2026-04-23 11:02:19

Shakti Yojana name is a scam of crores by BMTC administrators|ಶಕ್ತಿ ಯೋಜನೆ ಹೆಸರು ಬಿಎಂಟಿಸಿ ನಿರ್ವಾಹಕರಿಂದ ಕೋಟ್ಯಂತರ ದಂಧೆ|Speed News Kannada

Shakti Yojana name is a scam of crores by BMTC administrators|ಶಕ್ತಿ ಯೋಜನೆ ಹೆಸರು ಬಿಎಂಟಿಸಿ ನಿರ್ವಾಹಕರಿಂದ ಕೋಟ್ಯಂತರ ದಂಧೆ|Speed News Kannada

ರಾಜ್ಯ ಸರ್ಕಾರದ ಬಹು ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಇದೀಗ ವಿವಾದದ ಕೇಂದ್ರಬಿಂದುವಾಗುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಈ ಯೋಜನೆಯನ್ನು ಕೆಲ ಬಿಎಂಟಿಸಿ ನಿರ್ವಾಹಕರು ದುರುಪಯೋಗ ಮಾಡಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ. ಕೋಟ್ಯಾಂತರ ರೂಪಾಯಿ ದಂಧೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈಗಾಗಲೇ ನಾಲ್ವರು ನಿರ್ವಾಹಕರನ್ನು ಅಮಾನತು ಮಾಡಲಾಗಿದೆ.

ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಉದ್ದೇಶದಿಂದ ಜಾರಿಗೆ ತಂದ ಶಕ್ತಿ ಯೋಜನೆಯನ್ನು ಕೆಲ ನಿರ್ವಾಹಕರು ಹಣ ಗಳಿಸುವ ಮಾರ್ಗವನ್ನಾಗಿ ಮಾಡಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ವಿಶೇಷವಾಗಿ ಕನ್ನಡ ಮಾತನಾಡಲು ಬಾರದ ಪುರುಷ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು, ಅವರಿಗೆ ಉಚಿತ ಟಿಕೆಟ್ ನೀಡಿ ನಗದು ಅಥವಾ ಯುಪಿಐ ಮೂಲಕ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಇದಕ್ಕೆ ಸೇರಿ ಮತ್ತೊಂದು ದೊಡ್ಡ ಮೋಸವೂ ಬಯಲಾಗಿದೆ. ಬಿಎಂಟಿಸಿ ವತಿಯಿಂದ ಅಳವಡಿಸಲಾದ ಅಧಿಕೃತ QR ಕೋಡ್‌ಗಳನ್ನು ಬಳಸುವ ಬದಲು, ಕೆಲ ನಿರ್ವಾಹಕರು ತಮ್ಮದೇ ವೈಯಕ್ತಿಕ ಯುಪಿಐ QR ಕೋಡ್‌ಗಳನ್ನು ನೀಡುತ್ತಿದ್ದರೆಂಬ ಮಾಹಿತಿ ಹೊರಬಿದ್ದಿದೆ. ಪ್ರಯಾಣಿಕರು ಸ್ಕ್ಯಾನ್ ಮಾಡಿದ ಹಣ ನೇರವಾಗಿ ನಿರ್ವಾಹಕರ ವೈಯಕ್ತಿಕ ಖಾತೆಗಳಿಗೆ ಜಮೆಯಾಗುತ್ತಿತ್ತು.

ಬಸ್ ಹೊರಡುತ್ತಿದ್ದಂತೆಯೇ ಅಧಿಕೃತ QR ಕೋಡ್ ತೆಗೆದುಹಾಕಿ, ತಮ್ಮದೇ ಕೋಡ್ ಬಳಸಿ ಹಣ ಸಂಗ್ರಹಿಸುವ ಹೊಸ ತಂತ್ರವನ್ನೂ ಬಳಸಲಾಗುತ್ತಿತ್ತು ಎನ್ನಲಾಗಿದೆ.ಚೆಕಿಂಗ್ ಇನ್ಸ್ಪೆಕ್ಟರ್‌ಗಳ ತನಿಖೆಯಲ್ಲಿ 10ಕ್ಕೂ ಹೆಚ್ಚು ನಿರ್ವಾಹಕರು ಈ ದಂಧೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಪ್ರತಿ ಖಾತೆಯಲ್ಲಿ ಸಾವಿರಗಳಿಂದ ಲಕ್ಷಾಂತರದವರೆಗೆ ವಹಿವಾಟು ನಡೆದಿರುವುದು ಬಹಿರಂಗವಾಗಿದೆ.ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರು ನಿರ್ವಾಹಕರನ್ನು ಅಮಾನತು ಮಾಡಲಾಗಿದೆ.

 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.