2026-04-24 01:43:25

Youth triple bike riding with beer | ಯುವಕರ ಟ್ರಿಪಲ್ ಬೈಕ್‌ ರೈಡಿಂಗ್ ಬಿಯರ್ ದರ್ಬಾರ್ | Speed News Kannada

Youth triple bike riding with beer | ಯುವಕರ ಟ್ರಿಪಲ್ ಬೈಕ್‌ ರೈಡಿಂಗ್ ಬಿಯರ್ ದರ್ಬಾರ್ | Speed News Kannada

ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ನಡೆಯುತ್ತಲೇ ಇರುತ್ತೆ. ಮೊನ್ನೆಯಷ್ಟೇ ನಗರದ ಹೃದಯ ಭಾಗದಲ್ಲಿ ತಡರಾತ್ರಿ ಐಶಾರಾಮಿ ಲ್ಯಾಂಬೋರ್ಗಿನಿ ಕಾರಿನ ಡ್ರಿಫ್ಟಿಂಗ್ ಸ್ಟಂಟ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಮದ್ಯ ಸೇವಿಸುತ್ತಲೇ ಬೈಕಿನಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತಿರುವ ಯುವಕರ ವಿಡಿಯೋ ವೈರಲ್ ಆಗಿದೆ. ಬೆಂಗಳೂರಿನ ಬಿಟಿಎಂ ರಸ್ತೆಯಲ್ಲಿ ರಾತ್ರಿ ವೇಳೆ ಸ್ಕೂಟರ್‍‌ನಲ್ಲಿ ಮೂವರು ಯುವಕರು ತೆರಳುತ್ತಿರುವ ದೃಶ್ಯ ಕಂಡು ಬಂದಿದೆ. ಹಿಂಬದಿ ಕೂತಿದ್ದ ವ್ಯಕ್ತಿಯ ಕೈಯಲ್ಲಿ ಬಿಯರ್ ಬಾಟಲ್‌ ಇಡಿದು ಕುಡಿಯುತ್ತಲೇ ಅಜಾಗರೂಕವಾಗಿ ಸಂಚಾರ ಮಾಡಿದ್ದಾರೆ. ಈ ವಿಡಿಯೋವನ್ನು ಕರ್ನಾಟಕ ಪೋರ್ಟ್‌ಫೊಲಿಯೋ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇಂತಹ ವರ್ತನೆಗಳು, ಕಾನೂನುಬಾಹಿರ ಘಟನೆಗಳು ಬೆಂಗಳೂರಿನಲ್ಲಿ ಮರುಕಳಿಸುತ್ತಲೇ ಇವೆ. ಈ ಯುವಕರ ಇಂತಹ ಬೇಜವಾಬ್ದಾರಿ ನಡೆಯು ಕಾನೂನು ಸಂಪೂರ್ಣ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿತ್ತದೆ. ಸ್ವತಃ ತಮ್ಮ ಜೀವಕ್ಕೆ ಹಾಗೂ ಇತರ ಸವಿರರು, ಪ್ರಯಾಣಿಕರ ಜೀವಕ್ಕೆ ತೊಂದರೆ ಉಂಟು ಮಾಡುವಷ್ಟು ಭಯಾನಕವಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಗಂಭೀರ ಅಪರಾಧ. ಟ್ರಿಪಲ್ ರೈಡಿಂಗ್ ನಲ್ಲಿರುವ ಇವರಲ್ಲಿ ಒಬ್ಬರು ಹೆಲ್ಮೆಟ್ ಹಾಕಿದ್ದು ಕಾಣಿಸುತ್ತದೆ. ಇನ್ನಿಬ್ಬರು ಹೆಲ್ಮೆಟ್ ಹಾಕಿದ್ದರ ಬಗ್ಗೆ ಖಚಿತತೆ ಇಲ್ಲ. ಕೆಲವರು ದುರಹಂಕಾರದ ಮನಸ್ಥಿತಿಯಿಂದ ಈ ರೀತಿ ಮಾಡುತ್ತಾರೆ ಎನ್ನಲಾಗಿದೆ. ವೈರಲ್ ಆಗುತ್ತಿದ್ದಂತೆ ನೆಟ್ಟಿಗರು, ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸಂಚಾರಿ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾನೂನು ಜಾರಿಗೊಳಿಸಬೇಕು. ಇಂತಹ ಘಟನೆಗಳ ಮೇಲೆ ನಿಗಾ ಇಡಬೇಕು ಎಂದು ಆಗ್ರಹಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.