2026-06-25 04:17:02

A petty fight over just touching a foot ends in murder | ಜಸ್ಟ್ ಕಾಲು ಟಚ್ ಆಗಿದ್ದಕ್ಕೆ ಕಿರಿಕ್ ಕ್ಷುಲ್ಲಕ ಜಗಳ ಕೊ*ಲೆಯಲ್ಲಿ ಅಂತ್ಯ | Speed News Kannada

A petty fight over just touching a foot ends in murder | ಜಸ್ಟ್ ಕಾಲು ಟಚ್ ಆಗಿದ್ದಕ್ಕೆ ಕಿರಿಕ್ ಕ್ಷುಲ್ಲಕ ಜಗಳ ಕೊ*ಲೆಯಲ್ಲಿ ಅಂತ್ಯ | Speed News Kannada

ಬೆಂಗಳೂರು: ಸಣ್ಣ ವಾಗ್ವಾದವೊಂದು ಭೀಕರ ಹತ್ಯೆಗೆ  ಕಾರಣವಾಗಿದೆ. ಬೆಂಗಳೂರಿನ  ಬಸವೇಶ್ವರ ನಗರದ ತಿಮ್ಮಯ್ಯ ರಸ್ತೆಯಲ್ಲಿರುವ ಶ್ರೀಗುರು ರಾಘವೇಂದ್ರ ದೋಸೆ ಕ್ಯಾಂಪ್‌ನಲ್ಲಿ  ಈ ದುರ್ಘಟನೆ ಸಂಭವಿಸಿದೆ. ರಾತ್ರಿ ಸುಮಾರು 10 ಗಂಟೆಗೆ ಊಟಕ್ಕೆ ಬಂದಿದ್ದ ಲೋನ್ ರಿಕವರಿ ಏಜೆಂಟ್ ಶಶಿಕುಮಾ‌ರ್ , ಊಟ ಮುಗಿಸಿ ಹೊರಬರುವಾಗ ಅಜಾಗರೂಕತೆಯಿಂದ ಮಂಜುನಾಥ್‌ಗೆ ಕಾಲು ತಗುಲಿತ್ತು.
ಈ ಸಣ್ಣ ಘಟನೆ ಜಗಳಕ್ಕೆ ತಿರುಗಿ, ಹೋಟೆಲ್ ಮಾಲೀಕರು ಮಧ್ಯಸ್ಥಿಕೆ ವಹಿಸಿ ಇಬ್ಬರನ್ನೂ ಬೇರ್ಪಡಿಸಿದ್ದರು. ಆದರೆ ಕೋಪ ತಣ್ಣಗಾಗದ ಮಂಜುನಾಥ್ ತನ್ನ ಸಹೋದರ ಭವ್ಯರಾಜ್‌ಗೆ ಕರೆ ಮಾಡಿ ಶಸ್ತ್ರಾಸ್ತ್ರದೊಂದಿಗೆ ಬರಲು ಹೇಳಿದ್ದಾನೆ. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿದ ಅಣ್ಣ-ತಮ್ಮಂದಿರು ಶಶಿಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ ತೀವ್ರವಾಗಿ ಇರಿತಕ್ಕೊಳಗಾದ ಶಶಿಕುಮಾರ್ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲ್ಪಟ್ಟರೂ ಪ್ರಾಣ ಬದುಕುಳಿಯಲಿಲ್ಲ. ಈ ಘಟನೆ ಸಂಬಂಧ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಇನ್ನು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಯತೀಶ್ ತಿಳಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.