2026-04-24 02:54:21

The servant who stole gold from a priests house | ಬ್ರಾಹ್ಮಣರ ಹೆಂಡತಿಗೆ ಬಾಗಿನ ಕೊಡುವ ನೆಪ ಪುರೋಹಿತರ ಮನೆ ಚಿನ್ನಕ್ಕೆ ಕೈಹಾಕ್ತಿದ್ದ ಖದೀಮ ಅರೆಸ್ಟ್ | Speed News Kannada

The servant who stole gold from a priests house | ಬ್ರಾಹ್ಮಣರ ಹೆಂಡತಿಗೆ ಬಾಗಿನ ಕೊಡುವ ನೆಪ ಪುರೋಹಿತರ ಮನೆ ಚಿನ್ನಕ್ಕೆ ಕೈಹಾಕ್ತಿದ್ದ ಖದೀಮ ಅರೆಸ್ಟ್ | Speed News Kannada

ಬೆಂಗಳೂರು: ಮುತ್ತೈದೆಯರಿಗೆ ಬಾಗಿನ ಕೊಡುವ ನೆಪದಲ್ಲಿ ಅರ್ಚಕರ ಪತ್ನಿಯರನ್ನು ಕರೆದೊಯ್ದು, ಅವರ ಚಿನ್ನಾಭರಣವನ್ನು ಲಪಟಾಯಿಸಿಕೊಂಡು ಹೋಗುತ್ತಿದ್ದ ಖತರ್ನಾಕ್‌ ಕಳ್ಳನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅರ್ಚಕರನ್ನು ಪರಿಚಯಿಸಿಕೊಂಡು ಬಳಿಕ ಪೂಜೆ ನೆಪದಲ್ಲಿ ಅವರ ಪತ್ನಿಯರನ್ನು ಕರೆದೊಯ್ದು ಚಿನ್ನಾಭರಣ, ಬೆಳ್ಳಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಇದೀಗ ಬೆಂಗಳೂರಿನ ರಾಜಾಜಿನಗರ ಠಾಣೆ ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕಳ್ಳ ಪ್ರವೀಣ್ ಭಟನನ್ನು ಅರೆಸ್ಟ್ ಮಾಡುವಲ್ಲಿ ರಾಜಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ದೇವಸ್ಥಾನದ ಅರ್ಚಕರ ಪತ್ನಿಯರೇ ಈ ಕಳ್ಳನ ಟಾರ್ಗೆಟ್ ಆಗಿದ್ದರು. ಅರ್ಚಕರನ್ನು ಪರಿಚಯ ಮಾಡಿಸಿಕೊಂಡು, ಅವರ ಪತ್ನಿಯರಿಗೆ ಬಾಗಿನ ಕೊಡುವ ನೆಪದಲ್ಲಿ ಕರೆದುಕೊಂಡು ಹೋಗಿ ನಂತರ ಕಳ್ಳ ತನ್ನ ಕೈಚಳಕ ತೋರಿಸುತ್ತಿದ್ದ.
ಮೊದಲು ನಗರದ ಪ್ರಸಿದ್ದ ದೇವಾಲಯಗಳಿಗೆ ಹೋಗಿ ಪ್ರವೀಣ್ ತಾನು ಶ್ರೀಮಂತ ಉದ್ಯಮಿ ಎಂದು ಹೇಳಿ ಅರ್ಚಕರನ್ನು ಪರಿಚಯ ಮಾಡಿಸಿಕೊಳ್ಳುತ್ತಿದ್ದ. ಆಗಾಗ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸುತ್ತಿದ್ದ. ನಂತರ ದೇಗುಲಕ್ಕೆ ಸಾವಿರಾರು ರೂಪಾಯಿ ದೇಣಿಗೆ ಕಾಣಿಕೆ ಕೊಡುತ್ತಿದ್ದ. ಈ ಮೂಲಕ ಅಲ್ಲಿರುವ ಅರ್ಚಕರಿಗೆ ಹತ್ತಿರವಾಗಿ ವಂಚನೆಗೆ ಪ್ಲಾನ್ ಮಾಡುತ್ತಿದ್ದ.
ನಂತರ ನಮ್ಮ ಹೊಸ ಅಂಗಡಿ ಓಪನ್ ಮಾಡುತ್ತಿದ್ದೇವೆ. ಪೂಜೆ ಮಾಡಿ ಮುತ್ತೈದೆಯರಿಗೆ ಬಾಗಿನ ಕೊಡಬೇಕು. ಅದಕ್ಕಾಗಿ ನಿಮ್ಮ ಮನೆಯವರನ್ನು ಕಳುಹಿಸಿ ಕೊಡಿ ಎಂದು ಕೇಳಿಕೊಳ್ಳುತ್ತಿದ್ದ. ಪ್ರವೀಣ್‌ ಮಾತನ್ನು ನಂಬಿ ಅರ್ಚಕರು ತಮ್ಮ ಪತ್ನಿಯರನ್ನು ಕಳುಹಿಸಿ ಕೊಡುತ್ತಿದ್ದರು. ಬಳಿಕ ಆಟೋದಲ್ಲಿ ನೀವು ಹೋಗೋ ಜಾಗಕ್ಕೆ ಒಡವೆ ಎಲ್ಲ ಹಾಕಬೇಡಿ ಅಂತ ಹೇಳುತ್ತಿದ್ದ. ಒಡವೆಗಳನ್ನು ನನ್ನ ಬಳಿ ಕೊಡಿ, ಬಳಿಕ ಎಲ್ಲವನ್ನು ಆಮೇಲೆ ಕೊಡುವುದಾಗಿ ಹೇಳುತ್ತಿದ್ದ.
ನಂತರ ಆತ ಆಟೋದಿಂದ ಇಳಿದು ಮಾರ್ಕೆಟ್ ಬೀದಿಗಳಲ್ಲಿ ಸುತ್ತಾಡಿಸುತ್ತಿದ್ದ. ಈ ವೇಳೆ ಮಹಿಳೆಯರನ್ನು ಅರ್ಧ ದಾರಿಯಲ್ಲೇ ಬಿಟ್ಟು ಪ್ರವೀಣ ಅಲ್ಲಿಂದ ಪರಾರಿಯಾಗುತ್ತಿದ್ದ. ಈ ಪ್ರಕರಣ ಸಂಬಂಧ ಅರ್ಚಕರ ಕುಟುಂಬವೊಂದು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರವೀಣ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 15 ಲಕ್ಷ ರೂ. ಮೌಲ್ಯದ 116 ಗ್ರಾಂ ಚಿನ್ನ 409 ಗ್ರಾಂ ಬೆಳ್ಳಿ ಜಪ್ತಿ ಮಾಡಲಾಗಿದೆ. ಈತ 5 ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದ್ದು, ಹೆಬ್ಬಾಳ, ರಾಮಮೂರ್ತಿ ನಗರ, ಸಿಟಿ ಮಾರ್ಕೆಟ್, ರಾಜಾಜಿನಗರ ಹಾಗು ಸಿ ಕೆ ಅಚ್ಚುಕಟ್ಟು ಠಾಣೆಯಲ್ಲಿ ಆರೋಪಿ ಪ್ರವೀಣ್ ವಿರುದ್ಧ ಕೆಎಸ್ ಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.