2026-06-25 02:11:41

A man who had come to a hotel for dinner was stabbed to death | ಊಟಕ್ಕೆ ಹೋಟೆಲ್ ಬಂದಿದ್ದ ವ್ಯಕ್ತಿಗೆ ಡ್ರಾಗರ್ ನಿಂದ ಇರಿದು ಹತ್ಯೆ | Speed News Kannada

A man who had come to a hotel for dinner was stabbed to death | ಊಟಕ್ಕೆ ಹೋಟೆಲ್ ಬಂದಿದ್ದ ವ್ಯಕ್ತಿಗೆ ಡ್ರಾಗರ್ ನಿಂದ ಇರಿದು ಹತ್ಯೆ | Speed News Kannada

ಬೆಂಗಳೂರು : ಹೋಟೆಲ್ ಗೆ ಊಟಕ್ಕೆ ಬಂದಿದ್ದ ವ್ಯಕ್ತಿಯೊಬ್ಬರನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಬಸವೇಶ್ವರನಗರದ ಶಿವನಹಳ್ಳಿಯಲ್ಲಿ ನಡೆದಿದೆ. ಸೋಮವಾರ ತಡರಾತ್ರಿ 11.30 ಕ್ಕೆ ಶಶಿಕುಮಾರ್ ಎಂಬಾತನನ್ನು ಚಾಕು ಹಾಗೂ ಡ್ರಾಗ‌‌ರ್ ನಿಂದ ಇರಿದು ಹತ್ಯೆ ಮಾಡಲಾಗಿದೆ. ಶ್ರೀ ಗುರು ರಾಘವೇಂದ್ರ ವೆಜ್ ಮತ್ತು ದೋಸೆ ಕಾರ್ನರ್ ಬಳಿ ಈ ಘಟನೆ ನಡೆದಿದೆ. ರಾತ್ರಿ ಊಟ ಶಶಿಕುಮಾರ್ ಬಂದಿದ್ದ ಸಂದರ್ಭದಲ್ಲಿ ಗಲಾಟೆ ಆಗಿ ಇಬ್ಬರು ವ್ಯಕ್ತಿಗಳು ಇರಿದು ಕೊಲೆ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಮರ್ಡರ್ ಮಾಡಲಾಗಿದ್ಯಾ ಅಥವಾ ಕೊಲೆಗೆ ಹಳೇ ವೈಷಮ್ಯ ಕಾರಣನಾ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಬಸವೇಶ್ವರನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೋಳಿ ಹಬ್ಬದ ವೇಳೆ ಪುಂಡಾಟಿಕೆ ಮಾಡಿದ್ರೆ ಹುಷಾರ್ - ಬೀದಿ ಕಾಮಣ್ಯರಿಗೆ ಪೊಲಿಸ್ ವಾರ್ನಿಂಗ್!
ಮೈಸೂರು : ಎಲ್ಲೆಡೆ ಹೋಳಿ ಹಬ್ಬದ ಸೆಲೆಬ್ರೇಷನ್ ಜೋರಾಗಿದ್ದು, ಪ್ಯಾಲೇಸ್ ಸಿಟಿ ಮೈಸೂರಲ್ಲಿ ಹೋಳಿ ಹಬ್ಬದ ಆಚರಣೆಗೆ ಸ್ಟಿಕ್ಟ್ ರೂಲ್ಸ್ ಜಾರಿ ಮಾಡಲಾಗುತ್ತಿದೆ. ಹೋಳಿ ಹಬ್ಬದ ಸಂಭ್ರಮದ ನಡುವೆಯೂ ಮಹಿಳೆಯರ ಸುರಕ್ಷತೆಗೆ ಯಾವುದೇ ಧಕ್ಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. ಹಬ್ಬದ ಸಂದರ್ಭದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಸೆಕ್ಷನ್ 79ರಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಾಗೃತಿ ಪೋಸ್ಟರ್ ನಲ್ಲಿ ತಿಳಿಸಲಾಗಿದೆ.
ಈವ್-ಟೀಸಿಂಗ್, ಬ್ಯಾಡ್ ಟಚ್, ಬ್ಯಾಡ್ ಕಮೆಂಟ್ಸ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವ ಘಟನೆಗಳು ನಡೆಯುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪೋಲೀಸ್ ಇಲಾಖೆ ಈ ಸೂಚನೆ ಹೊರಡಿಸಿದೆ. ಮಹಿಳೆಯರ ಮಾನಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ಕೃತ್ಯ ಗಂಭೀರ ಅಪರಾಧವಾಗಿದ್ದು, ತಪ್ಪಿತಸ್ಥರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.