2026-06-08 01:25:36

A student who came to write the PUC exam was attacked | ಯುವತಿ ವಿಚಾರಕ್ಕೆ ಕಿರಿಕ್ ಪಿಯುಸಿ ಪರೀಕ್ಷೆ ಬರೆಯಲು ಬಂದ ವಿಧ್ಯಾರ್ಥಿ ಮೇಲೆ ಹಲ್ಲೆ | Speed News Kannada

A student who came to write the PUC exam was attacked | ಯುವತಿ ವಿಚಾರಕ್ಕೆ ಕಿರಿಕ್ ಪಿಯುಸಿ ಪರೀಕ್ಷೆ ಬರೆಯಲು ಬಂದ ವಿಧ್ಯಾರ್ಥಿ ಮೇಲೆ ಹಲ್ಲೆ | Speed News Kannada

ಬೆಂಗಳೂರು: ಹುಡುಗಿ ವಿಚಾರಕ್ಕೆ ಯುವಕರ ನಡುವೆ ಗಲಾಟೆ ನಡೆದಿದ್ದು, ಪಿಯುಸಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ. ದ್ವೀತಿಯ ಪಿಯುಸಿ (2nd PUC) ಪರೀಕ್ಷೆ ಬರೆಯಲು ಬಂದ ವಿಧ್ಯಾರ್ಥಿ ಮೇಲೆ ಹಲ್ಲೆ ಹಲ್ಲೆ ನಡೆದಿದೆ. ಅನ್ಯಕೋಮಿನ ಹುಡುಗರ ನಡುವೆ ಈ ಘಟನೆ ಸಂಭವಿಸಿದೆ.
ಬೆಂಗಳೂರಿನ ಕೆಆರ್ ಪುರದ ಸಿಲಿಕಾನ್ ಸಿಟಿ ಕಾಲೇಜ್ ಗೇಟ್ ಬಳಿ ಈ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿ ಹೊರಬಂದ ಶ್ರೀ ವೆಂಕಟೇಶ್ವರ ಕಾಲೇಜಿನ ವಿದ್ಯಾರ್ಥಿ ಮೇಲೆ ಪುಂಡರ ಗುಂಪು ಮಾರಕಾಸ್ತ್ರ, ಕಲ್ಲು, ಟೈಲ್ಸ್ ಗಳಿಂದ ಹಲ್ಲೆ ಮಾಡಿದ್ದಾರೆ.
ಕೇವಲ ಓರ್ವ ವಿದ್ಯಾರ್ಥಿ ಮಾತ್ರವಲ್ಲದೇ ಆತನ ಜೊತೆಯಿದ್ದ ಗೆಳೆಯರಿಗೂ ಕೂಡ ಥಳಿಸಲಾಗಿದೆ. ಈ ವೇಳೆ ಹಲ್ಲೆಗೊಳಗಾದ ಯುವಕರು ರಕ್ತ ಸುರಿಸುತ್ತಾ ಸ್ಥಳದಿಂದ ಓಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಕೆಆರ್ ಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಲ್ಲೆ ಒಳಗಾದ ವಿದ್ಯಾರ್ಥಿ ಹಾಗೂ ಆತನ ಗೆಳೆಯರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಆ ಬಳಿಕ ಚಿಕಿತ್ಸೆಗೆ ಒಳಪಡಿಸಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.