2026-04-24 01:40:05

Uppi will give new news on April 1st |ಏಪ್ರಿಲ್-1 ರಂದು ಹೊಸ ನ್ಯೂಸ್ ಕೊಡ್ತಾರಂತೆ ಉಪ್ಪಿ|Speed News Kannada

Uppi will give new news on April 1st |ಏಪ್ರಿಲ್-1 ರಂದು ಹೊಸ ನ್ಯೂಸ್ ಕೊಡ್ತಾರಂತೆ ಉಪ್ಪಿ|Speed News Kannada

ರಿಯಲ್ ಸ್ಟಾರ್ ಉಪೇಂದ್ರ ಈ ಸಲ ಒಂದು ಅತಿ ದೊಡ್ಡ ಭರವಸೆ ಕೊಟ್ಟಿದ್ದಾರೆ. ಆದರೆ, ಇದನ್ನ ಏಪ್ರಿಲ್-1 ರಂದು ಹೇಳ್ತೀನಿ ಅಂತಿದ್ದಾರೆ. ಹಾಗಂತ ನಿಮ್ಮನ್ನ ಮೂರ್ಖರನ್ನಾಗಿಸೋದಿಲ್ಲ ಅಂತ ಪ್ರಾಮಿಸ್ ಮಾಡಿದ್ದಾರೆ. ಈ ಸಲ ಉಪೇಂದ್ರ ಏನ್ ಲಿಂಕ್  ಹಾಕುತ್ತಾರೆ ಅನ್ನೋ ಕುತೂಹಲ ಹೆಚ್ಚಾಗುತ್ತಿದೆ. ಏಪ್ರಿಲ್-೧ ರಂದು ಒಂದು ಲಿಂಕ್ ಹಾಕುತೀನಿ ಈ ಸಲ ನಿಜವಾದ ಲಿಂಕ್ ಹಾಕುತೀನಿ. ಆದರೆ ಈ ಮುಂದೆ ಒಂದು ಲಿಂಕ್ ಹಾಕೀ. ಅದನ್ನ ತಕ್ಷಣವೇ ಡಿಲೀಟ್ ಮಾಡುತೀನಿ ಅದಕ್ಕೇ ನೀವು ಮೂರ್ಖರ ದಿನ ಅಂತ ಕನ್ಫ್ಯೂಸ್ ಆಗ್ಬೇಡಿ ಎಂದಿದ್ದರು. ಆದರೆ, ಉಪ್ಪಿ ಹೇಳಿದ್ದ ಲಿಂಕ್ ಅಲ್ಲಿ ಕೆಂಪು ಬಣ್ಣದ ಸಿಲಿಂಡರ್ ಫೋಟೋ ಇತ್ತು ಅಷ್ಟೆ ಎಂದಿದ್ದಾರೆ.

ಉಪೇಂದ್ರ ನಿಜಕ್ಕೂ ಯಾವ ವಿಷಯದ ಲಿಂಕ್ ಹಾಕುತ್ತಾರೆ? ಅದು ಪ್ರಜಾಕೀಯದ ಮ್ಯಾಟರ್ ಇರೋ ಲಿಂಕ್ ಆಗಿರುತ್ತಾ? ಅಥವಾ ಮಗನ ಸಿನಿಮಾ ವಿಷಯವೇ ಆಗಿರುತ್ತ? ಎನೋದು ಗೊತ್ತಿಲ್ಲ. ಈ ಬಗ್ಗೆ ಯಾವುದೇ ಹಿಂಟ್ ಕೊಟ್ಟಿಲ್ಲ. ಆದರೆ, ಮತ್ತೆ ಕುತೂಹಲ ಹುಟ್ಟುಹಾಕಿದ್ದಾರೆ ನೋಡಿ. ಉಪ್ಪಿಯ ಈ ಒಂದು ಲಿಂಕ್ ನೋಡಿದವ್ರು ತಮ್ಮದೇ ರೀತಿಯಲ್ಲಿಯೇ ಕಾಮೆಂಟ್ ಹಾಕುತ್ತಿದರೆ. ಒಬ್ಬರು ಸ್ಟಾಪ್ ಅನ್ನುವ ಫೋಟೋ ಇನ್ಯಾರೋ ಸಿಲಿಂಡರ್ ಮೇಲೆ ಕುಳಿತು ಒಲೆ ಮೇಲೆ ಅಡುಗೆ ಮಾಡ್ತಿರೋ ಅಜ್ಜಿಯ ಫೋಟೋ ಹಾಕಿದ್ದಾರೆ. ಮೈ ಮೈಂಡ್ ಟು ಯುವರ್ ಮೈಂಡ್ ಅನ್ನೋ ಸಬ್ ಟೈಟಲ್ ಇರೋ ಸಿನಿಮಾದ ಒಂದು ಸೀನ್ ಕೂಡ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಮತ್ತೆ ಎಲ್ಲರ ತಲೆಯಲ್ಲೂ ಉಪ್ಪಿ ಅವರು ಹುಳ ಬಿಡುತ್ತಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.