ಸಿಲಿಕಾನ್ ಸಿಟಿಯಲ್ಲಿ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿ ಹೋಗುವವರು ಇನ್ನೂ ಮುಂದೆ ಎಚ್ಚರದಿಂದಿರಿ. ಬೆಂಗಳೂರಿನಲ್ಲಿ ಪಾರ್ಕಿಂಗ್ ಕಿರಿಕಿರಿಗೆ ಬ್ರೇಕ್ ಹಾಕಲು ನಗರ ಸಂಚಾರಿ ಪೊಲೀಸರು ಸಜ್ಜಾಗಿದ್ದಾರೆ. 2022ರಲ್ಲಿ ನಿಲ್ಲಿಸಲಾಗಿದ್ದ ಟೋಯಿಂಗ್ ವ್ಯವಸ್ಥೆ ಇದೇ ಮಾರ್ಚ್ 25ರಿಂದ ಶುರುವಾಗಲಿದೆ. ಇನ್ನೂ ಮುಂದೆ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಹೋಗುವ ಸವಾರರ ಜೋಬಿಗೆ ಕತ್ತರಿ ಬಿಳಲಿದ್ದು, ಪ್ರತಿ ಪಾಲಿಕೆ ವ್ಯಾಪ್ತಿಗೆ 2 ಟೋಯಿಂಗ್ ವಾಹನಗಳಂತೆ ಒಟ್ಟು 10 ವಾಹನಗಳನ್ನು ಒದಗಿಸಲಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಟೋಯಿಂಗ್ ಚಾರ್ಜ್ ಮತ್ತು ದಂಡ ಎಷ್ಟು ಅಂತಾ ಗೊತ್ತಾ..?
ಗ್ರೇಟರ್ ಬೆಂಗಳೂರು ಅಥಾರಿಟಿ ಸಹಯೋಗದಲ್ಲಿ ಟೋಯಿಂಗ್ ಕಾರ್ಯಚರಣೆಯನ್ನು ನಡೆಸುತ್ತಿದ್ದು, ನೋ ಪಾರ್ಕಿಂಗ್ ಆಧಾರದಲ್ಲಿ ಟೋಯಿಂಗ್ ಚಾರ್ಜ್ ನಿಗದಿಪಡಿಸಲಾಗಿದೆ. ಇದರ ಪ್ರಕಾರ ದ್ವಿಚಕ್ರ ವಾಹನಗಳಿಗೆ 650 ರೂ. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 1000 ರೂ. ಟೋಯಿಂಗ್ ಚಾರ್ಜ್ ನಿಗದಿ ಮಾಡಲಾಗಿದೆ. ಟೋಯಿಂಗ್ ವೇಳೆ ಸಿಬ್ಬಂದಿಗಳ ಜೊತೆ ಗಲಾಟೆ ನಡೆಸುವ ಸಾರ್ವಜನಿಕರ ವಿರುದ್ದ ಕ್ರಮ ಕೈಗೊಳ್ಳಲು ಈ ಬಾರಿ ಟೋಯಿಂಗ್ ವಾಹನಗಳಿಗೆ ಸಿಸಿಟಿವಿ ಕ್ಯಾಮರಾವನ್ನು ಅಳವಡಿಕೆ ಮಾಡಲಾಗಿದ್ದು, ಸಿಬ್ಬಂದಿಗಳಿಗೂ ಕೂಡ ಬಾಡಿ ವಾರ್ನ್ ಕ್ಯಾಮರಾವನ್ನು ಕಡ್ಡಾಯಗೊಳಿಸಲಾಗಿದೆ.