2026-06-08 01:24:50

A miracle happened in Shirdi | ಶಿರಡಿಯಲ್ಲಿ ಪವಾಡ ಸಂಭವಿಸಿದೆ ಬಾಬಾರನ್ನು ನೋಡಿದೆ ಎಂದ ಕಿರುತೆರೆ ನಟಿ ಕಾವ್ಯ | Speed News Kannada

A miracle happened in Shirdi | ಶಿರಡಿಯಲ್ಲಿ ಪವಾಡ ಸಂಭವಿಸಿದೆ ಬಾಬಾರನ್ನು ನೋಡಿದೆ ಎಂದ ಕಿರುತೆರೆ ನಟಿ ಕಾವ್ಯ | Speed News Kannada

ಕಿರುತೆರೆ ನಟಿ ಕಾವ್ಯಾ ಗೌಡ ಅವರು ಪತಿ ಸೋಮಶೇಖರ್ ಜೊತೆ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆದುಕೊಂಡಿದ್ದಾರೆ. ಆ ಸಂದರ್ಭದಲ್ಲಿ ವಿಶೇಷ ಪವಾಡ ಒಂದು ನಡೆಯಿತು ಎಂದು ಹೇಳಿಕೊಂಡಿದ್ದಾರೆ. ದೇವಸ್ಥಾನದಲ್ಲಿ ನಡೆದ ಘಟನೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಅವರು, 'ಇದು ನಿಜಕ್ಕೂ ಒಂದು ಪವಾಡದಂತೆ ಅನಿಸಿತು. ನಾನು ಬಾಬಾರ ಉಡುಪಿಗೆ ಹೊಂದಿಕೆಯಾಗುವಂತಹ ಬಣ್ಣದ ಉಡುಪನ್ನೇ ಧರಿಸುತ್ತೇನೆ ಎಂದು ನನ್ನ ಪತಿಯ ಬಳಿ ಹೇಳಿದ್ದೆ ಮತ್ತು ಹಾಗೆಯೇ ಮನಸ್ಸಿನಲ್ಲಿ ಅಂದುಕೊಂಡಿದ್ದೆ ಆದರೆ ಅದು ಸಾಧ್ಯವಾಗಲಿಲ್ಲ' ಎಂದಿದ್ದಾರೆ.
'ಅಲ್ಲಿ ಒಂದು ವಿಶೇಷ ನಡೆಯಿತು. ಹೀಗೆ ಮುಂದೆ ಸಾಗುವಾಗ ನಾನು ಒಬ್ಬರನ್ನು ನೋಡಿದೆ. ಅವರನ್ನು ಏನೆಂದು ಕರೆಯಬೇಕೆಂದು ನನಗೆ ತಿಳಿಯುತ್ತಿಲ್ಲ. ಆದರೆ ನನ್ನ ಮನಸ್ಸು ಮಾತ್ರ ಅವರನ್ನು 'ಬಾಬಾ' ಎಂದೇ ಹೇಳುತ್ತಿತ್ತು. ಅವರು ಅಲ್ಲಿಯೇ ನಿಂತರು, ನನ್ನನ್ನೇ ದಿಟ್ಟಿಸಿ ನೋಡಿದರು. ಕೊನೆಗೂ ಅವರ ಪೋಟೊ ನಾನು ಕ್ಲಿಕ್ಕಿಸಿದೆ. ನಾನು ಹಿಂತಿರುಗಿ ಬಂದು ನೋಡಿದಾಗ...ಅವರು ಬಿಳಿ ಬಣ್ಣದ ಬಟ್ಟೆ ಧರಿಸಿದ್ದರು. ಇದನ್ನು ಏನೆಂದು ಕರೆಯಬೇಕೆಂದು ನನಗೆ ತಿಳಿಯುತ್ತಿಲ್ಲ' ಎಂದು ಹೇಳಿಕೊಂಡಿದ್ದಾರೆ. 'ಆದರೆ, ಇಂದು ಬಾಬಾ ನನ್ನ ಜೊತೆಯಲ್ಲೇ ಇದ್ದರು ಎಂದು ನನಗೆ ಅನ್ನಿಸುತ್ತಿದೆ. ನಂಬಿಕೆ ಮತ್ತು ಭಾವನೆಗಳ ನಡುವೆ ಎಲ್ಲೋ ಒಂದು ಕಡೆ ಪವಾಡ ಸಂಭವಿಸಿದೆ' ಎಂದಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.