2026ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಸಮೂಹ ಸುಮಾರು 16,706 ಕೋಟಿ ರೂಪಾಯಿಗೆ ಆರ್‌ಸಿಬಿ ಫ್ರ್ಯಾಂಚೈಸಿಯನ್ನು ಖರೀದಿ ಮಾಡಿದೆ. ಈ ಮೂಲಕ ಹೊಸ ಕ್ಷೇತ್ರಕ್ಕೆ ಆದಿತ್ಯ ಬಿರ್ಲಾ ಕಾಲಿಟ್ಟಿದೆ. ಈ ಹಿಂದೆ ಆರ್‌ಸಿಬಿ ಫ್ರ್ಯಾಂಚೈಸಿಯು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿಯ ಹಿಡಿತದಲ್ಲಿತ್ತು. ಇದೀಗ ಆದಿತ್ಯ ಬಿರ್ಲಾ ಖರೀದಿಸಿದ ಬೆನ್ನಲ್ಲೇ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.
ಬಿಸಿಸಿಐ ಐಪಿಎಲ್ ಆರಂಭಿಸೋ ಸಂಧರ್ಭದಲ್ಲಿ ಫ್ರಾಂಚೈಸಿಗಳನ್ನು ಮಾಡಿ, ಮಾರಲು ಮುಂದಾಯಿತು. ಆಗ ಮಲ್ಯ ಎರಡು ಫ್ರಾಂಚೈಸಿ ನೀಡುವಂತೆ ಬೇಡಿಕೆ ಇಟ್ಟರು. ಆದರೆ, ಒಬ್ಬರಿಗೆ ಒಂದು ತಂಡ ಮಾತ್ರ ಖರೀದಿಸುವ ಅವಕಾಶ ನೀಡಲಾಯಿತು. ಅದರಂತೆ ಮಲ್ಯ 450 ಕೋಟಿ ರೂಪಾಯಿ ನೀಡಿ ಒಂದು ತಂಡ ಖರೀದಿ ಮಾಡಿದರು. ‘ಆರ್‌ಸಿಬಿಯ ಹೊಸ ಮಾಲೀಕರಿಗೆ ನನ್ನ ಹೃತ್ಪೂರ್ವಕವಾಗಿ ಅಭಿನಂದನೆಗಳು. ಐಪಿಎಲ್‌ನಲ್ಲಿ ಅತ್ಯಂತ ಅಮೂಲ್ಯವಾದ ಫ್ರಾಂಚೈಸಿಯನ್ನು ಖರೀದಿಸಿದ ನಿಮಗೆ ಶುಭ ಹಾರೈಸುತ್ತೇನೆ. ನಾನು 2008ರಲ್ಲಿ ಫ್ರಾಂಚೈಸಿಯನ್ನು 450 ಕೋಟಿ ರೂಪಾಯಿಗೆ ಖರೀದಿಸಿದೆ. ಆಗ ಬಹುತೇಕರು ನನ್ನನ್ನು ನೋಡಿ ನಕ್ಕರು. ನನ್ನ ಹೂಡಿಕೆ ವ್ಯರ್ಥ ಎಂದು ಟೀಕಿಸಿದರು’ ಆದ್ರೆ ನನ್ನ 450 ಕೋಟಿ ರೂಪಾಯಿ ಹೂಡಿಕೆ ಈಗ 16,500 ಕೋಟಿ ರೂಪಾಯಿಗಳಿಗೆ ಬೆಳೆದಿರುವುದನ್ನು ನೋಡಲು ಅಪಾರ ಸಂತೋಷವಾಗಿದೆ. ಆರ್‌ಸಿಬಿ ಯಾವಾಗಲೂ ನನ್ನ ಡಿಎನ್‌ಎಯ ಭಾಗವಾಗಿ ಉಳಿಯುತ್ತದೆ’ ಎಂದು ಮಲ್ಯ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.