2026-03-07 06:11:33

7 people including 6 college students die | ಹೊಸಕೋಟೆ ಬಳಿ ಭೀಕರ ಸರಣಿ ಅಪಘಾತ 6 ಕಾಲೇಜು ವಿದ್ಯಾರ್ಥಿಗಳು ಸೇರಿ 7 ಮಂದಿ ದುರ್ಮರಣ | Speed News Kannada

7 people including 6 college students die | ಹೊಸಕೋಟೆ ಬಳಿ ಭೀಕರ ಸರಣಿ ಅಪಘಾತ 6 ಕಾಲೇಜು ವಿದ್ಯಾರ್ಥಿಗಳು ಸೇರಿ 7 ಮಂದಿ ದುರ್ಮರಣ | Speed News Kannada

ಹೊಸಕೋಟೆ: ಹೊಸಕೋಟೆ - ದಾಬಸ್ ಪೇಟೆ ರಾಷ್ಟೀಯ ಹೆದ್ದಾರಿಯಲ್ಲಿರುವ ಎಂ. ಸತ್ಯವಾರ ಗ್ರಾಮದ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಖರ ಅಪಘಾತದಲ್ಲಿ 7 ಮಂದಿ ಮೃತರಾಗಿದ್ದಾರೆ. 
ಕಾರು, ಬೈಕ್ ಹಾಗೂ ಕ್ಯಾಂಟರ್ ನಡುವೆ ಈ ಭೀಕರ ಸರಣಿ ಅಪಘಾತ ಸಂಭವಿಸಿದೆ. ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಐಜಿ ಲಾಬುರಾಮ್ ಮಾಹಿತಿ ನೀಡಿ, ಅಪಘಾತ ಸ್ಥಳದಿಂದ ವಾಹನಗಳನ್ನು ತೆರವುಗೊಳಿಸಿ, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಪೈಕಿ ಮೂವರನ್ನು ಗುರುತಿಸಲಾಗಿದೆ ಮತ್ತು ಅವರ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದರು.
ಮೃತಪಟ್ಟವರಲ್ಲಿ ಮೂವರು ಬೆಂಗಳೂರಿನ ನಿವಾಸಿಗಳು. ದೇವನಹಳ್ಳಿಯ ತಿಂಡ್ಲು ಮೂಲದ ಗಗನ್ ಮೃತ ಬೈಕ್ ಸವಾರ. ಕಾರಿನಲ್ಲಿದ್ದ 6 ಯುವಕರು ಬೆಂಗಳೂರಿನ ನಿವಾಸಿಗಳಾದ ಅಯನ್ ಅಲಿ, ಅಶ್ವಿನ್, ಭರತ್, ಅರ್ಹಾನ್ ಮೃತರು. ಉಳಿದ ಇಬ್ಬರ ಮಾಹಿತಿ ಕಲೆ ಹಾಕ್ತಿಕಲಾಗುತ್ತಿದೆ. ಇವರೆಲ್ಲರೂ ಕಾಲೇಜು ವಿದ್ಯಾರ್ಥಿಗಳು ಎಂದು ಪೊಲೀಸರು ಹೇಳಿದ್ದಾರೆ.
ಮೃತ ಬೈಕ್ ಸವಾರ ಗಗನ್ ಮಾವ ದೇವರಾಜ್ ಮಾತನಾಡಿ ಗಗನ್ ತಾಯಿಗೆ ಕಣ್ಣು ಕಾಣಿಸುತ್ತಿಲ್ಲ.  ಒಬ್ಬನೇ ಮಗ. ಗಗನ್ ಓದಿಕೊಂಡು ಕೆಲಸ ಮಾಡುತ್ತಿದ್ದ. ಮುಂಜಾನೆ ಮನೆಗೆ ಬರುವಾಗ ಕಾರು ಡಿಕ್ಕಿಯಾಗಿದೆ ಎಂದಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.