2026-04-24 02:54:11

Sudharani desired to marry Shivanna|ಶಿವಣ್ಣನ ಮದುವೆಯಾಗಬೇಕೆಂದು ಆಸೆ ಪಟ್ಟಿದ್ರಾ ಸುಧಾರಾಣಿ|Speed News Kannada

Sudharani desired to marry Shivanna|ಶಿವಣ್ಣನ ಮದುವೆಯಾಗಬೇಕೆಂದು ಆಸೆ ಪಟ್ಟಿದ್ರಾ ಸುಧಾರಾಣಿ|Speed News Kannada

ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ, AI ಸೃಷ್ಟಿಯ ತಪ್ಪು ಮಾಹಿತಿಯಿಂದ ಸೆಲೆಬ್ರಿಟಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ನಟಿ ಸುಧಾರಾಣಿ ಕೂಡ ತಮ್ಮ ಬಗ್ಗೆ ಹರಡಿದ 'ಫೇಕ್ ನ್ಯೂಸ್' ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೂಟ್ಯೂಬರ್ಗಳು ವೀವ್ಸ್ಗಾಗಿ ಸೆಲೆಬ್ರಿಟಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಕಥೆಗಳನ್ನು ಸೃಷ್ಟಿಸುತ್ತಿದ್ದು, ಇದು ಅವರ ವ್ಯಕ್ತಿತ್ವಕ್ಕೆ ಹಾನಿ ಉಂಟುಮಾಡುತ್ತಿದೆ. ಇತ್ತೀಚೆಗೆ ಕೆಲ ಯೂಟ್ಯೂಬರ್ಗಳು ವೀವ್ಸ್ ಪಡೆಯಲು ಹೊಸ ತಂತ್ರವೊಂದನ್ನು ಕಂಡುಹಿಡಿದ್ದಾರೆ. ಸೆಲೆಬ್ರಿಟಿಗಳು ಹೇಳದೇ ಇರುವ ವಿಷಯವನ್ನು, ಅವರು ಸಂದರ್ಶನದಲ್ಲಿ ಹೇಳಿದ್ದಾರೆ’ ಎಂದು ಸೇರಿಸಿ ಸೃಷ್ಟಿಸುತ್ತಿದ್ದಾರೆ. ಇದರಿಂದ ಯೂಟ್ಯೂಬರ್ಗಳಿಗೆ ವೀವ್ಸ್ ಆಗುತ್ತಿರೋದು ನಿಜ. ಆದರೆ, ಸೆಲೆಬ್ರಿಟಿಗಳ ಹೆಸರು ಹಾಳಾಗುತ್ತಿದೆ. ಸುಧಾರಾಣಿ ಬಗ್ಗೆಯೂ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.

ಯಾವುದು ಸುಳ್ಳು-ಯಾವುದು ನಿಜ? ಯಾವುದು ಎಐ-ಯಾವುದು ನಿಜವಾಗಲೂ ನಡೆದ ಘಟನೆ ಎಂನ್ನೋದನ್ನು ಪತ್ತೆ ಹಚ್ಚಲು ಅಸಾಧ್ಯ ಎಂಬ ರೀತಿಯ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಮಧ್ಯೆ ಸೆಲೆಬ್ರಿಟಿಗಳ ಹೆಸರನ್ನು ಬಳಕೆ ಮಾಡಿಕೊಂಡು ಅನೇಕರು ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಇಲ್ಲ, ಸಲ್ಲದ್ದನ್ನುಅಪಾಪ್ರಚರ ಮಾಡುತ್ತಯಿದ್ದರೆ. ನಟಿ ಸುಧಾರಾಣಿ ಕೂಡ ಈ ರೀತಿಯ ಫೇಕ್ ನ್ಯೂಸ್ಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಯೂಟ್ಯೂಬ್ ಥಂಬ್ನೇಲ್ ಮಾದರಿಯ ಸ್ಕ್ರೀನ್ಶಾಟ್ ಅನ್ನು ಸುಧಾರಾಣಿ ಹಂಚಿಕೊಂಡಿದ್ದಾರೆ. ‘ಶಿವಣ್ಣನನ್ನು ಮದುವೆಯಾಗಬೇಕೆಂದು ಆಸೆ ಪಟ್ಟಿದ್ದರು ಸುಧಾರಾಣಿ. ಆನಂದ್ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟಿ ಸುಧಾರಾಣಿ ಅವರಿಗೆ ಶಿವರಾಜ್ ಕುವಾರ್ ಕಂಡರೆ ಭಯವಿತ್ತು. ನಂತರ ಅವರ ಮೇಲೆ ಪ್ರೀತಿ ಹುಟ್ಟಿತು ಮತ್ತು ಮದುವೆಯಾಗುವ ಆಸೆಯೂ ಇತ್ತು. ಆದರೆ ಡಾ. ರಾಜ್‌ಕುಮಾ‌ರ್ ಅವರ ಮಗ ಎಂಬ ಕಾರಣದಿಂದ ಅವರು ಇದನ್ನು ಯಾರಿಗೂ ಹೇಳದೆ ಸುಮ್ಮನಾಗಿದ್ದರು. ಈ ವಿಷಯವನ್ನು ಅವರು ಇತ್ತೀಚಿನನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಸುಧಾರಾಣಿ ಅವರು ಇದಕ್ಕೆ ಉತ್ತರ ಕೊಟ್ಟಿದ್ದಾರೆ. ತಾವು ಮನೆಯಲ್ಲಿ ಸಾಕಿದ ಶ್ವಾನಗಳು ಈ ವಿಷಯಕ್ಕೆ ಸ್ಪಷ್ಟನೆ ಕೊಡುವ ರೀತಿಯಲ್ಲಿ ಅವರು ವಿಡಿಯೋ ಮಾಡಿದ್ದಾರೆ. ಇದು ಫೇಕ್ ನ್ಯೂಸ್. ಅಲ್ಲದೆ, ಈ ರೀತಿಯ ವಿಡಿಯೋ ಮಾಡಿದರೆ ಕೇಸ್ ದಾಖಲಿಸುವ ಎಚ್ಚರಿಕೆಯನ್ನೂ ನೀಡಿದ್ದರೆ. ಕಂಡ ಕಂಡವರೆಲ್ಲ ವಿಡಿಯೋ ಮಾಡೋಕೆ ಆರಂಭಿಸಿದರೆ ಈ ರೀತಿ ಆಗುತ್ತದೆ ಎಂದು ಸುಧಾರಾಣಿ ಅವರು ತೀರುಗೆಟು ಕೋಟಿದ್ದರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.