invite her to the wedding | ಮದುವೆಗೆ ನನ್ನ ಏಕೆ ಕರೆದಿಲ್ಲ ಎಂದು ವಿಜಯ್ ರಶ್ಮಿಕಾಗೆ ದಬಾಯಿಸಿದ ಪುಟಾಣಿ ಅಭಿಮಾನಿ | Speed News Kannada

A young fan asks Vijay and Rashmika why they didnt invite her to the wedding | ಮದುವೆಗೆ ನನ್ನ ಏಕೆ ಕರೆದಿಲ್ಲ ಎಂದು ವಿಜಯ್ ರಶ್ಮಿಕಾಗೆ ದಬಾಯಿಸಿದ ಪುಟಾಣಿ ಅಭಿಮಾನಿ | Speed News Kannada

ಇತ್ತೀಚೆಗೆ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಫೆಬ್ರುವರಿ 26ರಂದು ಉದಯಪುರದಲ್ಲಿ ನಡೆದ ಅದ್ದೂರಿ ವಿವಾಹದಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಕೆಲವು ಬಂಧು ಮಿತ್ರರು ಮಾತ್ರ ಭಾಗಿಯಾಗಿದ್ದರು. ಆದರೆ, 'ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನನ್ನ ಏಕೆ ನಿಮ್ಮ ಮದುವೆಗೆ ಕರೆದಿಲ್ಲ' ಎಂದು ಪುಟಾಣಿ ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದ್ದಾರೆ.
ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ವಿರೋಶ್ ಜೋಡಿಯ ಮದುವೆ ಕುರಿತು ಪುಟಾಣಿ ಪ್ರಶ್ನೆ ಮಾಡಿರುವ ವಿಡಿಯೊ ಸಿಕ್ಕಾಪಟ್ಟೆ ಹರಿದಾಡಿದೆ. ಅಲ್ಲದೇ ಆಕೆಯ ಮಾತಿಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. 'ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಾನು ಕೂಡ ನಿಮ್ಮ ಅಭಿಮಾನಿಯಲ್ಲವೇ? ಮದುವೆಗೆ ನನ್ನನ್ನು ಯಾಕೆ ಕರೆದಿಲ್ಲ? ನಮ್ಮ ಕಥೆಯೇನು?' ಎಂದು ದಬಾಯಿಸಿದ್ದಾಳೆ.
ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ಘೋಷಿಸಿದ ವಿಜಯ್ ದೇವರಕೊಂಡ ದಂಪತಿ ಅಲ್ಲು ಅರ್ಜುನ್ ಸಹೋದರನ ವಿವಾಹದಲ್ಲಿ ವಿಜಯ್ ದೇವರಕೊಂಡ ದಂಪತಿ ಭಾಗಿ ಆಗ ಅದೇ ವಿಡಿಯೊಗೆ ಪ್ರತಿಕ್ರಿಯೆ ನೀಡಿದ ವಿಜಯ್, 'ಪುಟ್ಟ ಕಂದ ನಿನ್ನನ್ನು ಮನೆಗೆ ಊಟಕ್ಕೆ ಆಹ್ವಾನಿಸುತ್ತೇನೆ. ನಿನ್ನ ಇಷ್ಟದ ಆಹಾರ ಮತ್ತು ಸಿಹಿ ಪದಾರ್ಥ ಯಾವುದು ಎಂದು ಹೇಳು ಎಲ್ಲವನ್ನೂ ಮನೆಯಲ್ಲಿಯೇ ಮಾಡಿಸಿ ಇಬ್ಬರೂ ಸೇರಿ ಹೊಟ್ಟೆ ತುಂಬಾ ತಿನ್ನೋಣ' ಎಂದು ಕಮೆಂಟ್ ಮಾಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಕೂಡ ಈ ವಿಡಿಯೊವನ್ನು ಹಂಚಿಕೊಂಡು ಪುಟಾಣಿಗೆ ವಿಶೇಷ ಉಡುಗೊರೆ ನೀಡುವುದಾಗಿ ಭರವಸೆ ನೀಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.