2026-03-07 05:20:40

A Singular Speech In The House On The Last Day! | ಕೊನೆಯ ದಿನ ಸದನದಲ್ಲಿ ಏಕವಚನದ ಭಾಷಣ! | Speed News Kannada

A Singular Speech In The House On The Last Day! | ಕೊನೆಯ ದಿನ ಸದನದಲ್ಲಿ ಏಕವಚನದ ಭಾಷಣ! | Speed News Kannada

ಇಂದು ಸದನದಲ್ಲಿ ನಡೆಯಬೇಕಾದ ಕಲಾಪದಲ್ಲಿ ಗದ್ದಲ ಅತಿರೇಕಕ್ಕೆ ಹೋಗಿರುವಂಥದ್ದು. ಬಿಜೆಪಿ ನಾಯಕರಿಗೆ ಕಾಂಗ್ರೆಸ್ ನಾಯಕರು ಏಕವಚನದಲ್ಲಿ ಬೈದಿರುವಂತ ಗಲಾಟೆಯಾಗಿದೆ. ಶಿವಲಿಂಗೇಗೌಡರು ಮಾತನಾಡಿರುವಂತ ಮಾತು ಈಗ ಬಾರಿ ಸೃಷ್ಟಿಯಾಗಿದೆ. ಹಳ್ಳಿಯ ಸೊಗಡಿನ ಮಾತುಗಳು ಈ ಒಂದು ಕಲಾಪದಲ್ಲಿ ಚರ್ಚೆಗೆ ಕಾರಣವಾಗಿದೆ. ಶಾಸಕರು ನಾಯಕರ ನಡುವೆ ವಾದ ವಾಗ್ವಾದ ಕೇಳಲು ಆಗುತ್ತಿಲ್ಲ. ಶರಣು ಸಲಾಗರ್ ಅವರ ಪತ್ನಿ ಹೆಸರನ್ನು ಕೂಡ ಇಲ್ಲಿ ಹೇಳಲಾಗಿದೆ. 

ಇನ್ನು ಅಬಕಾರಿ ಭ್ರಷ್ಟಾಚಾರ ವಿರುದ್ಧ ಪ್ರತಿಪಕ್ಷಗಳು ಪಟ್ಟು ಹಿಡಿದಿರುವಂತದ್ದು. ತಿಮ್ಮಾಪುರ ರಾಜಿನಾಮೆಗೆ ಪಟ್ಟು ಹಿಡಿದು ಸದನದಲ್ಲಿ ಗದ್ದಲವನ್ನು ಸೃಷ್ಟಿಸಿದ್ದಾರೆ. ತಿಮ್ಮಪೂರ ನವರು ರಾಜೀನಾಮೆ ಕೊಡಲೇಬೇಕು ಭ್ರಷ್ಟ ಸರ್ಕಾರಕ್ಕೆ ದಿಕ್ಕಾರ ಅಂತ ವಿಪಕ್ಷಗಳು ಸಮರಾಗ್ನಿ ವಾಗಿ ಪಟ್ಟು ಹಿಡಿದು ಕಚ್ಚಾಡಿದ್ದಾರೆ. ಮನ್ನರೇಗಾ ಚರ್ಚೆ ನಡೆವೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ನಾಯಕರು ಮಾತನಾಡಿದರೆ ಸೊಗಡು ಕಾಣುತ್ತಿತ್ತು ಈಗ ಸುಡುಗಾಡು ಕಾಣುತ್ತಿದೆ. 

ಒಟ್ಟಾರೆ ಕೊನೆಯ ದಿನ ಸದನದ ಕಲಾಪದಲ್ಲಿ ಅಬಕಾರಿ ಅಕ್ರಮ ವಿರುದ್ಧ ಬಿಜೆಪಿ ನಾಯಕರು ದೊಡ್ಡ ಹೋರಾಟ ಮಾಡ್ತಾ ಇದ್ದಾರೆ. ಇತ್ತ ಶಿವಲಿಂಗೇಗೌಡರು ಬಾಯಿಗೆ ಬಂದಂಗೆ ಬಿಜೆಪಿ ನಾಯಕರಿಗೆ ಬೈದಿರುವುದು ಅಚ್ಚರಿಗೆ ಕಾರಣವಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.