2026-04-23 07:44:09

Towing has started again!|ಎಲ್ಲೆಂದರಲ್ಲಿ ವಾಹನ ವಾಹನ ಪಾರ್ಕ್‌ ಮಾಡುವರೇ ಎಚ್ಚರ..! ಮತ್ತೆ ಶುರುವಾದ ಟೋಯಿಂಗ್‌ !|Speed news kannada

Towing has started again!|ಎಲ್ಲೆಂದರಲ್ಲಿ ವಾಹನ ವಾಹನ ಪಾರ್ಕ್‌ ಮಾಡುವರೇ ಎಚ್ಚರ..! ಮತ್ತೆ ಶುರುವಾದ ಟೋಯಿಂಗ್‌ !|Speed news kannada

ಸಿಲಿಕಾನ್‌ ಸಿಟಿಯಲ್ಲಿ ಎಲ್ಲೆಂದರಲ್ಲಿ ವಾಹನ ಪಾರ್ಕ್‌ ಮಾಡಿ ಹೋಗುವವರು ಇನ್ನೂ ಮುಂದೆ ಎಚ್ಚರದಿಂದಿರಿ. ಬೆಂಗಳೂರಿನಲ್ಲಿ ಪಾರ್ಕಿಂಗ್‌ ಕಿರಿಕಿರಿಗೆ ಬ್ರೇಕ್‌ ಹಾಕಲು ನಗರ ಸಂಚಾರಿ ಪೊಲೀಸರು ಸಜ್ಜಾಗಿದ್ದಾರೆ. 2022ರಲ್ಲಿ ನಿಲ್ಲಿಸಲಾಗಿದ್ದ ಟೋಯಿಂಗ್‌ ವ್ಯವಸ್ಥೆ ಇದೇ ಮಾರ್ಚ್‌ 25ರಿಂದ ಶುರುವಾಗಲಿದೆ. ಇನ್ನೂ ಮುಂದೆ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್‌ ಮಾಡಿ ಹೋಗುವ ಸವಾರರ ಜೋಬಿಗೆ ಕತ್ತರಿ ಬಿಳಲಿದ್ದು, ಪ್ರತಿ ಪಾಲಿಕೆ ವ್ಯಾಪ್ತಿಗೆ 2 ಟೋಯಿಂಗ್ ವಾಹನಗಳಂತೆ ಒಟ್ಟು 10 ವಾಹನಗಳನ್ನು ಒದಗಿಸಲಾಗಿದೆ ಎಂದು ಬೆಂಗಳೂರು ಟ್ರಾಫಿಕ್‌ ಪೊಲೀಸರು ತಿಳಿಸಿದ್ದಾರೆ.

ಟೋಯಿಂಗ್‌ ಚಾರ್ಜ್‌ ಮತ್ತು ದಂಡ ಎಷ್ಟು ಅಂತಾ ಗೊತ್ತಾ..?

ಗ್ರೇಟರ್‌ ಬೆಂಗಳೂರು ಅಥಾರಿಟಿ ಸಹಯೋಗದಲ್ಲಿ ಟೋಯಿಂಗ್‌ ಕಾರ್ಯಚರಣೆಯನ್ನು ನಡೆಸುತ್ತಿದ್ದು, ನೋ ಪಾರ್ಕಿಂಗ್‌ ಆಧಾರದಲ್ಲಿ ಟೋಯಿಂಗ್‌ ಚಾರ್ಜ್‌ ನಿಗದಿಪಡಿಸಲಾಗಿದೆ. ಇದರ ಪ್ರಕಾರ ದ್ವಿಚಕ್ರ ವಾಹನಗಳಿಗೆ 650 ರೂ. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 1000 ರೂ. ಟೋಯಿಂಗ್‌ ಚಾರ್ಜ್‌ ನಿಗದಿ ಮಾಡಲಾಗಿದೆ. ಟೋಯಿಂಗ್‌ ವೇಳೆ ಸಿಬ್ಬಂದಿಗಳ ಜೊತೆ ಗಲಾಟೆ ನಡೆಸುವ ಸಾರ್ವಜನಿಕರ ವಿರುದ್ದ ಕ್ರಮ ಕೈಗೊಳ್ಳಲು ಈ ಬಾರಿ ಟೋಯಿಂಗ್‌ ವಾಹನಗಳಿಗೆ ಸಿಸಿಟಿವಿ ಕ್ಯಾಮರಾವನ್ನು ಅಳವಡಿಕೆ ಮಾಡಲಾಗಿದ್ದು, ಸಿಬ್ಬಂದಿಗಳಿಗೂ ಕೂಡ ಬಾಡಿ ವಾರ್ನ್‌ ಕ್ಯಾಮರಾವನ್ನು ಕಡ್ಡಾಯಗೊಳಿಸಲಾಗಿದೆ.

 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.