2026-03-07 08:27:41

165 Iranian schoolgirls killed in US Israeli attack | ಅಮೆರಿಕ ಇಸ್ರೇಲ್ ದಾಳಿಗೆ 165 ಇರಾನ್ ಶಾಲಾ ಬಾಲಕಿಯರು ಬಲಿ ಅಂತಿಮ ಮೆರವಣಿಗೆಯಲ್ಲಿ ಜನಸಾಗರ ತೀವ ಆಕ್ರೋಶ | Speed News Kannada

165 Iranian schoolgirls killed in US Israeli attack | ಅಮೆರಿಕ ಇಸ್ರೇಲ್ ದಾಳಿಗೆ 165 ಇರಾನ್ ಶಾಲಾ ಬಾಲಕಿಯರು ಬಲಿ ಅಂತಿಮ ಮೆರವಣಿಗೆಯಲ್ಲಿ ಜನಸಾಗರ ತೀವ ಆಕ್ರೋಶ | Speed News Kannada

ಟೆಹರಾನ್: ಇರಾನ್ ವಿರುದ್ಧ ಅಮೆರಿಕ- ಇಸ್ರೇಲ್ ದಾಳಿಯಿಂದಾಗಿ ಮಧ್ಯ ಪ್ರಾಚ್ಯ ಹೊತ್ತಿ ಉರಿಯುತ್ತಿದೆ. ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದ್ದು, ನೂರಾರು ಅಮಾಯಕ ಜನರು ಕ್ಷಿಪಣಿ ಹೊಡೆತಕ್ಕೆ ಬಲಿಯಾಗುತ್ತಿದ್ದಾರೆ. ಶನಿವಾರ ಇರಾನ್ ನ ಮಿನಾಬ್ ನಗರದಲ್ಲಿ ಅಮೆರಿಕ-ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಗೆ 165 ಅಮಾಯಕ ಶಾಲಾ ಬಾಲಕಿಯರು ಮೃತಪಟ್ಟಿದ್ದಾರೆ. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮೆರವಣಿಗೆ ಇಂದು ನಡೆಯಿತು. ಜನಸಾಗರವೇ ಹರಿದುಬಂದಿತ್ತು. ಮುಗ್ಧ ಶಾಲಾ ಬಾಲಕಿಯರ ದಾಳಿಗೆ ಕಾರಣರಾದ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತ್ಯಕ್ರಿಯೆ ಮೆರವಣಿಗೆಯ ದೃಶ್ಯಗಳನ್ನು ಇರಾನಿನ ಸರ್ಕಾರಿ ಮಾಧ್ಯಮ Press TV ವರದಿ ಮಾಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿರುವ Press TV, ಮಿನಾಬ್ ಎಲಿಮೆಂಟರಿ ಶಾಲೆಯ ಮೇಲೆ ಯುಎಸ್ ಮತ್ತು ಇಸ್ರೇಲಿ ಆಡಳಿತದಿಂದ ನಡೆದ ಭಯೋತ್ಪಾದಕ ದಾಳಿಗೆ ಬಲಿಯಾದರ ಅಂತ್ಯಕ್ರಿಯೆ ಮೆರಣಿಗೆಯಾಗಿದೆ. ಶನಿವಾರ US ಮತ್ತು ಇಸ್ರೇಲ್‌ನಿಂದ ಹತ್ಯೆಯಾದ 165 ಕ್ಕೂ ಹೆಚ್ಚು ಅಮಾಯಕ ಇರಾನಿನ ಶಾಲಾ ಬಾಲಕಿಯರ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಜನಸಾಗರವೇ ಹರಿದುಬಂದಿತು ಎಂದು ಹೇಳಿದೆ. ಇರಾನ್‌ನಲ್ಲಿ ಯುಎಸ್-ಇಸ್ರೇಲಿ ದಾಳಿಯ ನಂತರ ದೇಶದ ಹಾರ್ಮೋನ್ ಪ್ರಾಂತ್ಯದ ಮಿನಾಬ್‌ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಸುಮಾರು 100 ಮಂದಿ ಗಾಯಗೊಂಡಿರುವುದಾಗಿ ಯುಎನ್ ನ್ಯೂಸ್ ವರದಿ ಮಾಡಿದೆ. ಅಮೆರಿಕ, ಇಸ್ರೇಲ್ ನ ಈ ಮಿಲಿಟರಿ ದಾಳಿ ಬಗ್ಗೆ UNESCO ತೀವ್ರ ಕಳವಳ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ವಿದ್ಯಾರ್ಥಿಗಳನ್ನು ರಕ್ಷಿಸಬೇಕಾಗಿದೆ. ಕ್ಷಣ ಸಂಸ್ಥೆಗಳ ವಿರುದ್ಧದ ದಾಳಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಪಾಯವನ್ನುಂಟುಮಾಡುತ್ತವೆ ಮತ್ತು ಶಿಕ್ಷಣದ ಹಕ್ಕನ್ನು ಹಾಳುಮಾಡುತ್ತವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯುನೆಸ್ಕೋ ಹೇಳಿಕೆ ಬಿಡುಗಡೆ ಮಾಡಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.