2026-03-07 07:13:09

Sarjapur Incident | ಸರ್ಜಾಪುರದಲ್ಲಿ ಪ್ರೀತಿ ಹೆಸ್ರಲ್ಲಿ ನಡೀತಾ ಗ್ಯಾಂಗ್‌ರೇಪ್? ನಶೆ ಬರೋ ಮಾತ್ರೆ ಕೊಟ್ಟು ಕಾಮುಕರ ಅಟ್ಟಹಾಸ..! | SNK

Sarjapur Incident | ಸರ್ಜಾಪುರದಲ್ಲಿ ಪ್ರೀತಿ ಹೆಸ್ರಲ್ಲಿ ನಡೀತಾ ಗ್ಯಾಂಗ್‌ರೇಪ್?  ನಶೆ ಬರೋ ಮಾತ್ರೆ ಕೊಟ್ಟು ಕಾಮುಕರ ಅಟ್ಟಹಾಸ..! | SNK

ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚೆಗೆ ಕಾಮುಕರ ಅಟ್ಟಹಾಸ ಮಿತಿ ಮೀರಿದೆ. ಸೈಕಲ್‌ ಗ್ಯಾಂಪ್‌ನಲ್ಲಿ ಕಾಮಪಿಶಾಚಿಗಳು ತಮ್ಮ ಕಾಮತೃಷೆಯನ್ನ ತೀರಿಸಿಕೊಳ್ಳಲು ಕಾಯ್ತಿರ್ತಾರೆ. ಅಂಥದ್ರಲ್ಲಿ ನಿನ್ನನ್ನೇ ಪ್ರೀತಿಸುತ್ತೇನೆ.. ನಿನ್ನ ಬಿಟ್ಟಿರಕ್ಕಾಗಲ್ಲ ಅಂದ್ರೆ ಸುಮ್ನೆ ಬಿಡ್ತಾರಾ.. ಅಮಾಯಕ ಯುವತಿಗೆ ಆಕೆಯ ಸ್ನೇಹಿತರೇ ಗ್ಯಾಂಗ್‌ರೇಪ್‌ ನಡೆದಿರುವ ಆರೋಪ ಕೇಳಿ ಬಂದಿದೆ. ಪ್ರೀತಿಯ ಹೆಸರಲ್ಲಿ ಇಬ್ಬರು ಯುವಕರು ಅತ್ಯಾಚಾರ ಮಾಡಿದ್ದಾರೆ ಎಂದು ನೊಂದ ಯುವತಿ ಕಣ್ಣೀರಿಟ್ಟಿದ್ದಾರೆ. ನಿಖಿಲ್‌ ಹಾಗೂ ಡಿಕ್ಸನ್‌ ಎಂಬುವರ ಎಂಬುವರ ಜೊತೆ ಯುವತಿ ಉತ್ತಮ ಒಡನಾಟ ಇಟ್ಟುಕೊಂಡಿದ್ದಳು. ಆದ್ರೆ, ನೊಂದ ಯುವತಿ ಡಿಕ್ಸನ್‌ ಎಂಬಾತನನ್ನ ಪ್ರೀತಿಸುತ್ತಿದ್ದಳೆಂದು ತಿಳಿದು ಬಂದಿದೆ. ಈ ಬಗ್ಗೆ ಆತನ ಬಳಿಯೂ ಹೇಳಿಕೊಂಡಿದ್ದಳಂತೆ. ಆದ್ರೆ, ಈಕೆಯೊಂದಿಗಿದ್ದ ಕ್ಷಣಗಳನ್ನ ಕೇವಲ ಟೈಮ್‌ ಪಾಸ್‌ ಎಂದುಕೊಂಡಿದ್ದ ಯುವಕರು, ಯುವತಿಯ ಬಾಳಲ್ಲಿ ಆಟವಾಡಿದ್ದಾರೆ. 
ಈ ಹಿಂದೆ ಡಿಕ್ಸನ್‌ ಜೊತೆ ರಾಜನುಕುಂಟೆ ರೆಕ್ಸ್ ವಿಲ್ಲಾಗೆ ಹೋಗಿದ್ದಾಗ ಅತ್ಯಾಚಾರವೆಸಗಿರುವುದಾಗಿ ಯುವತಿ ಆರೋಪಿಸಿದ್ದಾರೆ. ನಶೆ ಹಾಗೂ ಮಾಧಕ ಮಾತ್ರೆಗಳನ್ನು ನೀಡಿ ವೆಸ್ಟ್ ಬೆಂಗಾಲ್ ಮೂಲದ ಡಿಕ್ಸಿನ್ ಹಾಗೂ ಸಕಲೇಶಪುರದ ಮೂಲದ ನಿಖಿಲ್ ಅತ್ಯಾಚಾರವೆಸಗಿದ್ದಾರೆ ಎಂದು ನೊಂದ ಯುವತಿ ಕಣ್ಣೀರಿಟ್ಟಿದ್ದಾಳೆ.
ಗ್ಯಾಂಗ್‌ರೇಪ್‌ವೆಸಗಿದ ಬಳಿಕ ಯುವತಿ ಮೇಲೆ ಹಲ್ಲೆ ಮಾಡಿದ್ದಾಗಿಯೂ ಆರೋಪಿಸಿದ್ದಾಳೆ. ತುಂಬಾ ಕ್ರೂರವಾಗಿ ವರ್ತಿಸಿದ್ದಾರೆ ಎಂದು 19ವರ್ಷದ ಯುವತಿ ಕಣ್ಣೀರಿಟ್ಟಿದ್ದಾಳೆ. ಪ್ರೀತಿ ಹೆಸರಲ್ಲಿ ಯುವತಿಯ ಬಾಳಲ್ಲಿ ಆಟವಾಡಿರುವ ನಿಖಿಲ್‌ ಹಾಗೂ ಡಿಕ್ಸನ್‌ ವಿರುದ್ಧ ಯುವತಿ ದೂರು ದಾಖಲಿಸಿದ್ದಾಳೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.