2026-04-23 10:56:27

Vinay Kulkarni convicted in Yogesh Gowda murder case | ಯೋಗೀಶ್‌ ಗೌಡ ಕೊಲೆ ಕೇಸ್‌ನಲ್ಲಿ ವಿನಯ್ ಕುಲಕರ್ಣಿ ಅಪರಾಧಿ, ಇಂದು ಶಿಕ್ಷೆ ಪ್ರಕಟ | Speed news kannada

Vinay Kulkarni convicted in Yogesh Gowda murder case | ಯೋಗೀಶ್‌ ಗೌಡ ಕೊಲೆ ಕೇಸ್‌ನಲ್ಲಿ ವಿನಯ್ ಕುಲಕರ್ಣಿ ಅಪರಾಧಿ, ಇಂದು ಶಿಕ್ಷೆ ಪ್ರಕಟ | Speed news kannada

ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ವಿನಯ್ ಕುಲಕರ್ಣಿ ಯೋಗೀಶ್‌ಗೌಡ ಕೊಲೆ ಕೇಸಲ್ಲಿ ಅಪರಾಧಿಯಾಗಿದ್ದಾರೆ. ಈ ಸಂಬಂಧ ನ್ಯಾಯಾಲಯ ಇಂದು ನ್ಯಾಯಲಯದಲ್ಲಿ (ಏ.16) ವಾದಮಂಡನೆ ಆಗಲಿದ್ದು, ಶಿಕ್ಷೆ ಪ್ರಮಾಣವನ್ನು ಕೋರ್ಟ್‌ ಪ್ರಕಟಿಸಲಿದೆ. 2016ರಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆಯಾಗಿತ್ತು. ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿ ಒಟ್ಟು 21 ಮಂದಿ ಮೇಲೆ ಆರೋಪ ಕೇಳಿ ಬಂದಿತ್ತು. ಪ್ರಕರಣವನ್ನು ಬಿಜೆಪಿ ಸರ್ಕಾರ ಸಿಬಿಐಗೆ ಒಪ್ಪಿಸಿತ್ತು. ಇಂಚಿಂಚು ತನಿಖೆ ನಡೆಸಿದ್ದ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿತ್ತು. ಇದೀಗ ಎ15 ವಿನಯ್ ಕುಲಕರ್ಣಿ ಸೇರಿ 17 ಮಂದಿಯನ್ನು ಕೋರ್ಟ್ ಅಪರಾಧಿಗಳು ಅಂತ ಹೇಳಿದೆ. ಉಳಿದ ಸೋಮಶೇಖರ್ ನ್ಯಾಮಗೌಡ ಹಾಗೂ ವಾಸುದೇವ್ ನಿಲೇಕಣಿಯನ್ನ ಕೋರ್ಟ್ ಖುಲಾಸೆಗೊಳಿಸಿದೆ. ಇನ್ನು ಇಬ್ಬರು ನಿರ್ದೋಷಿಗಳನ್ನು ಬಿಟ್ಟು ಉಳಿದವರನ್ನು ಸಿಬಿಐ ವಶಕ್ಕೆ ಪಡೆದಿದ್ದಾರೆ. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ 17 ಅಪರಾಧಿಗಳ ವೈದ್ಯಕೀಯ ಪರೀಕ್ಷೆ ನಡೆಸಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಿದ್ದಾರೆ. ಪ್ರಕರಣದ  ಎ2 ವಿಕ್ರಮ ಬಳ್ಳಾರಿ, ಎ3 ಕೀರ್ತಿ ಕುಮಾರ್‌, ಎ4 ಸಂದೀಪ್‌ ಸವದತ್ತಿ, ಎ5 ವಿನಾಯಕ ಕಟಗಿ, ಎ6 ಮಹಾಬಲೇಶ್ವರ ಹೊಂಗಲ ಅಲಿಯಾಸ್‌ ಮುದಕ, ಎ7 ಸಂತೋಷ್‌ ಸವದತ್ತಿ, ಎ8 ದಿನೇಶ್‌, ಎ9 ಅಶ್ವತ್ಥ್‌, ಎ10 ಸುನೀಲ್‌, ಎ11 ನಜೀರ್‌ ಅಹ್ಮದ್‌, ಎ12 ಶಾನವಾಜ್‌, ಎ13 ನೂತನ್‌, ಎ14 ಸಿ.ಹರ್ಷಿತ್‌, ಎ16 ಚಂದ್ರಶೇಖರ ಇಂಡಿ, ಎ18 ವಿಕಾಸ ಕಲಬುರಗಿ, ಎ19 ಚನ್ನಕೇಶವ ಟಿಂಗರಿಕರ ಅಪರಾಧಿಗಳು ಪೊಲೀಸರು ಬಂಧಿಸಿದ್ದಾರೆ. ಇಂದಿನ ಕೋರ್ಟ್‌ ಶಿಕ್ಷೆಯ ಅನುಸಾರ ವಿನಯ್‌ ಕುಲಕರ್ಣಿ ಶಾಸಕ ಸ್ಥಾನ ಇರುತ್ತೋ ಕಳೆದುಕೊಳ್ತಾರೋ ಎಂಬುದು ನಿರ್ಧಾರವಾಗಲಿದೆ. ಕೋರ್ಟ್‌ನಿಂದ ತೀರ್ಪು ಹೊರಬಿದ್ದ ಬೆನ್ನಲ್ಲೇ ಯೋಗೀಶ್ ಗೌಡ ಆಪ್ತ ಬಸವರಾಜ್ ಕೊರವರ್ ಸಂತಸ ವ್ಯಕ್ತಪಡಿದ್ರು. ಸತತ 10 ವರ್ಷಗಳ ಹೋರಾಟ, ಶ್ರಮ, ನೋವಿಗೆ ಸಿಕ್ಕ ಜಯವಿದು. ದುಡ್ಡಿನ ದರ್ಪ, ಅಧಿಕಾರದ ಅಹಂನಲ್ಲಿ ಮೆರೆಯುತ್ತಿದ್ದವರಿಗೆ ಕೋರ್ಟ್ ತಕ್ಕ ಶಾಸ್ತಿ ಮಾಡಿದೆ. ಇಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಯೋಗೇಶ್ ಗೌಡ ಕೊಲೆ ಕೇಸ್‌ನಲ್ಲಿ ಕೊನೆಗೂ ಜಯ ಸಿಕ್ಕಿದೆ ಎಂದರು

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.