ಭಾರತದ ಐಟಿ ದೈತ್ಯ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ತನ್ನ ನಾಸಿಕ್ ಕಚೇರಿಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕೇವಲ ಕೆಲಸದ ಕಿರುಕುಳ ಎಂದು ಆರಂಭವಾದ ದೂರುಗಳು ಈಗ ಅತ್ಯಾಚಾರ, ಮತಾಂತರದ ಸಂಚು ಮತ್ತು ಅಂತರರಾಷ್ಟ್ರೀಯ ಸಂಪರ್ಕಗಳಂತಹ ಭಯಾನಕ ಸ್ವರೂಪ ಪಡೆದುಕೊಂಡಿವೆ. ಧಾರ್ಮಿಕ ಕಿರುಕುಳ ನೀಡಿದ ಆರೋಪ, ಅಶ್ವಿನಿ ಚಿನಾನಿ (ಮಾಜಿ ಎಚ್‌ಆರ್ ಹೆಡ್): ದೂರು ನೀಡಲು ಬಂದವರನ್ನು ಹೆದರಿಸಿ, ಆರೋಪಿಗಳಿಗೆ ಸಾಥ್ ನೀಡಿದ ಆರೋಪ. ಉಳಿದಂತೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ ಹಿರಿಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ. ಸ್ತುತ ಎಂಟು ಉದ್ಯೋಗಿಗಳ ವಿರುದ್ಧ 9 ಎಫ್‌ಐಆರ್‌ಗಳು ದಾಖಲಾಗಿದ್ದು, ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದೆ. ದೌರ್ಜನ್ಯಕ್ಕೊಳಗಾದ ಇನ್ನೂ ಹೆಚ್ಚಿನ ಮಹಿಳೆಯರು ಅಥವಾ ಪುರುಷ ಉದ್ಯೋಗಿಗಳು ಇದ್ದಲ್ಲಿ, ಅವರು ಯಾವುದೇ ಭಯವಿಲ್ಲದೆ ಮುಂದೆ ಬಂದು ದೂರು ನೀಡುವಂತೆ ಪೊಲೀಸ್ ಆಯುಕ್ತರು ವಿನಂತಿಸಿದ್ದಾರೆ. ಕೆಲಸದ ಸ್ಥಳದ ಸುರಕ್ಷತೆಯ ಬಗ್ಗೆ ಈಗ ದೊಡ್ಡ ಮಟ್ಟದ ಆತಂಕ ಮೂಡಿದ್ದು, ಕಾರ್ಪೊರೇಟ್ ವಲಯದಲ್ಲಿ ಇಂತಹ ‘ಸಂಘಟಿತ ಮತಾಂತರ’ದ ಯತ್ನಗಳು ನಡೆಯುತ್ತಿರುವುದು ಬೆಚ್ಚಿಬೀಳಿಸುವಂತಿದೆ. ಟಿಸಿಎಸ್ ನಾಸಿಕ್ ಶಾಖೆಯು ಈಗ ಬಿಕೋ ಎನ್ನುತ್ತಿದೆ. ಒಂದು ಕಡೆ ಕಾನೂನು ಹೋರಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಐಟಿ ಕ್ಷೇತ್ರದ ಸುರಕ್ಷತೆಯ ಬಗ್ಗೆ ಜನರಲ್ಲಿ ಪ್ರಶ್ನೆಗಳು ಎದ್ದಿವೆ. ತನಿಖೆ ಮುಂದುವರೆದಂತೆ ಇನ್ನಷ್ಟು ಆಘಾತಕಾರಿ ಸತ್ಯಗಳು ಹೊರಬರುವ ಸಾಧ್ಯತೆಯಿದೆ.