2026-04-23 09:36:35

US Navy warns 2 oil tankers that passed through Strait of Hormuz | ಹೊರ್ಮುಜ್‌ ದಾಟಿದ 2 ತೈಲ ಟ್ಯಾಂಕರ್‌ಗಳಿಗೆ ಯುಎಸ್‌ ನೌಕಾಪಡೆ ವಾರ್ನಿಂಗ್‌ | Speed news kannada

US Navy warns 2 oil tankers that passed through Strait of Hormuz | ಹೊರ್ಮುಜ್‌ ದಾಟಿದ 2 ತೈಲ ಟ್ಯಾಂಕರ್‌ಗಳಿಗೆ ಯುಎಸ್‌ ನೌಕಾಪಡೆ ವಾರ್ನಿಂಗ್‌ | Speed news kannada

ಒಮಾನ್ ಕೊಲ್ಲಿಯ ಚಾಬಹಾರ್ ಬಂದರಿನಿಂದ ಹೊರಟಿದ್ದ 2 ತೈಲ ಟ್ಯಾಂಕರ್‌ಗಳನ್ನು ಯುಎಸ್‌ ನೌಕಪಡೆ ತಡೆದು ನಿಲ್ಲಿಸಿದೆ. ಹೊರ್ಮುಜ್‌ ದಾಟುವ ವೇಳೆ ಎರಡು ತೈಲ ಟ್ಯಾಂಕರ್ಗಳನ್ನು ನಿಲ್ಲಿಸಿದ್ದು, ಯುದ್ದನೌಕೆ ರೇಡಿಯೋ ಮೂಲಕ ಅವರನ್ನು ಸಂಪರ್ಕಿಸಿ ವಾಪಸ್‌ ಹೋಗುವಂತೆ  ಯುಎಸ್‌ ನೌಕಾಪಡೆ ವಾರ್ನಿಂಗ್‌ ಮಾಡಿದೆ. ಫೆಬ್ರವರಿ 28 ರಂದು ಭುಗಿಲೆದ್ದ ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷವನ್ನು ಕೊಲೆಗೊಳಿಸಲು ಇಸ್ಲಾಮಾಬಾದ್‌ನಲ್ಲಿ ನಡೆದ ಸಂಧಾನ ಮಾತುಕತೆ ವಿಫಲವಾಯಿತು. ಇದರ ಬೆನ್ನಲ್ಲೇ ಟ್ರಂಪ್‌ ಹಾರ್ಮುಜ್‌ ದಿಗ್ಬಂಧನ ಕ್ರಮ ಕೈಗೊಂಡಿದ್ದಾರೆ. ಸೋಮವಾರದಿಂದ ದಿಗ್ಬಂಧನ ಪ್ರಾರಂಭವಾದಾಗಿನಿಂದ ಯಾವುದೇ ಹಡಗುಗಳು ಈ ಮೂಲಕ ಹಾದು ಹೋಗಿಲ್ಲ ಎನ್ನಲಾಗಿದೆ. ಅಮೆರಿಕದ ನೌಕಾ ದಿಗ್ಬಂಧನದ ಹೊರತಾಗಿಯೂ ಇರಾನ್ ಬಂದರುಗಳಿಂದ ಹೊರಟ ಮೂರು ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟುವಲ್ಲಿ ಯಶಸ್ವಿಯಾಗಿವೆ ಎಂದು ಕಡಲ ಟ್ರ್ಯಾಕಿಂಗ್ ದತ್ತಾಂಶವು ತಿಳಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.