ದೇವನಹಳ್ಳಿ ಫೆ 04: ಗಂಡನಿಂದ ದೂರವಿದ್ದ ಮಹಿಳೆಯನ್ನು ಪ್ರೀತಿ ಹೆಸರಲ್ಲಿ ನಂಬಿಸಿ, ಲೈಂಗಿಕ ಸಂಪರ್ಕ ಬೆಳೆಸಿಕೊಂಡುದಿದ್ದಲ್ಲದೇ ಆರೋಪಿ ಆಕೆ ಗರ್ಭಿಣಿಯಾದಾಗ ಊಟದಲ್ಲಿ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ ಆರೋಪ ಕೇಳಿಬಂದಿದೆ. ಜಾತಿ ನಿಂದನೆ, ಹಲ್ಲೆ ಕೂಡ ನಡೆಸಿ ಮನೆಯಿಂದ ಹೊರಹಾಕಿದ್ದ ಈತ ಬಳಿಕ ಆಕೆಯನ್ನು ನಂಬಿಸಿ ಕರೆದೊಯ್ದು ಈರೀತಿಯ ಕೃತ್ಯ ನಡೆಸಿದ್ದಾನೆ ಎಂದು ದೂರು ದಾಖಲಾಗಿದೆ.
ಗಂಡನಿಂದ ದೂರವಾಗಿದ್ದ ಮಹಿಳೆಯನ್ನು ಪ್ರೀತಿ ಹೆಸರಲ್ಲಿ ಮದುವೆಯಾಗೋದಾಗಿ ನಂಬಿಸಿ ಲೈಂಗಿಕ ಸಂಪರ್ಕ ನಡೆಸಿದ್ದಲ್ಲದೆ, ಬಳಿಕ ಆಕೆ ಗರ್ಭಿಣಿ ಎಂಬ ವಿಷಯ ತಿಳಿದ ಪ್ರಿಯಕರ ಊಟದಲ್ಲಿ ಗರ್ಭಪಾತದ ಮಾತ್ರೆಕೊಟ್ಟಿರುವ ಆರೋಪ ದೇವನಹಳ್ಳಿಯಲ್ಲಿ ಕೇಳಿಬಂದಿದೆ. ಪ್ರಕರಣ ಸಂಬಂಧ ದೊಡ್ಡಬಳ್ಳಾಪುರ ನಗರದ ಶಾಂತಿನಗರ ನಿವಾಸಿ ಪ್ರವೀಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಗೆ ಓರ್ವ ಮಗಳು ಕೂಡ ಇದ್ದಾಳೆಂಬ ವಿಷಯ ಬಹಿರಂಗವಾಗಿದ್ದು, ತನ್ನ ಮೇಲೆ ಆರೋಪಿ ಮತ್ತು ಆತನ ಕುಟುಂಬ ಶೋಷಣೆ ನಡೆಸಿರೋದಾಗಿ ಆಕೆ ಆರೋಪಿಸಿದ್ದಾಳೆ.
ಗಂಡನಿಂದ ದೂರವಾಗಿದ್ದ ಸಂತ್ರಸ್ತೆ ಎರಡು ವರ್ಷಗಳ ಹಿಂದೆ ಕೆಲಸಕ್ಕೆಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಹತ್ತಿರವಿರುವ ಕೆಫೆಯೊಂದರಲ್ಲಿ ಮ್ಯಾನೇಜರ್ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಆಕೆಗೆ ಆರೋಪಿ ಪ್ರವೀಣ್ ಕುಮಾರ್ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿದ್ದು, ಈ ವೇಳೆ ತನಗೆ ಅದಾಗಲೇ ಮದುವೆಯಾಗಿ ಮಗಳಿದ್ದ ಬಗ್ಗೆ ಮಹಿಳೆ ತಿಳಿಸಿದ್ದಳು. ಹೀಗಿದ್ದರೂ ನೀನೆಂದರೆ ತನಗೆ ಇಷ್ಟ ಎಂದು ನಂಬಿಸಿದ್ದ ಆರೋಪಿ ಆಕೆಯ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದ. ಸಾಲದ್ದಕ್ಕೆ ಸಂತ್ರಸ್ತೆ ಒಂದು ವರ್ಷ ಆತನ ಮನೆಯಲ್ಲೇ ನೆಲೆಸಿದ್ದಳು ಎನ್ನಲಾಗಿದೆ. ಈ ವೇಳೆ ಆಕೆ ತಾನೀಗ ನಾಲ್ಕು ತಿಂಗಳ ಗರ್ಭಿಣಿ ಎಂದು ಪ್ರವೀಣ್ಗೆ ತಿಳಿಸಿದ್ದು, ಆ ವೇಳೆ ಈತನ ಅಸಲೀ ಮುಖ ಅನಾವರಣ ಆಗಿದೆ ಎಂದು ಸಂತ್ರಸ್ತೆ ದೂರಿದ್ದಾಳೆ.